September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜ.11ರಂದು ಮಹೇಶ್ ಶೆಟ್ಟಿ ತಿಮರೋಡಿಗೆ ನ್ಯಾಯಾಲಯಕ್ಕೆ ಹಾಜರಾಗಲು ಕೋರ್ಟ್ ಆದೇಶ

ಬೆಳ್ತಂಗಡಿ: ನ್ಯಾಯಾಂಗ ನಿಂದನೆ ಆರೋಪದಡಿ ಬೆಳ್ತಂಗಡಿಯ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಪತ್ನಿ ಸರೋಜಾರವರಿಗೆ ಜ.11ರಂದು ಪುನಃ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಲು ಹೈಕೋರ್ಟ್ ನಿರ್ದೇಶನ ನೀಡಿದೆ.

ಬಬ್ಬುಕಟ್ಟೆ ಉಜಿರೆ ನಿವಾಸಿ ಜಯಪ್ರಕಾಶ ಶೆಟ್ಟಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ಹಿರಿಯ ನ್ಯಾ.ಪಿ.ಎಸ್.ದಿನೇಶ್ ಕುಮಾರ್ ಹಾಗೂ ನ್ಯಾ.ಟಿ.ಜಿ.ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತು. ಆಗ ಹಿಂದಿನ ನಿರ್ದೇಶನದಂತೆ ತಿಮರೋಡಿ ದಂಪತಿ ಹಾಜರಾಗಿದ್ದರು. ನ್ಯಾಯಾಲಯ ಇಬ್ಬರ ಹಾಜರಾತಿ ದಾಖಲಿಸಿಕೊಂಡು, ಸಮಯದ ಅಭಾವದ ಕಾರಣ ವಿಚಾರಣೆ ನಡೆಸದೆ ಮುಂದಿನ ಗುರುವಾರ ಪುನಃ ಹಾಜರಾಗಲು ಸೂಚನೆ ನೀಡಿ ವಿಚಾರಣೆ ಮುಂದೂಡಿತು.

ಮಹೇಶ್ ಶೆಟ್ಟಿ ತಿಮರೋಡಿ ಜಮೀನು ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್‌ಲ್ಲಿ ತಕರಾರು ಅರ್ಜಿ ಸಲ್ಲಿಸಲಾಗಿತ್ತು. ಅದರ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಒತ್ತುವರಿ ಜಾಗ ತೆರವುಗೊಳಿಸಲು 2019ರ ಜು.18ರಂದು ಆದೇಶಿಸಿತ್ತು. ಅದರಂತೆ ಉಜಿರೆ ಪಿಡಿಒ ಸ್ಥಳಕ್ಕೆ ಭೇಟಿ ನೀಡಿದ್ದಾಗ ಹೈಕೋರ್ಟ್ ನ್ಯಾಯಮೂರ್ತಿಗಳ ಬಗ್ಗೆ ಮಹೇಶ್‌ ಶೆಟ್ಟಿ ತಿಮರೋಡಿ ನಿಂದನಾತ್ಮಕವಾಗಿ ಮಾತನಾಡಿದ್ದರು. ನ್ಯಾಯಾಲಯದ ಆದೇಶ ಪಾಲಿಸದ ಹಾಗೂ ನ್ಯಾಯಮೂರ್ತಿಗಳ ಕುರಿತು ನಿಂದನೆ ಮಾಡಿದ ಆರೋಪದಲ್ಲಿ ತಿಮರೋಡಿ ವಿರುದ್ದ ನ್ಯಾಯಾಂಗ ನಿಂದನೆ ದಾವೆ ಹೂಡಲಾಗಿದೆ.

Related posts

ಜ 7: ಪೆರಾಡಿ ಮಾವಿನಕಟ್ಟೆಯಲ್ಲಿ 50ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವ

Suddi Udaya

ದ.ಕ. ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸತೀಶ್ ಕುಂಪಲ ಆಯ್ಕೆ

Suddi Udaya

ಕೇಳ್ತಾಜೆ ಉಮರುಲ್ ಫಾರೂಕ್ ಜುಮಾ ಮಸ್ಜಿದ್ ಮತ್ತು ಸಿರಾಜುಲ್ ಹುದಾ ಮದರಸದಲ್ಲಿ ಬಕ್ರೀದ್ ಆಚರಣೆ

Suddi Udaya

ನೆಲ್ಯಾಡಿ ಸೆಂಟ್ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಲೆಫ್ಟಿನೆಂಟ್ ಕರ್ನಲ್ ವಿನೋಜ್ ಪಿ.ಜೆ. ಅವರಿಗೆ ಗೌರವ ಸಮರ್ಪಣೆ

Suddi Udaya

ವೇಣೂರು: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಟೆಂಪೋ ಟ್ರಾವೆಲರ್ ಡಿಕ್ಕಿ; ಚಿಕಿತ್ಸೆಗೆ ಸ್ಪಂದಿಸದೆ ಮೃತ್ಯು

Suddi Udaya

ಕಳೆಂಜ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಜನಸ್ಪಂದನ ಸಭೆ

Suddi Udaya
error: Content is protected !!