37.9 C
ಪುತ್ತೂರು, ಬೆಳ್ತಂಗಡಿ
March 6, 2026
ಆರೋಗ್ಯ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನ ಬೆಳ್ತಂಗಡಿಯಲ್ಲಿ ನಡೆದಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ 48 ದಿನಗಳ ಉಚಿತ ಯೋಗ ತರಗತಿ ಉದ್ಘಾಟನೆ

ಬೆಳ್ತಂಗಡಿ :ವಿಶ್ವದಲ್ಲಿ ಇಂದು ವೈದ್ಯಕೀಯ ಕ್ಷೇತ್ರವು ಕ್ಷಿಪ್ರ ಬದಲಾವಣೆ ಹೊಂದುತ್ತಿದೆ. ಆಧುನಿಕ ಜಗತ್ತಿನಲ್ಲಿ ಹೊಸ ಹೊಸ ಮಾನಸಿಕ ಕಾಯಿಲೆಗಳ ನಿಯಂತ್ರಣಕ್ಕೆ ಯೋ ಗ ಶಿಕ್ಷಣ ಪರಿಣಾಮಕಾರಿ* ಎಂದು ಯೋಗದ ಮಹತ್ವದ ಕುರಿತು ಬೆಳ್ತಂಗಡಿಯ ವೈದ್ಯರಾದ ಡಾ.ಸುಧೀರ್ ಪ್ರಭುಅವರು ಹೇಳಿದರು.


ಇತ್ತೀಚೆಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನ ಬೆಳ್ತಂಗಡಿಯಲ್ಲಿ ನಡೆದ
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ 48 ದಿನಗಳ ಉಚಿತ ಯೋಗ ತರಗತಿಯನ್ನು ಉದ್ಘಾಟಿಸಿ ಇವರು ಮಾತನಾಡುತ್ತಿದ್ದರು.


SPYSS ನ ಜಿಲ್ಲಾ ಸಂಚಾಲಕರಾದ ಶ್ರೀಯುತ ನಾರಾಯಣ* ರವರು ಕಳೆದ 45 ವರ್ಷಗಳಿಂದ ಸಮಿತಿ ಬೆಳೆದು ಬಂದ ದಾರಿ, ಉದ್ದೇಶ, ಸಾಧನೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡುತ್ತಾ,ಇಲ್ಲಿ ನೀಡುವ ಶಿಕ್ಷಣ ಕೇವಲ ಆಸನ ಅಭ್ಯಾಸಗಳ ಕಸರತ್ತು ಅಲ್ಲ, ಅದು ಜೀವನಶೈಲಿ. ಸಂಶೋಧನಾತ್ಮಕವಾಗಿ ರೂಪಿಸಿದ ಪಠ್ಯಕ್ರಮದಂತೆ ನುರಿತ ಶಿಕ್ಷಕರಿಂದ ತರಬೇತಿ ನೀಡಲಾಗುವುದು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೋಗ ಬಂಧು ಶ್ರೀಯುತ ಸಂತೋಷ ರವರು ಎಸ್. ಪಿ. ವೈ .ಎಸ್. ಎಸ್. ನೀಡುತ್ತಿರುವ ಪಂಚಮುಖಿ ಶಿಕ್ಷಣದಿಂದ ತಮ್ಮ ಶಾರೀರಿಕ ಮಾನಸಿಕ ಕೌಟುಂಬಿಕ ಸಾಮಾಜಿಕ ಆಧ್ಯಾತ್ಮಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದುಎಂದು ಹೇಳಿದರು.
ಈ ಸರಳ ಸುಂದರ ಕಾರ್ಯಕ್ರಮದಲ್ಲಿ ಯೋಗ ಬಂಧುಗಳಾದ ಶ್ರೀಮತಿ ಅಶ್ವಿನಿ ಪ್ರಾರ್ಥಿಸಿ, ಶ್ರೀಮತಿ ಕೋಮಲ ರವರು ಸ್ವಾಗತಿಸಿದರು. ಶ್ರೀಯುತ ಗಣೇಶ್ ಪ್ರಸಾದ್ ಅವರು ಹೊಸ ಯೋಗ ಬಂಧು ಗಳಿಗೆ ಸೂಚನೆಗಳನ್ನು ನೀಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಶಶಿಕಲಾ ನಡೆಸಿಕೊಟ್ಟರು ಸುಕೇಶ್ ವಂದಿಸಿದರು . ಯೋಗ ಶಿಕ್ಷಕಿ ಪ್ರೇಮಲತಾ ಗಣೇಶ್ ಸಹಕರಿಸಿದರು. ತಾಲೂಕು ಜಿಲ್ಲೆ ಹಾಗೂ ಪ್ರಾಂತ ಪ್ರಮುಖರು ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.

Related posts

ಹೊಸಂಗಡಿ: ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ

Suddi Udaya

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಕಕ್ಕಿಂಜೆ ಶಾಖೆಯ ದಶಮಾನೋತ್ಸವದ ಪ್ರಯುಕ್ತ ಬೃಹತ್ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಸ್ತ್ರೀರೋಗ ಮತ್ತು ಬಂಜೆತನ ತಪಾಸಣೆ

Suddi Udaya

ಉಜಿರೆ ಎಸ್ ಡಿ ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಾಧನೆ: ವಿಶ್ವದ ಮೊದಲ ಸಂಪೂರ್ಣ ಬೆನ್ನುಮೂಳೆಯ ಗೆಡ್ಡೆ ತೆರೆವು ಶಸ್ತ್ರಚಿಕಿತ್ಸೆ

Suddi Udaya

ನಿಡ್ಲೆ: ನರೇಗಾ ಯೋಜನೆಯ ಕೂಲಿಕಾರರಿಗೆ ಆರೋಗ್ಯ ತಪಾಸಣೆ

Suddi Udaya

ರೋಗಿಗಳ ಪಾಲಿನ ಭರವಸೆಯ ಹೊಂಗಿರಣ ಡಾ. ಪ್ರಭಾಚಂದ್ರ

Suddi Udaya
error: Content is protected !!