September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ವೇಣೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಖೋ ಖೋ ಪಂದ್ಯಾಟ

ವೇಣೂರು : ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ವೇಣೂರು ಇಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ 17ರ ವಯೋಮಾನದ ಬಾಲಕ ಮತ್ತು ಬಾಲಕಿಯರ ಖೋ ಖೋ ಪಂದ್ಯಾಟ ನಡೆದಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಮಲ್ಲಿಕಾ ಕೆ ಹೆಗ್ಡೆ ವಹಿಸಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್ ಡಿ ಎಂ ಸಿ ಉಪಾಧ್ಯಕ್ಷ ರಾಜೇಶ್ ಪೂಜಾರಿ ಮೂಡುಕೋಡಿ ನೆರವೇರಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭಾಸ್ಕರ್ ಪೈ ,ಸಿ ಎ ಬ್ಯಾಂಕ್ ವೇಣೂರು ಇಲ್ಲಿನ ಅಧ್ಯಕ್ಷ ಸುಂದರ್ ಹೆಗ್ಡೆ ,ರೋಟರಿ ಕ್ಲಬ್ ಸಿದ್ದಕಟ್ಟೆ ಅಧ್ಯಕ್ಷ ರೊ .ದುರ್ಗಾದಾಸ್ ಶೆಟ್ಟಿ, ಲಯನ್ಸ್ ಕ್ಲಬ್ ವೇಣೂರು ಇದರ ಅಧ್ಯಕ್ಷ ಲ. ಸುದೀರ್ ಭಂಡಾರಿ, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ತಾರಾ ಕೇಸರಿ, ಗಣೇಶ್ ನಾರಾಯಣ ಪಂಡಿತ್ ಮೂಡುಕೋಡಿ , ಮೋಹನ್ ದಾಸ್ ಹೆಗ್ಡೆ ವೇಣೂರು ಸುಜಯ ದೈ.ಶಿ.ಶಿ ಪರಿವೀಕ್ಷಕರು ಗಂಗಾಧರ್ ಪ್ರಾಂಶುಪಾಲರು ಶಿವಶಂಕರ್ ಭಟ್ ನಿವೃತ್ತ ಮುಖ್ಯೋಪಾಧ್ಯಾಯರು ಅಂಡಿಂಜೆ ಉಪಸ್ಥಿತರಿದ್ದರು .

ಖೋ ಖೋ ಅಂಕಣದ ಉದ್ಘಾಟನೆಯನ್ನು ಭಾಸ್ಕರ್ ಪೈ ನೆರವೇರಿಸಿಕೊಟ್ಟರು. ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರು ಸ್ವಾಗತಿಸಿ, ಕನ್ನಡ ಅಧ್ಯಾಪಕ ರವೀಂದ್ರ ಕೆ ವಂದಿಸಿದರು. ಸುಶೀಲ ಜಿ ಕಾರ್ಯಕ್ರಮ ನಿರೂಪಿಸಿದರು. ಬೆಳ್ತಂಗಡಿ ತಾಲೂಕು ಮಟ್ಟದ ಖೋ ಖೋ ಪಂದ್ಯಾಟದಲ್ಲಿ ಹುಡುಗಿಯರ ವಿಭಾಗದಲ್ಲಿ ಸರ್ಕಾರಿ ಪ್ರೌಢಶಾಲೆ ಅಳದಂಗಡಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

Related posts

ವಿಧಾನಸಭಾ ಚುನಾವಣೆಗೆ ಪಕ್ಷೇತರರಾಗಿ ಮಹೇಶ್ ನಾಮಪತ್ರ

Suddi Udaya

ಕೊಕ್ಕಡ: ಹೊಸೊಕ್ಲುವಿನಲ್ಲಿ ಬೃಹತ್ ಗಾತ್ರದ ಶಂಖಪಾಲ ಹಾವು ಪತ್ತೆ

Suddi Udaya

ತುಳು ಹಾಗೂ ಜವಾರಿ ಭಾಷೆಯಲ್ಲಿ ಹಾಲಿವುಡ್‌ ಸಿನಿಮಾಗಳ ವೈಭವ:ಕನ್ನಡಿಗರ ‘ಟಾಕೀಸ್’ ಆ್ಯಪ್ ಓಟಿಟಿಯಿಂದ ಹೊಸ ಇತಿಹಾಸ

Suddi Udaya

ಉಜಿರೆ: ವರ್ತಕರ ಸಂಘದ ನೂತನ ಅಧ್ಯಕ್ಷ ಪ್ರಸಾದ್ ಬಿಎಸ್ ಮತ್ತು ತಂಡದ ಪದಪ್ರದಾನ ಹಾಗೂ ಕುಟುಂಬ ಮಿಲನ ಕಾರ್ಯಕ್ರಮ

Suddi Udaya

ಸೆ.28 : ತಾಲೂಕು ಮಟ್ಟದ ದಸರಾ ಕ್ರೀಡಾ ಕೂಟ

Suddi Udaya

ಧರ್ಮಸ್ಥಳ: ಕಾಲೇಜು ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ

Suddi Udaya
error: Content is protected !!