25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸೆ.12 : ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಿರುದ್ಯೋಗಿ ವಿಕಲಚೇತನರ ಉದ್ಯೋಗ ಪೂರ್ವ ಕೌಶಲ್ಯ ಶಿಬಿರ- ಉದ್ಯೋಗ ಆಯ್ಕೆ

ಬೆಳ್ತಂಗಡಿ: ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಮತ್ತು ತಾಲೂಕು ಪಂಚಾಯತ್ ಬೆಳ್ತಂಗಡಿ ಹಾಗೂ MRW, URW, VRW ಇವರುಗಳ ಸಹಯೋಗದೊಂದಿಗೆ ಜಿಲ್ಲೆಯ ಯುವ ನಿರುದ್ಯೋಗಿ ವಿಕಲಚೇತನ ಉದ್ಯೋಗಾಂಕ್ಷಿಗಳಿಗೆ ಸೆ.12 ರಂದು ಬೆಳಿಗ್ಗೆ 10 ಗಂಟೆಗೆ ಅಂಬೇಡ್ಕರ್ ಭವನ ಬೆಳ್ತಂಗಡಿಯಲ್ಲಿ ಉದ್ಯೋಗ ಪೂರ್ವ ನೋಂದಾಯಿಸುವ ಪ್ರಕ್ರೀಯೆ ಮತ್ತು ಸ್ವ-ಉದ್ಯೋಗ ಮಾಡಲು ಇಚ್ಚಿಸುವ ವಿಕಲಚೇತನ ಅಭ್ಯರ್ಥಿಗಳ ಆಯ್ಕೆಯ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತಾಲೂಕಿನ ಗ್ರಾಮೀಣ 18 ರಿಂದ 38 ವರ್ಷದೊಳಗಿನ ನಿರುದ್ಯೋಗಿ ವಿಕಲಚೇತನರು ಗುರುತಿನ ಚೀಟಿ, ಆಧಾರ್ ಕಾರ್ಡ್ ಹಾಗೂ ಶೈಕ್ಷಣಿಕ ದಾಖಲಾತಿಗಳ ಪ್ರತಿಗಳೊಂದಿಗೆ ಶಿಬಿರದಲ್ಲಿ ಭಾಗವಹಿಸುವುದರೊಂದಿಗೆ, ಸ್ಥಳೀಯ ಉದ್ಯೋಗಾವಕಾಶವನ್ನು ಪಡೆದುಕೊಳ್ಳಬಹುದಾಗಿದೆ.

ವಿಕಲಚೇತನರಿಗೆ ಅಸೋಸಿಯೇಷನ್ ಫಾರ್ ಪೀಪಲ್ ವಿತ್ ಡಿಸೆಬಿಲಿಟಿ (APD) ಸಂಸ್ಥೆಯು ₹10,000 ರಿಂದ ₹50,000 ರವರೆಗೆ ಉದ್ಯಮ ಬೆಂಬಲವನ್ನು ನೀಡಲಿದೆ.
ಅರ್ಹತಾ ಮಾನದಂಡಗಳು: ವಯಸ್ಸು: 18 ರಿಂದ 35 ವರ್ಷ,
ಶಿಕ್ಷಣ: ಕನಿಷ್ಟ ಹತ್ತನೇ ತರಗತಿ ಉತ್ತೀರ್ಣ, APD ಕೊಡುಗೆ: ಗರಿಷ್ಠ ರೂ.50,000, ಇಚ್ಛೆ: ಸ್ವಂತ ಉದ್ಯಮ ಪ್ರಾರಂಭಿಸಲು ನಿಜವಾದ ಆಸಕ್ತಿ ಇರಬೇಕು. ಆಸಕ್ತ ಅಭ್ಯರ್ಥಿಗಳು 12.09.2025ರಂದು ಸ್ಥಳಕ್ಕೆ ಬಂದು ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ 9535225693 ಸಂಪರ್ಕಿಸಬಹುದು.

Related posts

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕರಾಟೆ ಸ್ಪರ್ಧೆ

Suddi Udaya

ನಾಳೆ ಎ.21 ದ್ವೀತಿಯ ಪಿಯುಸಿ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟ

Suddi Udaya

ಮುಂಡಾಜೆ ಪ್ರೌಢಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮ

Suddi Udaya

ಮರೋಡಿ ಗ್ರಾ.ಪಂ. ಮಾಜಿ ಸದಸ್ಯ ಗಂಗಯ್ಯ ಪೂಜಾರಿ ನಿಧನ

Suddi Udaya

ಚಾರ್ಮಾಡಿ: ಕೊಟ್ರಬೆಟ್ಟು ನಿವಾಸಿ ಕೃಷಿಕ ಪದ್ಮಯ್ಯ ಗೌಡ ನಿಧನ

Suddi Udaya

ಬೆಳ್ತಂಗಡಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ವತಿಯಿಂದ 78ನೇ ವಷ೯ದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!