September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ:ಸೌತಡ್ಕ ದಿವ್ಯಾಂಗರ ಪುನಶ್ಚೇತನ ಕೇಂದ್ರದಿಂದ ಹತ್ತಿಯಿಂದ ಬತ್ತಿ ಮಾಡುವ ಯಂತ್ರ ವಿತರಣೆ

ಬೆಳ್ತಂಗಡಿ: ಕೊಲ್ಲೂರು ಗ್ರಾಮದ ಭವಾನಿಶಂಕರ್ ಟಿ ಕೆ ರವರು ರಸ್ತೆ ಅಪಘಾತದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾಗಿದ್ದು ಮೂರು ವರ್ಷಗಳ ಕಾಲ ಹಾಸಿಗೆಯಲ್ಲಿ ಮಲಗಿ ದಿನವನ್ನು ಕಳೆದ ವ್ಯಕ್ತಿ ನಂತರ ಒಂದು ತಿಂಗಳ ಕಾಲ ಸೌತಡ್ಕದ ಸೇವಾಧಾಮದಲ್ಲಿ ಪುನಶ್ಚೇತನವನ್ನು ಪಡೆದುಕೊಂಡು ತನ್ನ ಕೆಲಸವನ್ನು ತಾನು ಮಾಡಿಕೊಳ್ಳುವಷ್ಟು ಸಬಲರಾಗಿದ್ದಾರೆ.

ಹತ್ತಿಯಿಂದ ಬತ್ತಿ ಮಾಡುವ ಯಂತ್ರದ ಮೂಲಕ ಸ್ವ- ಉದ್ಯೋಗವನ್ನು ಮಾಡುತ್ತ ಜೀವನವನ್ನು ರೂಪಿಸಿಕೊಳ್ಳಲು ಮುಂದಾಗಿದ್ದು ಈ ನಿಟ್ಟಿನಲ್ಲಿ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ ಸೇವಾಧಾಮ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರ ಸೌತಡ್ಕದಲ್ಲಿ ಸಂಸ್ಥೆಯ ಪರವಾಗಿ ಹತ್ತಿಯಿಂದ ಬತ್ತಿ ಮಾಡುವ ಯಂತ್ರವನ್ನು ಹಸ್ತಾಂತರಿಸಲಾಯಿತು.

Related posts

ಮುಂಡಾಜೆ ಯಂಗ್ ಚಾಲೆಂಜರ್ಸ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

Suddi Udaya

ಶಾಂತಿಶ್ರೀ ‘ ಜೈನ ಮಹಿಳಾ ಸಮಾಜದ ವತಿಯಿಂದ, ‘ ಶೈಕ್ಷಣಿಕ ಕಾರ್ಯಕ್ರಮ ‘

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ರೂ.5 ಲಕ್ಷ ರೂ. ಹಸ್ತಾಂತರ

Suddi Udaya

ಕುವೆಟ್ಟು:ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಆಶ್ರಯದಲ್ಲಿ ನಡೆಯುವ ಕೋಟಿ ಚೆನ್ನಯ ಕ್ರೀಡಾಕೂಟದ ಸಮಾಲೋಚನೆ ಸಭೆ

Suddi Udaya

ಬಕ್ರೀದ್ ಹಬ್ಬದ ಹಿನ್ನೆಲೆ: ಗೋವಂಶ ಅಕ್ರಮ ಸಾಗಾಣಿಕೆ ತಡೆಗೆ ವಿಹಿಂಪ-ಬಜರಂಗದಳ ಬೆಳ್ತಂಗಡಿ ಪ್ರಖಂಡ‌ ಮನವಿ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ-200 ರಲ್ಲಿ ಸ್ವೀಪ್ ಸಮಿತಿಯಿಂದ ತಾಲೂಕಿನ 241 ಬಿಎಲ್ ಒ ಗಳಿಗೆ ತರಬೇತಿ

Suddi Udaya
error: Content is protected !!