37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜೆಸಿಐ ಬೆಳ್ತಂಗಡಿ ವತಿಯಿಂದ ಡ್ರಗ್ಸ್ ಹಾಗೂ ರಸ್ತೆ ಸುರಕ್ಷತಾ ಜಾಗೃತಿ ನೃತ್ಯ

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮತ್ತು ಪೊಲೀಸ್ ಇಲಾಖೆ ಬೆಳ್ತಂಗಡಿ ಇವರ ಸಹಭಾಗಿತ್ವದಲ್ಲಿ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಡ್ರಗ್ಸ್ ತಡೆ ಹಾಗೂ ರಸ್ತೆ ಸುರಕ್ಷತಾ ಜಾಗೃತಿ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಜೆಸಿಐ ಬೆಳ್ತಂಗಡಿಯ ಅಧ್ಯಕ್ಷೆ ಆಶಾಲತಾ ಪ್ರಶಾಂತ್ ಅವರ ನಾಯಕತ್ವದಲ್ಲಿ, ಪ್ರಶಾಂತ್ ಲಾೖಲ ಅವರ ನಿರ್ದೇಶನದಲ್ಲಿ, ತ್ರಿಶಾ ಅವರ ಸಂಗೀತ ಸಂಯೋಜನೆ, ಸುದೀಪ್ ಸಾಲ್ಯಾನ್ ಅವರ ವಿಡಿಯೋ ಚಿತ್ರೀಕರಣ ಮತ್ತು ಸಂಕಲನ, ರುಡ್‌ಸೆಟ್ ಉಜಿರೆ ಹಾಗೂ ವಾಣಿ ವಿದ್ಯಾಸಂಸ್ಥೆ ಬೆಳ್ತಂಗಡಿ ಅವರ ಸಹಕಾರದೊಂದಿಗೆ ಈ ಕಾರ್ಯಕ್ರಮ ರೂಪುಗೊಂಡಿತು.

ಸುಮಾರು 300ಕ್ಕೂ ಹೆಚ್ಚು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಜೆಸಿಐ ಬೆಳ್ತಂಗಡಿಯ ಧ್ವಜಾರೋಹಣ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ಘಟಕದ ಪೂರ್ವಾಧ್ಯಕ್ಷರು ಚಿದಾನಂದ್ ಇಡ್ಯಾ, ಸ್ವರೂಪ್ ಶೇಖರ್ , ನಾರಾಯಣ ಶೆಟ್ಟಿ, ಉಪಾಧ್ಯಕ್ಷರು ಸುದೀರ್ ಕೆ.ಎನ್., ಮಮಿತಾ ಸುಧೀರ್, ಪ್ರೀತಮ್ ಶೆಟ್ಟಿ, ಕಾರ್ಯದರ್ಶಿ ಪ್ರಮೋದ್ ಕೆ, ಜೆಸಿ ಸಪ್ತಾಹ ನಿರ್ದೇಶಕ ರಕ್ಷಿತ್ ಬಂಗೇರ ಅಂಡಿಂಜೆ, ಮಹಿಳಾ ಜೆಸಿ ಸಂಯೋಜಕಿ ಚಿತ್ರಪ್ರಭ, ಸದಸ್ಯರಾದ ರಾಘವೇಂದ್ರ ಪೂಜಾರಿ ಹಾಗೂ ರಜತ್ ಮೋರ್ತಾಜೆ ಉಪಸ್ಥಿತರಿದ್ದರು. ಸಾರ್ವಜನಿಕರೂ ಸಹಕಾರ ನೀಡಿದರು.

ಕಾರ್ಯಕ್ರಮದ ಜಾಗೃತಿ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದು ‘ಜೆಸಿಐ ಬೆಳ್ತಂಗಡಿ’ ಯೂಟ್ಯೂಬ್ ಚಾನಲ್ ನಲ್ಲಿ ಲಭ್ಯವಿದೆ

Related posts

ಸುಲ್ಕೇರಿ ಹಾ.ಉ. ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಪುಷ್ಪಾವತಿ ನಿತ್ಯಾನಂದ, ಉಪಾಧ್ಯಕ್ಷರಾಗಿ ವಿದ್ಯಾ ಗೋರೆ

Suddi Udaya

ಫೆ.20 ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಸಾಂಸ್ಕೃತಿಕ ವೈಭವ

Suddi Udaya

ತೋಟತ್ತಾಡಿಯಲ್ಲಿ ಗೇರು ತೋಟಕ್ಕೆ ಬೆಂಕಿ

Suddi Udaya

ಉಜಿರೆ ಎಸ್. ಡಿ.ಎಂ ಕಾಲೇಜು : ಎನ್ ಎಸ್ ಎಸ್ ಘಟಕಕ್ಕೆ ಸುವರ್ಣ ಸಂಭ್ರಮ: ಅ.5:ಹಿರಿಯ ಸ್ವಯಂಸೇವಕರ ಒಗ್ಗೂಡುವಿಕೆಯಲ್ಲಿ ‘ ಸುವರ್ಣ ಸಮ್ಮಿಲನ ‘ ಕಾರ್ಯಕ್ರಮ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಬೆಂಗಳೂರು ಹೈಕೋರ್ಟ್ ಗೆ ಹಾಜರು

Suddi Udaya

ನಡ: ಸ್ಟಾರ್ ಲೈನ್ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ

Suddi Udaya
error: Content is protected !!