September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಿಜೆಪಿ ಮಂಡಲದ ವತಿಯಿಂದ ಲಾಯಿಲ ಶಕ್ತಿಕೇಂದ್ರದ ಕಾರ್ಯಕರ್ತರ ಅಭ್ಯಾಸ ವರ್ಗ ಕಾರ್ಯಕ್ರಮ

ಲಾಯಿಲ :ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪಕ್ಷದ ಸಂಘಟನಾ ದೃಷ್ಟಿಯಿಂದ ಸೆಪ್ಟೆಂಬರ್ 14 ರಂದು ಲಾಯಿಲ ಶಕ್ತಿಕೇಂದ್ರದ ಕಾರ್ಯಕರ್ತರ ಅಭ್ಯಾಸ ವರ್ಗ ಕಾರ್ಯಕ್ರಮ ಲಾಯಿಲ ಸಂಗಮ ಸಭಾಭವನದಲ್ಲಿ ನಡೆಯಿತು.

ಪಕ್ಷದ ಹಿರಿಯ ಕಾರ್ಯಕರ್ತರಾದ ಪುಟ್ಟಣ್ಣ ಕುಂಬಾರ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ವಿಧಾನಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್ ರವರು ಉದ್ಘಾಟನಾ ಭಾಷಣ ಜೊತೆಗೆ ಪಕ್ಷ ಸಂಘಟನೆ ಮತ್ತು ಕಾರ್ಯಾಚಟುವಟಿಕೆಯ ಕುರಿತು ವಿಸ್ಕೃತವಾಗಿ ಸಮಾಲೋಚನೆ ನಡೆಸಿದರು. ವೇದಿಕೆಯಲ್ಲಿ ಅಭ್ಯಾಸ ವರ್ಗದ ಪ್ರಭಾರಿಗಳಾದ ಜಯಂತ್ ಗೌಡ ಗುರಿಪಳ್ಳ ಉಪಸ್ಥಿತರಿದ್ದರು.

ಪಕ್ಷದ ಪ್ರಮುಖರಾದ ನಂದಕುಮಾರ್, ಮಹಾಬಲ ಗೌಡ, ಮೋಹನ್ ಅಂಡಿಂಜೆ ಅಭ್ಯಾಸ ವರ್ಗದ ಬೈಠಕ್ ತೆಗೆದುಕೊಂಡರು.

ಸಮಾರೋಪ ಭಾಷಣ ವನ್ನು ಶಾಸಕ ಹರೀಶ್ ಪೂಂಜಾರವರು ನೆರವೇರಿಸಿದರು. ವೇದಿಕೆಯಲ್ಲಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ, ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜಯಂತಿ ಎಂ. ಕೆ, ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಾಯಿಲ, ಶಕ್ತಿ ಕೇಂದ್ರ ಅಧ್ಯಕ್ಷರಾದ ಗಣೇಶ್ ಕಣ್ಣಾಜೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ತಾಲೂಕು ಎ. ಸಿ ಮೋರ್ಚಾದ ಅಧ್ಯಕ್ಷರಾದ ಈಶ್ವರ ಭೈರ, ಮಂಡಲದ ಕಾರ್ಯದರ್ಶಿಗಳಾದ ಗಿರೀಶ್ ಡೋಂಗ್ರೆ ಹಾಗೂ ಆಶಾ ಸಲ್ದಾನ, ಯುವ ಮೋರ್ಚಾದ ಉಪಾಧ್ಯಕ್ಷರಾದ ಗಣೇಶ್ ಲಾಯಿಲ ಹಾಗೂ ಪಂಚಾಯತ್ ಸದಸ್ಯರುಗಳು, ಮಿಲ್ಕ್ ಸೊಸೈಟಿ ನಿರ್ದೇಶಕರುಗಳು,ಸಿ. ಎ ಬ್ಯಾಂಕ್ ನಿರ್ದೇಶಕರುಗಳು,ಬೂತ್ ಪದಾಧಿಕಾರಿಗಳು, ಪಕ್ಷದ ಅನ್ಯನ್ಯ ಜವಾಬ್ದಾರಿ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಬಿಜೆಪಿ ಗೀತೆ ಯನ್ನು ಸುಧಾಕರ್ ಬಿ.ಎಲ್ ರವರು ಹಾಡಿದರು.ಮಂಡಲ ಬೂತ್ ಅಧ್ಯಕ್ಷರಾದ ಮಹೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.ಸುಮಾರು 345 ಕ್ಕೂ ಅಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧಕ ದೀಪಕ್ ಎ.ಎಸ್. ಲೋಕಸಭಾ ಸಂಸದ ಬ್ರಿಜೇಶ್ ಚೌಟರ ಭೇಟಿ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ಬೆಳ್ತಂಗಡಿ ವಲಯದ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಸಿಲ್ವಿಯ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ವಿಜಯ ಹೆಚ್ ಪ್ರಸಾದ್

Suddi Udaya

ನ್ಯಾಯತರ್ಪು ಸ್ವಸಹಾಯ ಸಂಘದ ಲಾಭಾಂಶ ವಿತರಣೆ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಡೈಮಾಂಡ್ ಫೇಸ್ಟ್ ಪ್ರಯುಕ್ತ ಆಯೋಜಿಸಿದ್ದ ಲಕ್ಕಿ ಕೂಪನ್ ಬಿಡುಗಡೆ

Suddi Udaya

ಅಳದಂಗಡಿಯಲ್ಲಿ ಸೌಮ್ಯ ರೆಸಿಡೆನ್ಸಿ ಬೋರ್ಡಿಂಗ್ ಅಂಡ್ ಲಾಡ್ಜಿಂಗ್ ಲೋಕಾರ್ಪಣೆ

Suddi Udaya

ಅಳದಂಗಡಿ ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜಾ ಸಮಿತಿ ರಚನೆ

Suddi Udaya
error: Content is protected !!