September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಳದಂಗಡಿ ಶ್ರೀ ಕ್ಷೇ.ಧ.ಗ್ರಾ. ಯೋಜನೆ ಬಡಗಕಾರಂದೂರು ಒಕ್ಕೂಟದ ತ್ರೈಮಾಸಿಕ ಸಭೆ

ಅಳದಂಗಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಡಗಕಾರಂದೂರು ಗ್ರಾಮ ಎ ಒಕ್ಕೂಟದ ತ್ರೈಮಾಸಿಕ ಸಭೆಯು ಹರೀಶ್ ಸಾಲಿಯನ್ ನಿನ್ನಿಕಲ್ಲು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯೋಜನೆಯ ಜಿಲ್ಲಾ ವಿಮಾ ಸಮನ್ವಯ ಅಧಿಕಾರಿ ಶ್ರೀಮತಿ ಹೇಮಲತಾ ಹೆಗ್ಡೆ ಇವರು ಪಿ ಆರ್ ಕೆ ಮತ್ತು ಸಂಪೂರ್ಣ ಸುರಕ್ಷಾದ ಬಗ್ಗೆ ಜನರಿಗೆ ಮನಮುಟ್ಟುವ ಹಾಗೆ ಮಾಹಿತಿ ನೀಡಿದರು. ಜನರ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದರು.

ನಂತರ ಪ್ರಾಥಮಿಕ ಆರೋಗ್ಯ ಕೇಂದ್ರ ಅಳೆದಂಗಡಿಯ ಜಿಲ್ಲಾ ಸುರಕ್ಷಾಧಿಕಾರಿ ಶ್ರೀಮತಿ ತೃಪ್ತಿ ಆಚಾರ್ಯ ಇವರು ಆರೋಗ್ಯದಲ್ಲಿ ಆಗುವ ಏರುಪೇರುಗಳ ಬಗ್ಗೆ ಯಾವ ರೀತಿ ಜಾಗೃತರಾಗಿರಬೇಕು ಎಂಬ ಮಾಹಿತಿಯನ್ನು ನೀಡಿದರು. ಬಿಪಿ ಶುಗರ್ ತಪಾಸಣೆಯನ್ನು ಮಾಡಿದರು. ಆಶಾ ಕಾರ್ಯಕರ್ತೆ ಶ್ರೀಮತಿ ಶಾರದಾ ಶೆಟ್ಟಿ ಸಹಕಾರ ನೀಡಿದರು.

ವಲಯ ಮೇಲ್ವಿಚಾರಕರಾದ ಶ್ರೀಮತಿ ಯಶೋಧ ಎಂ ಮಾತನಾಡಿ ಸಂಘದ ನಿರ್ವಹಣೆ ಭಾಗವಹಿಸುವಿಕೆ. ಯೋಜನೆಗೆ ಸಂಬಂಧಪಟ್ಟ ಎಲ್ಲಾ ವಿಚಾರಗಳನ್ನು ತಿಳಿಸಿದರು. ಜನನಿ ತಂಡದಿಂದ ಸಲಹಾ ಪೆಟ್ಟಿಗೆಯನ್ನು ಒಕ್ಕೂಟಕ್ಕೆ ಹಸ್ತಾಂತರಿಸಿದರು. ವೇದಿಕೆಯಲ್ಲಿ ಸೇವಾ ಪ್ರತಿನಿಧಿ ಶ್ರೀಮತಿ ಶುಭ ಹರೀಶ್ ರೈ, ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಗನ್ನಾಥ್ ಕುಲಾಲ್ ಸ್ವಾಗತಿಸಿ, , ಮನೋಹರ್ ಪ್ರಸಾದ್ ನಿರೂಪಿಸಿ, ಧನ್ಯವಾದವಿತ್ತರು.

Related posts

ಮಹಿಳಾ ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಂಡು, ಕ್ಷೇತ್ರ‌ ಪುನರ್ ವಿಂಗಡನೆ ಮೂಲಕ ಅಧಿಕಾರ ಹಿಡಿಯಲು ಯತ್ನಿಸಿದ ಬಿಜೆಪಿಗೆ ಮುಖಭಂಗ- ರಕ್ಷಿತ್ ಶಿವರಾಂ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಅನ್ನಛತ್ರದಲ್ಲಿ ಹಾಲು ಉಕ್ಕಿಸುವ ಕಾರ್ಯ

Suddi Udaya

ಫೆಂಗಲ್ ಚಂಡಮಾರುತ: ಡಿ.02 ರಿಂದ 03 ರವರೆಗೆ ದ.ಕ. ಜಿಲ್ಲೆಯಾದ್ಯಂತ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆ

Suddi Udaya

ಜೆ ಇ ಇ ಮೈನ್ಸ್ ಫಲಿತಾಂಶ ಪ್ರಕಟ ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ

Suddi Udaya

ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಾಣಿ ಕಾಲೇಜಿನ ಬಾಲಕರ ಮತ್ತು ಬಾಲಕಿಯರ ತಂಡಕ್ಕೆ ದ್ವಿತೀಯ ಸಮಗ್ರ ಪ್ರಶಸ್ತಿ

Suddi Udaya

ಪದಗ್ರಹಣ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಎಲ್.ಹೆಚ್. ಮಂಜುನಾಥ್

Suddi Udaya
error: Content is protected !!