37.9 C
ಪುತ್ತೂರು, ಬೆಳ್ತಂಗಡಿ
March 6, 2026
ಅಪರಾಧ ಸುದ್ದಿಕರಾವಳಿಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿವರದಿಸರ್ಕಾರಿ ಇಲಾಖಾ ಸುದ್ದಿ

ಸುಜಾತಾ ಭಟ್ ನೀಡಿದ ನಾಪತ್ತೆ ಪ್ರಕರಣ: ಎಸ್ಐಟಿ ಕಚೇರಿಗೆ ಹಾಜರಾದ ವಸಂತಿ ಸಹೋದರ ವಿಜಯ್

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಅನನ್ಯಾ ಭಟ್ ಎಂಬಾಕೆ ಬೆಳ್ತಂಗಡಿಗೆ ಬಂದು ನಾಪತ್ತೆಯಾಗಿರುವ ವಿಚಾರಕ್ಕೆ ಸಂಬಂಧಿಸಿ ಸುಜಾತಾ ಭಟ್ ನೀಡಿದ ಸುಳ್ಳು ದೂರಿನ ವಿಚಾರವಾಗಿ ಇಂದು ವಸಂತಿ ಎಂ.ಪಿ. ಅವರ ಸಹೋದರ ಕೊಡಗು ಮೂಲದ ವಿಜಯ್ ಬೆಳ್ತಂಗಡಿ ಎಸ್.ಐ.ಟಿ. ಕಚೇರಿಗೆ ಹಾಜರಾಗಿದ್ದಾರೆ.

ವಿಚಾರಣೆಗೆಂದು ಎಸ್ಐಟಿ ಕಚೇರಿಯಿಂದ ವಿಜಯ್ ಅವರಿಗೆ ನೋಟಿಸ್ ನೀಡಲಾಗಿತ್ತು. ಸುಜಾತಾ ಭಟ್ ಅವರು ತನ್ನ ಮಗಳು ಅನನ್ಯಾ ಭಟ್ ಧರ್ಮಸ್ಥಳಕ್ಕೆ ಸ್ನೇಹಿತೆಯರ ಜತೆ ಬಂದು ಕಾಣೆಯಾಗಿದ್ದಳು, ಅವಳ‌ ಬಗ್ಗೆ ಧರ್ಮಸ್ಥಳದಲ್ಲಿ ವಿಚಾರಿಸಿದಾಗ ದೂರು ಪಡೆದಿರಲಿಲ್ಲ ಎಂದು ಹೇಳಿಕೆ ನೀಡಿದ್ದರು. ಅದಾದ ಬಳಿಕ ಅನನ್ಯಾ ಭಟ್ ಎಂದು ಹೇಳಿ ಬೆಂಗಳೂರು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಸುಶ್ರೂಶಕಿಯಾಗಿದ್ದ ವಸಂತಿ ಎಂ.ಪಿ. ಅವರ ಫೋಟೋವನ್ನು ಮಾಧ್ಯಮಕ್ಕೆ ತೋರಿಸಿದ್ದರು. ವಿಚಾರಣೆ ಬಳಿಕ ಈಕೆ ಸುಜಾತಾ ಭಟ್ ನೀಡಿದ ಫೋಟೋ ಸುಳ್ಳು ಮಾಹಿತಿಯಾಗಿದ್ದು, ವಸಂತಿ ಎಂ.ಪಿ. ಅವರು ಮೃತಪಟ್ಟು 18 ವರ್ಷವಾಗಿದೆ ಎಂದು ತಿಳಿದು ಬಂದಿದೆ.

ವಸಂತಿ ಅವರ ಮಾವ ರಂಗಪ್ರಸಾದ್ ಅವರ ಮನೆಯಲ್ಲಿ ಕೇರ್ ಟೇಕರ್ ಆಗಿ ಸುಜಾತಾ ಭಟ್ ಆಶ್ರಯಪಡೆದಿದ್ದರು. ಈ ವೇಳೆ ಅಲ್ಲಿದ್ದ ವಸಂತಿ ಫೋಟೋವನ್ನು ಮಾಧ್ಯಮಕ್ಕೆ ನೀಡಿದ್ದರು.ಈ ವಿಚಾರವಾಗಿ ಎಸ್.ಐ.ಟಿ. ವಿಚಾರಣೆಗೆ ಬೆಳ್ತಂಗಡಿಗೆ ವಿಜಯ್ ಅವರನ್ನು ಕರೆಸಿ ಹೇಳಿಕೆ ಪಡೆದಿದೆ. ವಿಜಯ್ ಅವರು ವಾಸಂತಿ ಮೃತಪಟ್ಟ ಮರಣ ಪ್ರಮಾಣ ಪತ್ರವನ್ನು ಎಸ್ಐಟಿಗೆ ನೀಡಿದ್ದಾರೆ. ಅದಕ್ಕೆ ಸಂಬಂಧಿಸಿ ಇತರ ದಾಖಲೆ ಒದಗಿಸಿರುವುದಾಗಿ ವಿಜಯ್ ಸುದ್ದಿ ಉದಯಕ್ಕೆ ತಿಳಿಸಿದ್ದಾರೆ.

Related posts

ಮಲೆಬೆಟ್ಟು ಹಾ.ಉ. ಸಂಘದ ಆಡಳಿತ ಮಂಡಳಿಯನ್ನುವಜಾಗೊಳಿಸಿ ನೀಡಿದ ಆದೇಶ ರದ್ದು: ಮತ್ತೆ ಅಧಿಕಾರದ ಗದ್ದುಗೆಗೆ ಏರಿದ ಪ್ರಮೋದ್ ಕುಮಾರ್ ಅಧ್ಯಕ್ಷತೆಯ ಆಡಳಿತ ಮಂಡಳಿ

Suddi Udaya

ತಣ್ಣೀರುಪಂತ: ಅವಿವಾಹಿತ ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ

Suddi Udaya

ಉಜಿರೆ: ಎಸ್‌ಡಿಎಂ ಐಟಿ ಕಾಲೇಜಿನ ಗಣಿತ ವಿಭಾಗದ ಉಪನ್ಯಾಸಕಿ ಶೋಭಾ ಪಿ. ಜೀವಂದರ್ ರವರಿಗೆ ಪಿ.ಹೆಚ್.ಡಿ ಪದವಿ

Suddi Udaya

ಧರ್ಮಸ್ಥಳದಲ್ಲಿ25ನೇ ವರ್ಷದ ಭಜನಾ ತರಬೇತಿ ಕಮ್ಮಟ: ಮಂಡ್ಯ ಜಿಲ್ಲೆಯ ಆರತಿಪುರದ ಸಿದ್ಧಾಂತಕೀರ್ತಿ ಸ್ವಾಮೀಜಿಯವರಿಂದ ಉದ್ಘಾಟನೆ: ಧಮ೯ಸ್ಥಳದ ಧಮಾ೯ಧಿಕಾರಿ ಡಾ.ಹೆಗ್ಗಡೆ, ಮಣಿಲಶ್ರೀ ಉಪಸ್ಥಿತಿ: 115 ಭಜನಾ ಮಂಡಳಿಗಳ 202 ಮಂದಿ ಶಿಬಿರಾಥಿ೯ಗಳು ಭಾಗಿ

Suddi Udaya

ಕೊಡಗಿನ ಕುಶಾಲನಗರದಲ್ಲಿ ನಡೆದ ಸಂಪತ್ ಎಂಬವರ ಕೊಲೆ ಪ್ರಕರಣ: ಗುರುವಾಯನಕೆರೆಯ ಶಕ್ತಿನಗರದ ಪಿಜಿಯಲ್ಲಿದ್ದ ಆರೋಪಿಯನ್ನು ಬಂಧಿಸಿದ ಕೊಡಗು ಪೊಲೀಸರು

Suddi Udaya

ಸಂತೆಕಟ್ಟೆ ರಿಕ್ಷಾ ಚಾಲಕ ಮತ್ತು ಮಾಲಕರಿಂದ ನಿಧನರಾದ ಶೇಖರ್ ರವರಿಗೆ ಸಂತಾಪ

Suddi Udaya
error: Content is protected !!