ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶಿರ್ಲಾಲು ಗ್ರಾಮ ಪಂಚಾಯತ್ ನ ಗ್ರಾಮಸಭೆ

ಶಿರ್ಲಾಲು: ಶಿರ್ಲಾಲು ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಗ್ರಾ.ಪಂ ಅಧ್ಯಕ್ಷೆ ಉಷಾ ಎಂ. ರವರ ಅಧ್ಯಕ್ಷತೆಯಲ್ಲಿ ಸೆ.19ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರುಗಿತು.

ಮಾರ್ಗದರ್ಶಕ ಅಧಿಕಾರಿಯಾಗಿ ಬೆಳ್ತಂಗಡಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜೇಂದ್ರ ಕೃಷ್ಣ ರವರು ಭಾಗವಹಿಸಿ ಗ್ರಾಮಸಭೆಯನ್ನು ಮುನ್ನಡೆಸಿದರು. ಸಭೆಯಲ್ಲಿ ಇಲಾಖಾ ಅಧಿಕಾರಿಗಳಿಂದ ವಿವಿಧ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.

ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾ.ಪಂ. ಉಪಾಧ್ಯಕ್ಷ ಸೋಮನಾಥ ಬಂಗೇರ, ಸದಸ್ಯರಾದ ತಾರಾನಾಥ ಗೌಡ, ಕೊರಗಪ್ಪ, ಮಾಧವ, ಜ್ಯೋತಿ ಪೂಜಾರಿ, ಮಮತಾ ಜೈನ್, ಗೀತಾ, ಸುಶೀಲ, ಗೀತಾ, ಪ್ರಕಾಶ್ ಹೆಗ್ಡೆ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪಂ. ಅಭಿವೃದ್ಧಿ ಅಧಿಕಾರಿ ಸುಶೀಲ ಸ್ವಾಗತಿಸಿ, ಅನುಪಾಲನ ವರದಿ ವಾಚಿಸಿದರು. ಕಾರ್ಯದರ್ಶಿ ಜಮಾ ಖರ್ಚು ವಿವರ ಮಂಡಿಸಿದರು. ಸಿಬ್ಬಂದಿಗಳಾದ ಸರೋಜಿನಿ ವಾರ್ಡ್ ಸಭೆಯ ಬೇಡಿಕೆಯನ್ನು ಮಂಡಿಸಿ, ಪವಿತಾ ವಂದಿಸಿದರು.

Related posts

ಗೇರುಕಟ್ಟೆ: ಬಾಲಕ ಶವ ಪತ್ತೆ ಪ್ರಕರಣ: ಘಟನಾ ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ: ಸಮಗ್ರ ತನಿಖೆಗೆ ಆಗ್ರಹ

Suddi Udaya

ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜರವರು ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಹರೀಶ್ ಕಾರಿಂಜರವರ ಮನೆಗೆ ಭೇಟಿ

Suddi Udaya

ಆಮಂತ್ರಣ ದಶಮಾನೋತ್ಸವ ವತಿಯಿಂದ ಸುರಕ್ಷಾ ಕನ್ನಾಜೆ ರವರಿಗೆ “ಸತ್ಯಶ್ರೀ ಪ್ರಶಸ್ತಿ” ಗೌರವ

Suddi Udaya

ಜೀವಬೆದರಿಕೆ ಹಾಕಬಹುದು: ಚಿನ್ನಯ್ಯನಿಂದ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇತರರ ಮೇಲೆ ದೂರು

Suddi Udaya

20 ವರ್ಷಗಳ ಯಶಸ್ವಿ ಪಯಣ: ಜು.10- ಮಡಂತ್ಯಾರಿನಲ್ಲಿ ಲುಕ್ ಆಪ್ಟಿಕ್ಸ್ ಮರು ಉದ್ಘಾಟನೆ:

Suddi Udaya

ಗೇರುಕಟ್ಟೆ: ಯಕ್ಷೋತ್ಸವ ಕಾರ್ಯಕ್ರಮ ಉದ್ಘಾಟನೆ

Suddi Udaya
error: Content is protected !!