March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ತೆಕ್ಕಾರು ಗ್ರಾ.ಪಂ ನಲ್ಲಿ ರೈತರಿಗೆ ಅಣಬೆ ಕೃಷಿ ತರಬೇತಿ

ಬೆಳ್ತಂಗಡಿ: ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿ & ತೆಕ್ಕಾರು ಗ್ರಾಮ ಪಂಚಾಯತ್, ಮತ್ತು ಇಬ್ಬನಿ ಸಂಜೀವಿನಿ ಮಹಿಳಾ ಒಕ್ಕೂಟ ತೆಕ್ಕಾರು, ಕೃಷಿ ಪತ್ತಿನ ಸಹಕಾರಿ ಸಂಘ ತೆಕ್ಕಾರು ಇದರ ಸಹಯೋಗದಲ್ಲಿ ರೈತರಿಗೆ ಅಣಬೆ ಕೃಷಿ ತರಬೇತಿ ಕಾರ್ಯಕ್ರಮವನ್ನು ಸೆ. 18 ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್ ವಹಿಸಿದ್ದರು. ಉಷಾ ಮತ್ತು ದಿವ್ಯ ರವರ ಪ್ರಾರ್ಥನೆಯೊಂದಿಗೆ ಸಭೆಯನ್ನು ಪ್ರಾರಂಭಿಸಲಾಯಿತು. ಅಭಿವೃದ್ಧಿ ಅಧಿಕಾರಿಯಾಗಿ ಸುಮಯ್ಯರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಭೆಯಲ್ಲಿ ಕೃಷಿಪತ್ತಿನ ಕಾರ್ಯನಿರ್ವಾಹಕ ಅಧಿಕಾರಿ ರಾಘವೇಂದ್ರ ಅಡಪ, ನಿರ್ದೇಶಕರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಇಬ್ಬನಿ ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ, ಗ್ರಾಮ ಪಂಚಾಯಿತಿ ಸದಸ್ಯರು, ಕೃಷಿ ಅಧಿಕಾರಿ ಗಣೇಶ್ ಅಡಿಗ, ಸಂಪನ್ಮೂಲ ವ್ಯಕ್ತಿ ಸುಲೇಮಾನ್ ಬೆಳಾಲ್ ಉಪಸ್ಥಿತರಿದ್ದರು, ಪವಿತ್ರ ಸ್ವಾಗತಿಸಿದರು. ಉದ್ಘಾಟಕರಾಗಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಸುಮಯ್ಯ ಮಾತನಾಡಿದರು ಹಾಗೂ ಕೃಷಿ ಅಧಿಕಾರಿ ಗಣೇಶ ಆಡಿಗರವರು ಕೃಷಿಯ ಬಗ್ಗೆ, ಕೃಷಿ ಇಲಾಖೆಯಲ್ಲಿ ದೊರೆಯುವ ಸೌಲಭ್ಯದ ಬಗ್ಗೆ, ತರಬೇತಿ ಬಗ್ಗೆ ಮಾಹಿತಿ ನೀಡಿದರು.

ಸಭೆಯ ಅಧ್ಯಕ್ಷ ಅಬ್ದುಲ್ ರಜಾಕ್ ಮಾತನಾಡಿ ಇನ್ನು ಮುಂದಿನ ದಿನಗಳಲ್ಲಿ ಅಗರಬತ್ತಿ, ತಯಾರಿಕೆ ಮೇಣದ ಬತ್ತಿ ತಯಾರಿಕೆ, ಗ್ರಹಲಕ್ಷ್ಮಿ ಫಲಾನುಭವಿಗಳು ಸಂಜೀವಿನಿ ಸಂಘ ಸೇರುವ ಬಗ್ಗೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿ ಸುಲೈಮಾನ್ ಬೆಳಾಲು ಸಂಪೂರ್ಣ ಮಾಹಿತಿ ನೀಡಿದರು ಹಾಗೂ ಪ್ರತ್ಯಕ್ಷಿಕೆಯನ್ನು ನಡೆಸಿಕೊಟ್ಟರು, ಹಾಗೂ ಜೇನು ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಸುಲಭ ಮಾರುಕಟ್ಟೆ ಬಗ್ಗೆ ಮಾಹಿತಿ ನೀಡಿದರು. ಉಷಾ ಕಾರ್ಯಕ್ರಮ ನಿರೂಪಣೆ ಮಾಡಿದರು. ಪಶು ಸಖಿ ಧನ್ಯವಾದವಿತ್ತರು.

Related posts

ಬುರುಡೆ ಪ್ರಕರಣ: ಚಿನ್ನಯ್ಯನನ್ನು ಮಹಜರು ನಡೆಸಲು ಕರೆದುಕೊಂಡು ಹೋದ ಎಸ್.ಐ.ಟಿ

Suddi Udaya

ಹೊಟ್ಟೆ ನೋವಿನಿಂದ ಬಳಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

Suddi Udaya

ನಾವೂರು: ಮುರ ಮದರಸದಲ್ಲಿ ಮಾದಕ ದ್ರವ್ಯ ವಿರುದ್ಧದ ಅಭಿಯಾನ ಹಾಗೂ ಸ್ನೇಹ ಸಹವಾಸ ಶಿಬಿರ

Suddi Udaya

ಮೀಯಾರು ಕೆಮ್ಮಟ್ಟೆಯಲ್ಲಿ ಎಸ್.ಕೆ.ಡಿ.ಆರ್.ಡಿ.ಪಿ ಟ್ರಸ್ಟ್ ವತಿಯಿಂದ ನೀರು ಉಳಿಸಿ ಭವಿಷ್ಯದ ನೀರು ಇಂದಿನ ಕಾಳಜಿ ಅಭಿಯಾನ

Suddi Udaya

ಎಸ್.ಕೆ.ಎಸ್.ಎಸ್.ಎಫ್ ಬೊಳ್ಮನಾರ್ ಶಾಖೆಯ ವತಿಯಿಂದ ಕೆಮ್ಮಟೆ ಸ.ಹಿ. ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ಶಿಶಿಲ ಆರೋಗ್ಯ ಉಪಕೇಂದ್ರದ ಆವರಣದಲ್ಲಿ ಶಿಶಿಲ-ಅರಸಿನಮಕ್ಕಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರಿಂದ ಸ್ವಚ್ಚತಾ ಕಾರ್ಯ

Suddi Udaya
error: Content is protected !!