25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಸೆ.22 -ಅ.2 : ಮಲೆಬೆಟ್ಟು ಶ್ರೀ ವನದುರ್ಗಾ ದೇವಾಲಯದಲ್ಲಿ ನವರಾತ್ರಿ ಪೂಜಾ ಮಹೋತ್ಸವ

ಕೊಯ್ಯರು: ಮಲೆಬೆಟ್ಟು ಶ್ರೀ ವನದುರ್ಗಾ ದೇವಾಲಯದಲ್ಲಿ ಸೆ.22 ರಿಂದ ಅ.2 ರವರೆಗೆ ನವರಾತ್ರಿ ಪೂಜಾ ಮಹೋತ್ಸವವು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಸೆ.22ರಂದು ರಾತ್ರಿ 7-30 ರಿಂದ ಗಣಹೋಮ, ಕುಣಿತ ಭಜನಾ ಕಾರ್ಯಕ್ರಮ, ಮಂಗಳಾರತಿ, ಪ್ರಸಾದ ವಿತರಣೆ , ಸೆ.23 ರಂದು ರಾತ್ರಿ 7-30 ರಿಂದ ನವರಾತ್ರಿ ಪೂಜೆ, ಶ್ರೀ ರಂಗಪೂಜೆ, ಭಜನಾ ಕಾರ್ಯಕ್ರಮ, ರಾತ್ರಿ 9 ಗಂಟೆಗೆ ಮಂಗಳಾರತಿ, ಪ್ರಸಾದ ವಿತರಣೆ, ಸೆ.24 ರಂದು ರಾತ್ರಿ 7-30 ರಿಂದ ನವರಾತ್ರಿ ಪೂಜೆ, ರಂಗಪೂಜೆ, ಗಮಕ ನೃತ್ಯರೂಪಕ, ಮಂಗಳಾರತಿ, ಪ್ರಸಾದ ವಿತರಣೆ . ಸೆ.25 ರಂದು ರಾತ್ರಿ 7-30 ನವರಾತ್ರಿ ಪೂಜೆ, ರಂಗಪೂಜೆ, ಸ್ಯಾಕ್ರೋಫೋನ್ ವಾದನ ನಡೆಯಲಿದೆ. ರಾತ್ರಿ 9 ರಿಂದ ಮಂಗಳಾರತಿ, ಪ್ರಸಾದ ವಿತರಣೆ . ಸೆ.26 ರಂದು ರಾತ್ರಿ 7 ರಿಂದ ಭಜನಾ ಕಾರ್ಯಕ್ರಮ ನಂತರ ಅವನೀಶ ಕೃಷ್ಣ ಕಾಂತಾಜೆ ಮತ್ತು ಶ್ರೀ ವಿಶ್ವೇಶ್ವರ ಭಟ್ ಉಂಡೆಮನೆ ಇವರಿಂದ ಶಂಕರ ಸ್ತೋತ್ರ ವಾಹಿನಿ ರಾತ್ರಿ 9 ಗಂಟೆಗೆ ಮಂಗಳಾರತಿ, ಪ್ರಸಾದ ವಿತರಣೆ .

ಸೆ.27 ರಿಂದ ರಾತ್ರಿ 7-30 ರಿಂದ ನವರಾತ್ರಿ ಪೂಜೆ, ಶ್ರೀ ರಂಗಪೂಜೆ ನಂತರ ಕೆ.ಆರ್ ಸುವರ್ಣ ಕುಮಾರಿ ಮತ್ತು ಮಧೂರು ಮೋಹನ ಕಲ್ಲೂರಾಯ ಗೇರುಕಟ್ಟೆ ಇವರಿಂದ ಹರಿಕಥಾ ಕಾಲಕ್ಷೇಪ ನಡೆಯಲಿದೆ. ರಾತ್ರಿ 9 ಗಂಟೆಗೆ ಮಂಗಳಾರತಿ, ಪ್ರಸಾದ ವಿತರಣೆ. ಸೆ.29 ರಂದು ರಾತ್ರಿ 7-30 ರಿಂದ ನವರಾತ್ರಿ ಪೂಜೆ, ಶ್ರೀ ರಂಗಪೂಜೆ ನಂತರ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9 ರಿಂದ ಮಂಗಳಾರತಿ, ಪ್ರಸಾದ ವಿತರಣೆ . ಸೆ.30 ರಂದು ರಾತ್ರಿ 7-30 ರಿಂದ ನವರಾತ್ರಿ ಪೂಜೆ, ರಂಗಪೂಜೆ ನಡೆಯಲಿದೆ. ನಂತರ ಭಕ್ತಿಗೀತೆ, ಭಜನಾ ಸ್ಪರ್ಧೆ ನಡೆಯಲಿದೆ. ರಾತ್ರಿ ಗಂಟೆ 9-00 ರಿಂದ ಮಂಗಳಾರತಿ, ಪ್ರಸಾದ ವಿತರಣೆ .

ಅ.1 ರಂದು ರಾತ್ರಿ ಗಂಟೆ 7-30 ರಿಂದ ಭಜನಾ ಕಾರ್ಯಕ್ರಮ, ರಾತ್ರಿ 9-00 ರಿಂದ ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಸೆ.2 ರಂದು ಬೆಳಿಗ್ಗೆ 10 ರಿಂದ ವಿಜಯ ದಶಮಿ, ಚಿತ್ರ ಬಿಡಿಸುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಯಕ್ಷಗಾನ ತಾಳಮದ್ದಳೆ- ತ್ರಿಶಂಕು ಸ್ವರ್ಗ ನಡೆಯಲಿದೆ. ಮಧ್ಯಾಹ್ನ 12-30 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಪ್ರತಿದಿನ ರಾತ್ರಿ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ.

Related posts

ಬೆಳ್ತಂಗಡಿ ವಕೀಲರ ಸಂಘ ದಿಂದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ಭೇಟಿ

Suddi Udaya

ವೇಣೂರು: ಆಟೋ ಚಾಲಕ ಅನಿಲ್ ಕುಮಾರ್ ನಿಧನ

Suddi Udaya

ಭಾರತ್ ಅಟೋ ಕಾರ್‍ಸ್ ನಲ್ಲಿ ಮಾನ್ಸೂನ್ ಉಚಿತ ತಪಾಸಣೆ ಶಿಬಿರಕ್ಕೆ ಚಾಲನೆ

Suddi Udaya

ಮಡಂತ್ಯಾರು ಗ್ರಾ.ಪಂ ಪಾರೆಂಕಿ 1 ನೇ ಕ್ಷೇತ್ರದ ಉಪಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ತಡೆ

Suddi Udaya

ಕಳೆಂಜ ಶಾಲೆತ್ತಡ್ಕ ಹಾ.ಉ.ಸ. ಸಂಘದ ಆಡಳಿತ ಮಂಡಳಿಯಿಂದ ಶಾಸಕ ಹರೀಶ್ ಪೂಂಜ ರವರಿಗೆ ಅಭಿನಂದನೆ

Suddi Udaya

ಜೀವಬೆದರಿಕೆ ಹಾಕಬಹುದು: ಚಿನ್ನಯ್ಯನಿಂದ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇತರರ ಮೇಲೆ ದೂರು

Suddi Udaya
error: Content is protected !!