September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

“ಸರ್ವ- ಧರ್ಮ ಸೌಹಾರ್ದತೆಯನ್ನು ಜಗತ್ತಿಗೆ ನೀಡಿದ ದೇಶ ಭಾರತ”: ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ

ಮೂಡುಬಿದಿರೆ: ಮಾನವ ಮಾನವನಾಗಿರಬೇಕು. ದಾನವೀಯ ಪ್ರವೃತ್ತಿಗಳ ಆಗರವಾಗಬಾರದು. ಧರ್ಮದ ಮರ್ಮವನ್ನರಿತು ಬದುಕಿದರೆ ಶಾಂತಿ ಸಾಮರಸ್ಯದ ಜೀವನ ಸಾಧ್ಯ ಎಂದು ಮೂಡಬಿದಿರೆಯ ಪರಮಪೂಜ್ಯ ಭಾರತಭೂಷಣ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿಯವರು ಅಭಿಪ್ರಾಯಪಟ್ಟರು ಮೂಡುಬಿದಿರೆಯ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಜರಗಿದ ಸರ್ವ – ಧರ್ಮ ಅರಿವು ಸಮ್ಮಿಲನ-2025ನ್ನು ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿಯವರು “ಸನಾತನ ಕಾಲದಿಂದಲೂ ಭಾರತೀಯ ಭೂಮಿ ಸರ್ವ ಧರ್ಮಗಳಿಗೂ ನೆಲೆಬೀಡಾಗಿದೆ. ಸರ್ವ-ಧರ್ಮ ಸೌಹಾರ್ದತೆಯ ಔದಾರ್ಯತೆ ಭಾರತೀಯರಲ್ಲಿದೆ. ಪ್ರತೀ ಧರ್ಮದ ಮುಖ್ಯ ಧ್ಯೇಯ ನೈತಿಕತೆ, ಪರಿಶುದ್ಧತೆಯ ಬದುಕನ್ನು ಬದುಕುವುದಾಗಿದೆ. ಎಲ್ಲಾ ಧರ್ಮ ಗ್ರಂಥಗಳು ಹೇಳಿರುವುದು ಸಮಾಜದಲ್ಲಿರುವಂತದ ಕೆಟ್ಟ ಗುಣಗಳನ್ನು ಯಾವ ರೀತಿಯಲ್ಲಿ ತೊಡೆದು ಹಾಕಬಹುದು ಎಂಬುದನ್ನು.” ಇದನ್ನು ನಾವು ಅರಿತು ಬದುಕಿನಲ್ಲಿ ಅಳವಡಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಕ್ರಿಶ್ಚಿಯನ್ ಧರ್ಮದ ಸಂದೇಶವನ್ನು ಸಾರಿದ ಫಾ| ಮೆಲ್ವಿನ್ ನೊರೊನ್ಹಾ ಅವರು ಪ್ರೀತಿಗೋಸ್ಕರ ಉದಿಸಿದ್ದು ಕ್ರಿಶ್ಚಿಯನ್ ಧರ್ಮ. ಏಸುಸ್ವಾಮಿ ಪ್ರತಿಯೊಬ್ಬನನ್ನು ಪ್ರೀತಿಸಿದರು. ಅವರು ಪ್ರೀತಿಸಿದ್ದು ಮಾನವ ಧರ್ಮವನ್ನು, ಜನರನ್ನು, ಸಮಾಜದಲ್ಲಿ ತುಳಿತಕ್ಕೆ ಒಳಗಾದವರನ್ನು. ಧರ್ಮವೊಂದು ನೀತಿ, ಧರ್ಮವೊಂದು ರೀತಿ, ಧರ್ಮವೊಂದು ಕರುಣೆ ಎಂಬುವುದು ಏಸುಸ್ವಾಮಿಯ ಅಭಿಪ್ರಯವಾಗಿತ್ತು. ಪ್ರೀತಿ, ನೀತಿ, ಮಾನವೀಯತೆಯ ಪ್ರತಿಬಿಂಬವೇ ಕ್ರೆöÊಸ್ತ ಧರ್ಮ. ಕರುಣೆ ಇಲ್ಲದ ಧರ್ಮ ಜಗತ್ತಿಗೆ ಯಾವ ಸಂದೇಶವನ್ನೂ ಕೊಡಲು ಸಾಧ್ಯವಿಲ್ಲ. ಹಸಿದಾಗ ಅನ್ನ, ದಣಿವಾದಾಗ ನೀರು ಕೊಡುವುದೇ ನಿಜವಾದ ಧರ್ಮವೆಂದು ತಿಳಿಸಿದರು.


ಮಂಗಳೂರಿನ ಮಸ್ನವೀ ಅಕಾಡೆಮಿಯ ಅಧ್ಯಕ್ಷರಾದ ಡಾ.ಅಬ್ದುಲ್ ರಶೀದ್ ಝೈನೀ ಸಖಾಫಿ ಇವರು “ಇಸ್ಲಾಂ ಧರ್ಮದ ಸಂದೇಶವನ್ನು ತಿಳಿಸುತ್ತಾ ಸಲಾಂ ಎಂದರೆ ಶಾಂತಿ, ಹಾಗೂ ಸೌಹಾರ್ದತೆಯ ತತ್ವವನ್ನೇ ಪೈಗಂಬರರು ಜಗತ್ತಿಗೇ ಬೋಧಿಸಿದರು. ಬಾಂಗ್ ಎನ್ನುವುದು ಯಶಸ್ಸು, ಸಮೃದಿದ್ಧ್, ಒಗ್ಗಟ್ಟಿನ ಸಂಕೇತವನ್ನು ನೀಡುವಂತಹದ್ದು. ಪರೋಪಕಾರವನ್ನು ಮಾಡಿ, ದೌರ್ಜನ್ಯ ಬೇಡ ಎಲ್ಲರಿಗೂ ಒಳಿತನ್ನು ಮಾಡಿ ಎನ್ನುವುದೇ ಖುರಾನ್‌ನ ಮೂಲಮಂತ್ರ. ಇಂತಹ ಸರ್ವಧರ್ಮ ಅರಿವು ಕಾರ್ಯಕ್ರಮವನ್ನು ಯುವ ಜನತೆಗೆ ಕಳೆದ ಹತ್ತು ವರ್ಷಗಳಿಂದ ನೀಡುವ ಮೂಲಕ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಸಮಾಜಕ್ಕೆ ಮಾದರಿಯಾಗಿದೆ” ಎಂದು ತಿಳಿಸಿದರು.


ಸನಾತನ ಹಿಂದೂ ಧರ್ಮದ ಸಾರವನ್ನು ಮಕ್ಕಳಿಗೆ ತಿಳಿಸಿ ಮಾತನಾಡಿದ ಎಸ್.ಎನ್.ಎಮ್ ಪೊಲಿಟೆಕ್ನಿಕ್ ಮೂಡುಬಿದಿರೆ ಇಲ್ಲಿಯ ಉಪನ್ಯಾಸಕರಾದ ಡಾ. ಎಸ್.ಪಿ.ಗುರುದಾಸ್ ಇವರು, “ಧರ್ಮಗಳಲ್ಲಿರುವ ಸತ್‌ವಿಚಾರಗಳನ್ನರಿತು ಬದುಕಿನಲ್ಲಿ ಅಳವಡಿಸಿ ನಡೆಯುವುದೇ ಧರ್ಮದ ರಕ್ಷಣೆ. ಎಲ್ಲಾ ಧರ್ಮಗಳ ಅಂತಿಮ ಸಂದೇಶ ಮಾನವ ಜನಾಂಗದ ಕಲ್ಯಾಣವೇ ಆಗಿದೆ. ಅಹಂಕಾರ ದರ್ಪಗಳನ್ನು ಬಿಟ್ಟು ಪ್ರತಿಫಲಾಪೇಕ್ಷೆ ಇಲ್ಲದೆ ಬದುಕು ಸಾಗಿಸಿದರೆ, ನೈಜಾರ್ಥದಲ್ಲಿ ಧರ್ಮದ ಪಾಲನೆಯಾದಂತೆ” ಎಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಇವರು “ಸಮಾಜಕ್ಕಾಗಿ ಬದುಕಿ, ಅಹಂಕಾರ ತ್ಯಜಿಸಿ, ಶಾಂತಿಯ ಮಂತ್ರ ಪಠಿಸಿ, ಪರೋಪಕಾರದ ಮೂಲಕ ಸಮಾಜದ ಆಸ್ತಿಗಳಾಗಿ, ಈ ಕಾರ್ಯಕ್ರಮದ ಸಂದೇಶವನ್ನು ಜೀವನದುದ್ದಕ್ಕೂ ಅಳವಡಿಸಿ ದೇಶದ ಸತ್ಪçಜೆಗಳಾಗಿ” ಎಂದು ಮಕ್ಕಳಿಗೆ ಕರೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿದರು. ಆಡಳಿತ ನಿರ್ದೇಶಕ ಡಾ. ಸಂಪತ್ ಕುಮಾರ್ ಪ್ರಾಸ್ತವಿಕ ಮಾತುಗಳನ್ನಾಡಿದರು. ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ವಂದಿಸಿದರು. ಜಯಶೀಲ ಹಾಗೂ ಜಯಲಕ್ಷಿ÷್ಮ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ , ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಮಲವಂತಿಗೆ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಇಂದಬೆಟ್ಟು : ಬೃಹತ್ ಗಾತ್ರದ ಕಾಳಿಂಗ ಸರ್ಪ ಪತ್ತೆ: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಅಶೋಕ್

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ಪ್ರಕರಣ ಪ್ರತಿಭಟನೆಗೆ ಪೊಲೀಸರಿಂದ ಅನುಮತಿ ನಿರಾಕರಣೆ

Suddi Udaya

ಅಖಿಲ ಕರ್ನಾಟಕ ರಾಜಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ. ಬೆಳ್ತಂಗಡಿ ಇವರ ನೇತೃತ್ವದಲ್ಲಿ ಫೆ.17, 18, 19ರಂದು ಮಾರಿಗುಡಿ ಮೈದಾನದಲ್ಲಿ ‘ಬೆಳ್ತಂಗಡಿ ಸಂಭ್ರಮ’

Suddi Udaya

ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂರಿಂದ ಮತದಾನ

Suddi Udaya

ಅರಸಿನಮಕ್ಕಿ : ಅರಿಕೆಗುಡ್ಡೆ ಸಮೀಪ ರಸ್ತೆಗೆ ಬಿದ್ದ ಮರ : 7 ವಿದ್ಯುತ್ ಕಂಬಗಳು ಧರಾಶಾಯಿ

Suddi Udaya
error: Content is protected !!