29.8 C
ಪುತ್ತೂರು, ಬೆಳ್ತಂಗಡಿ
October 21, 2026
ವರದಿ

ಉಜಿರೆ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪೂಲ್ ಕ್ಯಾಂಪಸ್ ಡ್ರೈವ್

ಉಜಿರೆ: ಎಸ್‌ಡಿಎಂ ಪಾಲಿಟೆಕ್ನಿಕ್, ಉಜಿರೆಯ ಪ್ಲೇಸ್‌ಮೆಂಟ್ ಸೆಲ್ ವತಿಯಿಂದ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶ ಒದಗಿಸುವ ಉದ್ದೇಶದಿಂದ ಪೂಲ್ ಕ್ಯಾಂಪಸ್ ನೇಮಕಾತಿ ಶಿಬಿರವನ್ನು ಆಯೋಜಿಸಲಾಯಿತು.

ಪ್ರತಿಷ್ಠಿತ ಸಂಸ್ಥೆಯಾದ ಟ್ರೆಲಿಬೊರ್ಗ್ ಸೀಲಿಂಗ್ ಸೊಲ್ಯೂಶನ್ಸ್, ಬೆಂಗಳೂರು ನೇಮಕಾತಿ ಪ್ರಕ್ರಿಯೆಗಾಗಿ ಕಾಲೇಜಿಗೆ ಆಗಮಿಸಿತು. ಈ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿಗಳಾದ ಸೋಫಿಯಾ, ಯಮುನಾ ಮತ್ತು ಸಿದ್ದಲಿಂಗಪ್ಪ ನೇಮಕಾತಿ ಪ್ರಕ್ರಿಯೆಯನ್ನು ನಡೆಸಿದರು. ಕಾರ್ಯಕ್ರಮಕ್ಕೆ ಕಾಲೇಜು ಪ್ರಾಂಶುಪಾಲರಾದ ಸಂತೋಷ ಅವರು ಹಾಜರಾಗಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ, ಉದ್ಯೋಗ ಮೇಳಗಳು ವೃತ್ತಿಜೀವನ ರೂಪಿಸಲು ಅತ್ಯಂತ ಮಹತ್ವದ್ದೆಂದು ತಿಳಿಸಿದರು.

ಪ್ಲೇಸ್‌ಮೆಂಟ್ ಅಧಿಕಾರಿ ಅಮರೇಶ ಹೆಬ್ಬಾರ್ ಸ್ವಾಗತಿಸಿ, ಪ್ಲೇಸ್‌ಮೆಂಟ್ ಸೆಲ್‌ನ ಪ್ರಯತ್ನಗಳನ್ನು ಹಿರಿಮೆಯಾಗಿ ವಿವರಿಸಿದರು. ಒಟ್ಟು 46 ಮಂದಿ ಪಕ್ಕದ ಪಾಲಿಟೆಕ್ನಿಕ್‌ಗಳ ವಿದ್ಯಾರ್ಥಿಗಳು ಈ ಡ್ರೈವ್‌ನಲ್ಲಿ ಭಾಗವಹಿಸಿದರು. ಪ್ಲೇಸ್‌ಮೆಂಟ್ ಸಮಿತಿ ಸದಸ್ಯರಾದ ಭಾರದ್ವಾಜ್ ಬಲ್ಲಾಳ್, ಶಿವರಾಜ್ ಪಿ, ಶ ಅಶ್ವಿನ್ ಮರಾಟೆ, ಅಶೋಕ್, ಶಾದ್ವಲಾ ಸೆಬಾಸ್ಟಿಯನ್ ಹಾಗೂ ವಿದ್ಯಾಲಕ್ಷ್ಮಿ ಅವರ ಸಹಕಾರದಿಂದ ನೇಮಕಾತಿ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು. ಈ ಕ್ಯಾಂಪಸ್ ಡ್ರೈವ್ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ವಿದ್ಯಾರ್ಥಿಗಳಲ್ಲಿ ಭವಿಷ್ಯದ ಬಗ್ಗೆ ಹೊಸ ಆಶಾಭಾವನೆ ಹಾಗೂ ಪ್ರೇರಣೆಯನ್ನು ಮೂಡಿಸಿದೆ.

Related posts

ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ನಾರಾವಿ ಸಿಎ ಬ್ಯಾಂಕಿಗೆ ಸತತ 5 ವರ್ಷದಿಂದ ಸಾಧನಾ ಪ್ರಶಸ್ತಿ

Suddi Udaya

ಅಳದಂಗಡಿ: ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ಆರ್ ಚುನಾವಣಾ ಪ್ರಚಾರ ಸಭೆ

Suddi Udaya

ಬೆಳ್ತಂಗಡಿ ತಾಲೂಕು ಜಿಪಿಟಿ ಶಿಕ್ಷಕರ ಸಂಘದ ವತಿಯಿಂದ ‘ಸ್ನೇಹ ಸಂಗಮ’ ಕಾರ್ಯಕ್ರಮ

Suddi Udaya

ಜೂ.26: ಸೌಮ್ಯತಿಲಕ್ ಶೆಟ್ಟಿ ಇವರ ‘ಮಸಿಯ ಮಾತು’ ಕವನ ಸಂಕಲನ ಬಿಡುಗಡೆ

Suddi Udaya

ಬೆಳ್ತಂಗಡಿ: ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನ ದಿನಾಚರಣೆ

Suddi Udaya

ಬೆಳ್ತಂಗಡಿ: ‘ಶೌರ್ಯ’ ಶ್ರೀ ಧರ್ಮಸ್ಥಳ ತುರ್ತು ಸ್ಪಂದನಾ ತಂಡದ ಸಭೆ

Suddi Udaya
error: Content is protected !!