September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಕುವೆಟ್ಟು: ಶ್ರೀ ರಾಮನವಮಿ ಉತ್ಸವ-ಧಾರ್ಮಿಕ ಸಭೆ

ಕುವೆಟ್ಟು: ಶ್ರೀರಾಮ ಸೇವಾ ಸಮಿತಿ ಮದ್ದಡ್ಕ ವಿಶ್ವ ಹಿಂದೂ ಪರಿಷತ್ ಭಜರಂಗದಳ ಮದಡ್ಕ ಶಾಖೆ ಇದರ ಜಂಟಿ ಆಶ್ರಯದಲ್ಲಿ‌ ಜರಗುವ 6ನೇ ವರ್ಷದ ಶ್ರೀ ರಾಮನವಮಿ ಉತ್ಸವದ ಪ್ರಯುಕ್ತ ಮಾ 26 ರoದು ನಡೆದ ಭಜನಾ ಕಾರ್ಯಕ್ರಮಕ್ಕೆ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಎಂ ರಘುರಾಮ್ ಭಟ್ ಮಠ ಭಜನಾ ಮಂದಿರದಲ್ಲಿ ವೈದಿಕ ವಿಧಿ ವಿಧಾನಗಳನ್ನು ನೆರವೇರಿಸಿ ಭಜನಾ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ‌ ಅತಿಥಿಗಳಾಗಿ ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಮೂಲ್ಯ ಕೊಂಡೆಮಾರು.,ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಮನೋಹರ ಕೇದಳಿಕೆ, ಕಾರ್ಯದರ್ಶಿ ಪ್ರೀತಂ ಆಚಾರ್ಯ, ವಿಶ್ವ ಹಿಂದೂ ಪರಿಷತ್ ಮದ್ದಡ್ಕ ಇದರ ಕಾರ್ಯದರ್ಶಿ ವಿನೋದ್ ಶೆಣೈ, ಭಜರಂಗದಳ ಮದ್ದಡ್ಕ ಘಟಕದ ಸಂಚಾಲಕ ಯಶೋಧರ ಶೆಟ್ಟಿ ಅರ್ಕಜೆ, ಮದ್ದಡ್ಕ ಶ್ರೀ ರಕ್ತೇಶ್ವರಿ ಮತ್ತು ಪಿಲಿಚಾಮುಂಡಿ ದೈವಸ್ಥಾನದ ಸೇವಾ ಟ್ರಸ್ಟ್ ನ ಕೋಶಾಧಿಕಾರಿ ಪ್ರಭಾಕರ ಶೆಟ್ಟಿ ಉಪ್ಪಡ್ಕ ಮತ್ತಿತರರು ಉಪಸಿತರಿದ್ದರು.

ಸಾಯಂಕಾಲ ಭಜನಾ ಕಾರ್ಯಕ್ರಮದ ಮಂಗಳೋತ್ಸವ ಕಾರ್ಯಕ್ರಮ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಿತು. ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಮನೋಹರ ಕೇದಳಿಕೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ಉಮೇಶ್ ನಡ್ತಿಕಲ್ಲು ಧಾರ್ಮಿಕ ಉಪನ್ಯಾಸ ನೀಡಿದರು

ಮುಖ್ಯ ಅತಿಥಿಗಳಾಗಿ ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಇದರ ಅಧ್ಯಕ್ಷ ವಿಷ್ಣು ಮರಾಠೆ, ಭಜರಂಗದಳ ಬೆಳ್ತಂಗಡಿ ಪ್ರಖಂಡ ಸಂಯೋಜಕರು ಪ್ರಭಾಕರ ಮಚ್ಚಿನ ಆಗಮಿಸಿದ್ದರು.

ವೇದಿಕೆಯಲ್ಲಿ ಶ್ರೀರಾಮ ಭಜನಾ ಮಂದಿರದ ಗೌರವಾಧ್ಯಕ್ಷ ರಾಜ್ ಪ್ರಕಾಶ್ ಶೆಟ್ಟಿ ಪಡ್ಡೈಲು. ಪ್ರಧಾನ ಕಾರ್ಯದರ್ಶಿ ಪ್ರೀತಂ ಆಚಾರ್ಯ, ವಿಶ್ವಹಿಂದೂ ಪರಿಷತ್ ಮದ್ದಡ್ಕ ಘಟಕದ ಅಧ್ಯಕ್ಷ ಗಣೇಶ್ ಶೆಟ್ಟಿ ಅರ್ಕಜೆ, ಕಾರ್ಯದರ್ಶಿ ವಿನೋದ್ ಶೆಣೈ ಮದ್ದಡ್ಕ, ಬಜರಂಗದಳ ಮದ್ದಡ್ಕ ಇದರ ಸಂಚಾಲಕರು ಯಶೋಧರ ಶೆಟ್ಟಿ ಅರ್ಕಜೆ ಉಪಸ್ಥಿತರಿದ್ದರು.

ಪ್ರಭಾಕರ ಶೆಟ್ಟಿ ಸ್ವಾಗತಿಸಿ ದಿನೇಶ್ ಕಾರ್ಯಕ್ರಮ ನಿರೂಪಿಸಿದರು. ಶೈಲೇಶ್ ಧನ್ಯವಾದ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ವಿಧಾಶ್ರೀ ಕಲಾವಿದರು ಕುಡ್ಲ (ರಿ) ಇವರಿಂದ ಜೈ ಹನುಮಾನ್ ಎಂಬ ನಾಟಕ ಪ್ರದರ್ಶನಗೊಂಡಿತು ಶ್ರೀರಾಮ ಸೇವಾ ಸಮಿತಿಯ ಪದಾಧಿಕಾರಿಗಳು ವಿಶ್ವ‌ ಹಿಂದೂ ಪರಿಷತ್ ಹಾಗೂ ಬಜರಂಗದಳ ಪದಾಧಿಕಾರಿಗಳು ಸರ್ವ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Related posts

ಕಿರಣ್ ಚಂದ್ರ ಪುಷ್ಪಗಿರಿಯವರಿಂದ ಶಿಬಾಜೆ ಅಡ್ಡಹಳ್ಳ ಫ್ರೆಂಡ್ಸ್ ಇದರ ನೂತನ ಲೋಗೋ ಬಿಡುಗಡೆ

Suddi Udaya

ಆಟೋ ರಿಕ್ಷಾ ಮಗುಚಿಬಿದ್ದು ಮೃತಪಟ್ಟ ಬಾಲಕನ ಮನೆಗೆ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಭೇಟಿ

Suddi Udaya

ಜ.22: ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆ: ಬೆಳ್ತಂಗಡಿ ತಾಲೂಕಿನಾದ್ಯಂತ ಸಂಭ್ರಮಿಸಲು ಸಜ್ಜಾಗಿರುವ ರಾಮಭಕ್ತರು

Suddi Udaya

ಭಾಗವತ ಮಹೇಶ ಕನ್ಯಾಡಿ ಅವರಿಗೆ ಗೌರವಾರ್ಪಣೆ

Suddi Udaya

ಮಡಂತ್ಯಾರುವಿನಲ್ಲಿ ವೈಭವದ ಮೊಸರು ಕುಡಿಕೆ ಉತ್ಸವ-ಸಾಧಕರಿಗೆ ಸನ್ಮಾನ, ಧಾರ್ಮಿಕ ಕಾರ್ಯಕ್ರಮ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ  ಬೆಂಗಳೂರಿನ ನೃತ್ಯಕುಟೀರ ತಂಡದವರಿಂದ ವಿದುಷಿ ಶ್ರೀಮತಿ ದೀಪಾ ಭಟ್ ನಿರ್ದೇಶನದಲ್ಲಿ ನೃತ್ಯರೂಪಕ

Suddi Udaya
error: Content is protected !!