37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಅಳದಂಗಡಿ: ಬಡಗಕಾರಂದೂರು ಒಕ್ಕೂಟದ ತ್ರೈಮಾಸಿಕ ಸಭೆ

ಅಳದಂಗಡಿ ಶ್ರೀ ಕ್ಷೇ.ಧ. ಗ್ರಾ.ಯೋಜನೆ, ಬಿ. ಸಿ ಟ್ರಸ್ಟ್, (ರಿ.) ಗುರುವಾಯನಕೆರೆ ಇದರ ಆಶ್ರಯದಲ್ಲಿ ಬಡಗಕಾರಂದೂರು ‘ಬಿ’ ಒಕ್ಕೂಟದ ತ್ರೈಮಾಸಿಕ ಸಭೆಯು ಸೆ.21 ರಂದು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಬಡಗಕಾರಂದೂರು ಇಲ್ಲಿ ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಬಿಕ್ಕಿರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಒಕ್ಕೂಟದ ಜವಾಬ್ದಾರಿ ತಂಡವಾದ ಶ್ರೀಮತಾ ಸಂಘದ ಸದಸ್ಯರಿಂದ ದೀಪ ಪ್ರಜ್ವಲನೆ ಮೂಲಕ ಸಭೆಯು ಆರಂಭವಾಯಿತು. ಸಂಘದ ವರದಿಯನ್ನು ಸದಸ್ಯರಾದ ಯಶೋದ ಓದಿದರು. ವಲಯದ ಮೇಲ್ವಿಚಾರಕರಾದ ಯಶೋದ ಯಂ. ಮಾತನಾಡಿ ಸಂಘದ ನಿರ್ವಹಣೆ, ಭಾಗವಹಿಸುವಿಕೆ, ಯೋಜನೆ ನಡೆದು ಬಂದ ಹಾದಿ, ವಿವಿಧ ಸೇವಾ ಕಾರ್ಯಗಳು, ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಅನುದಾನ, ಪ್ರಗತಿ ರಕ್ಷಾ ಕವಚ ಹಾಗೂ ಇನ್ನೂ ಅನೇಕ ಯೋಜನೆಗೆ ಸಂಬಂಧಪಟ್ಟ ಎಲ್ಲಾ ವಿಚಾರಗಳನ್ನು ತಿಳಿಸಿದರು ಸಭೆಯಲ್ಲಿ ಜನಜಾಗೃತಿ ಅಧ್ಯಕ್ಷರಾದ ಯಶೋಧರ ಸುವರ್ಣ ಉಪಸ್ಥಿತರಿದ್ದರು.

ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಬಿಕ್ಕಿರ ಸಭೆಯನ್ನುದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಸೇವಾ ಪ್ರತಿನಿಧಿ ಶ್ರೀಮತಿ ಪೂರ್ಣಿಮಾ ಪ್ರಮೋದ್, ಜೊತೆ ಕಾರ್ಯದರ್ಶಿ ಶಾರದ, ಪದಾಧಿಕಾರಿಗಳು ಉಪಸ್ಥಿತರಿದ್ದರು ಅಶ್ವಥ್ ಆಚಾರ್ಯ ಕೆದ್ದು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.

Related posts

ಕುಕ್ಕಾಜೆ ದಿ. ಕುಶಾಲಪ್ಪ ನಾಯ್ಕರ ಮನೆಯವರಿಗೆ ಧನಸಹಾಯ ಹಸ್ತಾಂತರ

Suddi Udaya

ಅಟ್ಲಾಜೆ ದ.ಕ.ಜಿ.ಪ.ಕಿ.ಪ್ರಾ ಶಾಲೆಯಲ್ಲಿ ಅ೦ತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಕೊಕ್ರಾಡಿ ಸರಕಾರಿ ಪ್ರೌಢಶಾಲೆ ಪುಸ್ತಕ ವಿತರಣೆ ಮತ್ತು ಪೋಷಕರ ಸಭೆ

Suddi Udaya

ಸಿಯೋನ್ ಆಶ್ರಮದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ತಂದೆಯಂದಿರ ದಿನಾಚರಣೆ

Suddi Udaya

ಕುಕ್ಕೇಡಿ ಗ್ರಾ.ಪಂ. ನಲ್ಲಿ “ಮಕ್ಕಳ ಗ್ರಾಮ ಸಭೆ”

Suddi Udaya
error: Content is protected !!