September 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪುದುವೆಟ್ಟು ಓಂ ಶಕ್ತಿ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

ಪುದುವೆಟ್ಟು : ಓಂ ಶಕ್ತಿ ಸಂಜೀವಿನಿ ಮಹಿಳಾ ಒಕ್ಕೂಟ ಪುದುವೆಟ್ಟು ಇದರ 2024-2025 ನೇ ಸಾಲಿನ ವಾರ್ಷಿಕ ಮಹಾ ಸಭೆಯು ಸೆ. 22 ರಂದು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಕಮಲ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯವರು ವಲಯ ಮೇಲ್ವಿಚಾರಕರಾದ ಶ್ರೀಮತಿ ವೀಣಾಶ್ರೀ , ಒಕ್ಕೂಟದ ಪದಾಧಿಕಾರಿಗಳು, ಒಕ್ಕೂಟದ ಸಿಬ್ಬಂದಿಗಳು , ಸದಸ್ಯರು ಉಪಸ್ಥಿತರಿದ್ದರು. ಶ್ರೀಮತಿ ಸರೋಜ ಇವರ ಗಣೇಶ ಸ್ತುತಿ ಯೊಂದಿಗೆ ಮಹಾ ಸಭೆಯು ಪ್ರಾರಂಭಗೊಂಡಿತು. ಶ್ರೀಮತಿ ಸರಿತಾ ಸ್ವಾಗತಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಪ್ರಸ್ತಾವಿಕ ಭಾಷಣ ಮಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು.


ಗ್ರಾಮ ಪಂಚಾಯತ್ಅಧ್ಯಕ್ಷ ಪೂರ್ಣಕ್ಷ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಶ್ರೀಮತಿ ಮನುಶ್ರೀ ಒಕ್ಕೂಟದ ಕಾರ್ಯದರ್ಶಿ ಇವರು ವಾರ್ಷಿಕ ವರದಿಯನ್ನು ಮಂಡಿಸಿದರು. . BRP-PRI ಶ್ರೀಮತಿ ಶ್ರೀಕಲಾ ಇವರು VPRP ಬಗ್ಗೆ ಸವಿಸ್ತಾರ ವಾಗಿ ಮಾಹಿತಿ ನೀಡಿದರು ನಂತರ ಪಶು ಸಖಿ ವಾರ್ಷಿಕ ಜಮಾ ಖರ್ಚಿನ ಮಂಡನೆ ಮಾಡಿದರು. ವಲಯ ಮೇಲ್ವಿಚಾರಕರು ಸಂಜೀವಿನಿಯ ಧ್ಯೇಯ ಉದ್ದೇಶ ಗಳ ಬಗ್ಗೆ ಸವಿಸ್ತಾಸಾರ ವಾಗಿ ಮಾತನಾಡಿದರು.BRP-PRI ಶ್ರೀ ಕಲಾ ಇವರು ಮಾದಕ ಮುಕ್ತ ಕರ್ನಾಟಕ ಇದರ ಪ್ರತಿಜ್ಞಾವಿಧಿಯನ್ನು ವಾಚಿಸಿದರು. ವಲಯ ಮೇಲ್ವಿಚಾರಕರು ಲಿಂಗತ್ವ ಆಧಾರಿತ ದೌರ್ಜನ್ಯ ಬಗ್ಗೆ ಮಾಹಿತಿ ನೀಡಿದರು. ಹರಿಣಾಕ್ಷಿ ಧನ್ಯವಾದವಿತ್ತರು.

Related posts

ಅಗ್ರಿಲೀಫ್ ಸಂಸ್ಥೆಯಲ್ಲಿ ವಿವಿಧ ಉದ್ಯೋಗಾವಕಾಶ: ಆ.18ರಂದು ಒಷ್ಯನ್ ಪರ್ಲ್ ನಲ್ಲಿ ಮೆಗಾ ಉದ್ಯೋಗ ಮೇಳ

Suddi Udaya

ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪಬ್ಲೀಕ್ ಪರೀಕ್ಷೆ ಯಶಸ್ವಿ ಆರಂಭ: ಪರೀಕ್ಷೆ ಬರೆಯುತ್ತಿದ್ದಾರೆ 70 ಪ್ರೌಢಗಳ 4215 ವಿದ್ಯಾರ್ಥಿಗಳು

Suddi Udaya

ಅವೈಜ್ಞಾನಿಕ ಹಾಗೂ ಜನಹಿತಪರವಲ್ಲದ ಕಸ್ತೂರಿರಂಗನ್ ವರದಿ ತಡೆಹಿಡಿದು ವಜಾಮಾಡುವ ತನಕ ಹೋರಾಟವನ್ನು ಮುನ್ನಡೆಸೋಣ : ಫಾ| ಸುನಿಲ್ ಐಸಕ್ ಬೆಂಬಲ

Suddi Udaya

ಕಳಿಯ ಗ್ರಾಮ ಪಂಚಾಯತ್ ಅರಿವು ಕೇಂದ್ರದ ಸಭೆ

Suddi Udaya

ಚಾಂದ್ರಮಾನ ಯುಗಾದಿಯಂದು ಮದ್ದಡ್ಕ ತಾಯಿ ಪಿಲಿಚಾಮುಂಡಿ ದೈವದ ವರ್ಷಾವಧಿ ನೇಮೋತ್ಸವ

Suddi Udaya

ಅಮೆರಿಕದಲ್ಲಿ ಕಾಲಭೈರವೇಶ್ವರ ದೇಗುಲ ನಿರ್ಮಾಣ: ಕಾಮಗಾರಿ ಪರಿಶೀಲಿಸಿದ ಮಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ

Suddi Udaya
error: Content is protected !!