September 6, 2026
ಸಂಘ-ಸಂಸ್ಥೆಗಳು

ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

ಬೆಳ್ತಂಗಡಿ : ರೈತರು ಸಾಲವಾಗಿ ಪಡೆದ ಹಣವನ್ನು ಸದುದ್ದೇಶ ಗಳಿಗೆ ಬಳಸಿಕೊಂಡು ಪ್ರತಿಯೊಬ್ಬ ಸದಸ್ಯರು ಕ್ಲಪ್ತ ಸಮಯದಲ್ಲಿ ಸಾಲವನ್ನು ಮರುಪಾವತಿ ಮಾಡುವುದರಿಂದ ಸಂಘ ಹೆಚ್ಚಿನ ವ್ಯವಹಾರ ಮಾಡಿ ಲಾಭ ಗಳಿಸಲು ಸಾಧ್ಯವಾಯಿತು. ಸದಸ್ಯರಿಗೆ ಶೇ.17 ಡಿವಿಡೆಂಡ್ ನೀಡಲಾಗುವುದು ಎಂದು ಕಳಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ನಡೆದ ಮಹಾ ಸಭೆಯಲ್ಲಿ ಅಧ್ಯಕ್ಷ ವಸಂತ ಮಜಲು ಸೆ 6 ರಂದು ಘೋಷಿಸಿದರು.


2025-26 ಶೇ.97 ಶೇಕಡ ಸಾಲ ವಸೂಲಾತಿಯಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
2025-26 ನೇ ಸಾಲಿನಲ್ಲಿ 337 ಕೋಟಿ ವ್ಯವಹಾರ ಮಾಡಿ 1, 41ಕೋಟಿ ಲಾಭ ಹಾಗೂ ಸಾಲ ವಸೂಲಾತಿಯಲ್ಲಿ ಕಳೆದ 15 ವರ್ಷಗಳಿಂದ ಸತತವಾಗಿ ಪ್ರಶಸ್ತಿ ಡಿ.ಸಿ.ಸಿ ಬ್ಯಾಂಕ್ ನಿಂದ ಲಭಿಸುತ್ತಿದೆ ಎಂದು ಹೇಳಿದರು.ಆಡಿಟ್ ಸಂದರ್ಭ ಸಂಘವನ್ನು ‘ಎ’ತರಗತಿಯಲ್ಲಿ
ವರ್ಗೀಕರಿಸಲಾಗಿದೆ. ಮುಂದೆಯೂ ಸಂಘದ ಅಭಿವೃದ್ಧಿಗೆ ಸದಸ್ಯರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಪಿಯುಸಿ,ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿ ಸಂಘದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರಾದ
ನಾಳ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ.ರಾಘವೇಂದ್ರ ಅಸ್ರಣ್ಣರು,ಬೆಳ್ತಂಗಡಿ ರಾಘವೇಂದ್ರ ಸ್ವಾಮಿ ಮಠ ಪ್ರಧಾನ ಅರ್ಚಕರಾದ ರಾಘವೇಂದ್ರ ಬಾಂಗೀಣ್ಣಾಯ,ನಿವೃತ್ತ ಪ್ರಾಂಶುಪಾಲರಾದ ದಿವಾಕರ ಆಚಾರ್ಯ, ಶ್ರೀಮತಿ ಸೌಭಾಗ್ಯ ಭಟ್,ಹಾಗೂ ಸಂಘದ ವಠಾರದಲ್ಲಿ ನೀರು ಖಚಿತವಾಗಿ ತಿಳಿದು ಸಂಶೋಧನೆ ಮಾಡಿ ಕೊಳವೆ ಬಾವಿಯ ಕೊರೈಯಿಸಿದ ಬಂದಾರು ಜನಾರ್ದನ ಗೌಡ ನಿರ್ಮುಡ ಅವರನ್ನು ಸನ್ಮಾನಿಸಿ, ಗೌರವಿಸಿದರು.
ಸಂಘದ ಮಳಿಗೆಯಿಂದ ಅತೀ ಹೆಚ್ಚು ರಾಸಾಯನಿಕ, ಕೃಷಿ ಉತ್ಪನ್ನ ,ಪರಿಕರ ಸಾಮಾಗ್ರಿಗಳನ್ನು ಖರೀದಿ ಮಾಡಿದ ಕೃಷಿಕರನ್ನು
ಗೌರವಿಸಲಾಯಿತು.
ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷ ರಾಜ್ ಪ್ರಕಾಶ್ ಶೆಟ್ಟಿ ನಿರ್ದೇಶಕರಾದ ಎಂ.ಹರಿದಾಸ ಪಡಂತ್ತಾಯ ಚಂದ್ರಾವತಿ, ಮಮತಾ ಶೆಟ್ಟಿ, ಗೋಪಾಲ ನಾಯ್ಕ್., ಕೆ.ಕುಶಾಲಪ್ಪ ಗೌಡ, ಬಾಲಕೃಷ್ಣ ಗೌಡ ಬಿರ್ಮೊಟ್ಟು .ಉದಿತ್ ಕುಮಾರ್, ಲೋಕೇಶ್ ಎನ್., ಕೇಶವ ಪೂಜಾರಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಸುದರ್ಶನ್ ಮತ್ತಿತರರಿದ್ದರು.
ಸಂಘದ ಕಾರ್ಯ ನಿರ್ವಹಣಾಧಿಕಾರಿ ಕವಿತಾ ಶೆಟ್ಟಿ ಪರಿಶೋಧನಾ ವರದಿ ಮಂಡಿಸಿದರು. ಸಂತೋಷ್ ಕುಮಾರ್ ಲೆಕ್ಕ ಪತ್ರ ಮಂಡನೆ ಮಾಡಿದರು. ನಿರ್ದೇಶಕ ಶೇಖರ ನಾಯ್ಕ ಸ್ವಾಗತಿಸಿದರು.
ಉಮೇಶ್ ಕೇಲ್ದಡ್ಕ ನಿರೂಪಿಸಿದರು. ಸಂತೋಷ ಕುಮಾರ ವಂದಿಸಿದರು.

Related posts

ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ವತಿಯಿಂದ ಖಂಡಿಗ ನಿವಾಸಿ ವಾಸಪ್ಪ ಗೌಡರಿಗೆ ಚಿಕಿತ್ಸಾ ನೆರವು

Suddi Udaya

ಜೆಸಿಐ ಕೊಕ್ಕಡ ಕಪಿಲಾ ವತಿಯಿಂದ ಸ.ಕಿ.ಪ್ರಾ. ಶಾಲೆಯಲ್ಲಿ ಜನಗಣಮನ ಬರವಣಿಗೆ ಸ್ಪರ್ಧೆ

Suddi Udaya

ಕರ್ನಾಟಕ ಸೀರೋ‌‌ ಮಲಬಾರ್ ಕ್ಯಾಥೊಲಿಕ್ ಅಸೋಸಿಯೇಷನ್ (ಕೆ‌ಎಸ್‌ಎಮ್‌ಸಿಎ) ವತಿಯಿಂದ ಕಾರ್ಗಿಲ್ ವಿಜಯ ದಿವಸ ನಿವೃತ್ತ ಯೋಧರಿಗೆ ಸನ್ಮಾನ

Suddi Udaya

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಕಡಿರುದ್ಯಾವರ ಶಾಖೆಯ ನೂತನ ಗೋದಾಮು, ಬ್ಯಾಂಕಿಂಗ್ ಕಛೇರಿ ಹಾಗೂ ಸಭಾಭವನ ಉದ್ಘಾಟನೆ

Suddi Udaya

ಚಾರ್ಮಾಡಿ ಹೊಸಮಠ ಪ್ರದೇಶದಲ್ಲಿ ಓಣಂ ಆಚರಣೆ

Suddi Udaya

ಬೆಸ್ಟ್ ಎಂಎಲ್ಎ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜರಿಗೆ ಪಡಂಗಡಿ ಸೊಸೈಟಿಯಿಂದ ಗೌರವಾರ್ಪಣೆ

Suddi Udaya
error: Content is protected !!