37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನವರಾತ್ರಿ ಮಹೋತ್ಸವಕ್ಕೆ ಚಾಲನೆ

ಬೆಳ್ತಂಗಡಿ: ದೇಯಿಬೈದೈತಿ ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಸೆ.22 ರಂದು ನವರಾತ್ರಿ ಮಹೋತ್ಸವ ಪ್ರಾರಂಭಗೊಂಡಿತು.
ಪುತ್ತೂರು ತಾಲೂಕು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ, ಉದ್ಯಮಿ ವರದರಾಜ ಉಪ್ಪಿನಂಗಡಿ ದೀಪ ಬೆಳಗಿಸಿ ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಿ ನವರಾತ್ರಿಯ ಧಾರ್ಮಿಕ ಕಾರ್ಯಕ್ರಮ ನಮ್ಮ ಅಂತರಾತ್ಮವನ್ನು ಬೆಳಗಲಿ ಶ್ರೀ ಕ್ಷೇತ್ರ ಧಾರ್ಮಿಕತೆಯ ಮೂಲಕ ಸಾಮಾಜಿಕ ಜಾಗೃತಿಯ ಕೆಲಸ ಮಾಡುತ್ತಿದೆ ಎಂದರು.

ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ರಾದ ರವಿಪೂಜಾರಿ ಪೂಜಾರಿ ಚಿಲಿಂಬಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ನವರಾತ್ರಿಯ ದಿನ ನಿತ್ಯ ಮಹಾ ಮಾತೆ ದೇಯಿ ಬೈದ್ಯೆತಿ ಗೆ ವಿಶೇಷ ಅಲಂಕಾರ ಪೂಜೆ ,ಅನ್ನದಾನ ಸೇವೆ, ವಾಹನ ಪೂಜೆ, ವಿಜಯ ದಶಮಿ ದಿನ ಮಕ್ಕಳಿಗೆ ಅಕ್ಷರಾಭ್ಯಾಸ ಜರಗಲಿದ್ದು ಭಕ್ತಾದಿಗಳು ಮಹಾ ಮಾತೆಯ ಕೃಪೆಗೆ ಪಾತ್ರರಾಗ ಬೇಕು ಎಂದರು.

ಕ್ಷೇತ್ರದ ಶಿವಾನಂದ ತಂತ್ರಿಗಳು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.ಆದಿಶಕ್ತಿ ಮಹಿಳಾ ಭಜನಾ ಸಂಘ ಪಟ್ಟೆ ಇವರಿಂದ ಭಜನಾ ಸಂಕೀರ್ತನೆ ನಡೆಯಿತು.

ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷರಾದ ಪೀತಾಂಬರ ಹೆರಾಜೆ, ಜಯಂತ ನಡುಬೈಲ್ ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್ ಕೆ.ಬಿ. ಕೋಶಾಧಿಕಾರಿ ಮೋಹನ್ ದಾಸ್ ವಾಮಂಜೂರು,ಟ್ರಸ್ಟಿನ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ ಸೆಂಟರ್ ಮೆಲ್ಕಾರ್, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್,ಕ್ಷೇತ್ರದ ಮೊಕೇಸರ ಶ್ರೀಧರ ಪೂಜಾರಿ, ಪ್ರಮುಖರಾದ ಆರ್ ಸಿ ನಾರಾಯಣ ನಿತೀಶ್ ಕುಮಾರ್ ಶಾಂತಿವನ, ನಾರಾಯಣ ಕುರಿಕಾರ್, ಮಂಗಳೂರು ಮಾಜಿ ಮೇಯರ್ ಹೇಮಲತಾರಘು ಸಾಲ್ಯಾನ್, ಶಾಲಿನಿ ರವಿ ಪೂಜಾರಿ,ರೇಖಾ ನಾಗರಾಜ್, ಪ್ರದೀಪ ಪೂಜಾರಿ, ಜನಾರ್ಧನ ಪೂಜಾರಿ ನೂಜ,ಮತ್ತಿತರರು ಉಪಸ್ಥಿತರಿದ್ದರು. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.ನೂರಾರು ಭಕ್ತಾಭಿಮಾನಿಗಳು ಭಾಗವಹಿಸಿ ತಾಯಿ ದೇಯಿ ಬೈದ್ಯೆತಿ ಕೃಪೆಗೆ ಪಾತ್ರರಾದರು.

Related posts

ಮಡಂತ್ಯಾರು ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಹೃದಯಾಘಾತದಿಂದ ನಿಧನ

Suddi Udaya

ಪುದುವೆಟ್ಟು: ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಬೆಳಾಲು ಮೈತ್ರಿ ಯುವಕ ಮಂಡಲದಿಂದ 20ನೇ ವರ್ಷದ ಮೊಸರು ಕುಡಿಕೆ ಉತ್ಸವ

Suddi Udaya

ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟ: ಕರಾಟೆ ಶಿಕ್ಷಕ ಶಿಹಾನ್ ಅಬ್ದುಲ್ ರಹ್ಮಾನ್ ಅವರ ಶಿಷ್ಯಂದಿಯರಿಗೆ ಹಲವು ಪದಕ

Suddi Udaya

ಕಾಯರ್ತ್ತಡ್ಕ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಶ್ರೀಮತಿ ಚೈತನ್ಯ ಮತ್ತು ನಿರಂಜನ ಗೌಡ ರವರಿಂದ ವಿದ್ಯುತ್ ಚಾಲಿತ ಗಂಟೆ ಕೊಡುಗೆ

Suddi Udaya

ಯಕ್ಷಭಾರತಿ ಸಂಸ್ಥೆಯ ವತಿಯಿಂದ ಕೋಳ್ಯೂರು ರಾಮಚಂದ್ರ ರಾವ್ ರವರಿಗೆ ಸನ್ಮಾನ

Suddi Udaya
error: Content is protected !!