March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜಾತಿ ಗಣತಿ ಸಮೀಕ್ಷೆಯಲ್ಲಿ ಒಕ್ಕಲಿಗ ಗೌಡ ಸಮುದಾಯದವರು ಜಾತಿ ಕಾಲಂನಲ್ಲಿ ಒಕ್ಕಲಿಗ , ಉಪಜಾತಿ ಕಾಲಂನಲ್ಲಿ ಗೌಡ ಎಂದು ನಮೂದಿಸುವಂತೆ ತಾಲೂಕು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರು ಹೇಳಿಕೆ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರವು ಆಯೋಜಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025, ಸೆ. 22ರಿಂದ ಆರಂಭಗೊಂಡಿದ್ದು, ಈ ಸಮೀಕ್ಷೆಗೆ ನಿಯೋಜಿತ ಅಧಿಕಾರಿಗಳಿಂದ ಪ್ರತಿ ಮನೆಗೆ ಯುಹೆಚ್ ಐಡಿ ಸಂಖ್ಯೆ ಅಂಟಿಸಲಾಗಿದ್ದು ದಾಖಲಾತಿ ಕೆಲಸ ಪ್ರಾರಂಭಗೊಂಡಿರುತ್ತದೆ. ಸಮೀಕ್ಷೆದಾರರು ಮನೆಗೆ ಬಂದಾಗ ಸಮಸ್ತ ಒಕ್ಕಲಿಗ ಸಮಾಜದವರು ಆದಿಚುಂಚನಗಿರಿ ಮಹಾಸಂಸ್ಥಾನದ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಡಾ.ನಿರ್ಮಾಲಾನಂದನಾಥ ಮಹಾಸ್ವಾಮೀಜಿಯವರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ ರಾಜ್ಯ ಒಕ್ಕಲಿಗರ ಸಂಘ ಬೆಂಗಳೂರು ಇವರ ಸೂಚನೆಯಂತೆ ದ.ಕ ಜಿಲ್ಲಾ ಒಕ್ಕಲಿಗ ಗೌಡರ ಸೇವಾಸಂಘ ಇದರ ಆಶಯದಂತೆ ಸಮೀಕ್ಷೆಯ ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದು, ಉಪಜಾತಿ ಕಾಲಂನಲ್ಲಿ “ಗೌಡ” ಎಂದೂ, ಮಾತೃಭಾಷೆ ಕಾಲಂನಲ್ಲಿ ಪ್ರಾದೇಶಿಕ ಭಾಷೆಗಳಾದ ಕನ್ನಡ, ತುಳು ಇವುಗಳಲ್ಲಿ ಮಾತೃಭಾಷೆಯನ್ನು ನಮೂದಿಸುವಂತೆ ತಾಲೂಕು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರು ತಿಳಿಸಿದ್ದಾರೆ.

ಒಕ್ಕಲಿಗ ಗೌಡ ಸಮಾಜದ ಕೋಡ್ ಸಂಖ್ಯೆ ಎ-1541 ಆಗಿದ್ದು, ಇದನ್ನು ಸಹ ಗಮನಿಸಿಕೊಂಡು ನಾವು ಕೊಡುವ ಮಾಹಿತಿ ಪರಿಪೂರ್ಣವಾಗಿರುವಂತೆ ನೋಡಿಕೊಳ್ಳುವುದು ಜವಾಬ್ದಾರಿಯಾಗಿರುತ್ತದೆ. ಏಕೆಂದರೆ ವಕ್ಕಲಿಗ ಎಂಬ ಇನ್ನೊಂದು ಸಮುದಾಯವಿದ್ದು, ಅದರ ಕೋಡ್ ಸಂಖ್ಯೆ ಬೇರೆಯೇ ಆಗಿರುತ್ತದೆ. ಪ್ರತಿಯೊಬ್ಬರು ಒಬ್ಬರಿಗೊಬ್ಬರು ಈ ಮಾಹಿತಿಯನ್ನು ಹಂಚಿಕೊಂಡು ನಮ್ಮ ಸಮಾಜದ ಪ್ರತಿಯೊಬ್ಬರು ಒಂದೇ ರೀತಿಯ ಮಾಹಿತಿಯನ್ನು ನೀಡುವಂತೆ ತಿಳಿಸಿದ್ದಾರೆ.

Related posts

ಉಜಿರೆ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ

Suddi Udaya

ತುಮಕೂರಿನಲ್ಲಿ ‘ಜಿ.ಎನ್.ಆರ್ ಕಲ್ಪತರು ಸಿರಿ ಮಾರ್ಟ್’ ಸಿರಿ ಉತ್ಪನ್ನಗಳ ನೂತನ ಮಾರಾಟ ಮಳಿಗೆ ಶುಭಾರಂಭ

Suddi Udaya

ಬೆಳ್ತಂಗಡಿ ಎಸ್ ಡಿ ಎಮ್ ಆಂ.ಮಾ. ಶಾಲೆಯ ವಿದ್ಯಾರ್ಥಿ ಸುಪ್ರೀತ್ ವಾಲಿಬಾಲ್ ನಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಲಾಯಿಲ: ಪ್ರಸನ್ನ ಆಯುರ್ವೇದ ಮತ್ತು ಆಸ್ಪತ್ರೆ ಕಾಲೇಜು ಹಾಗೂ ಪ್ರಸನ್ನ ನರ್ಸಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನಾ ಸಮಿತಿ ರಚನೆ: 3ನೇ ಬಾರಿ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶಬರಾಯ ಆಯ್ಕೆ

Suddi Udaya

ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರಿಂದ ಅರ್ಚಕ ಕೆ.ರಮಾನಂದ ಭಟ್ ಕೊಕ್ಕಡ ಅವರಿಗೆ “ಶ್ರೀಕೃಷ್ಣಗೀತಾನುಗ್ರಹ” ಪ್ರಶಸ್ತಿ ಪ್ರದಾನ

Suddi Udaya
error: Content is protected !!