38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಣಿಯೂರು ದೀಪಾ ಸಂಜೀವಿನಿ ಒಕ್ಕೂಟದ ಮಹಾಸಭೆ

ಕಣಿಯೂರು : ದೀಪಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಕಣಿಯೂರು ಇದರ ವಾರ್ಷಿಕ ಮಹಾಸಭೆ ಸೆ.24 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯನ್ನು ಶೀಲಾ ಪ್ರಾರ್ಥಿಸಿ, ಪ್ರಸ್ತಾವಿಕವಾಗಿ ತಾಲೂಕು ವ್ಯವಸ್ಥಾಪಕರು ಕೃಷಿಯೇತರ ನಿತೀಶ್ ಸಂಜೀವಿನಿ ಯೋಜನೆಯಿಂದ ಸಿಗುವಂತಹ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಜೀವನ ರೂಪಿಸಿಕೊಳ್ಳಬಹುದು ಅದಕ್ಕೆ ಸಂಬಂಧಪಟ್ಟಂತೆ ಬ್ಯಾಂಕ್ ಲಿಂಕೇಜ್ ಮಾಡಿ ಬ್ಯಾಂಕ್ ಲೋನ್ , pmfme ಸಾಲ ಸೌಲಭ್ಯ , ಮನೆಯಲ್ಲಿ ತಯಾರಿಸುವ ಉತ್ಪನ್ನಗಳಿಗೆ FSSAI ಸರ್ಟಿಫಿಕೆಟ್ , ಉದ್ಯಮ ಸರ್ಟಿಫಿಕೆಟ್ ಮಾಡಿಸಿಕೊಡುವ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.

ಪಂಚಾಯತ್ ಅಧ್ಯಕ್ಷರು ದೀಪಾ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ದೀಪನಗೊಳಿಸಿ ಸಂಜೀವಿನಿ ಯೋಜನೆ ಮಹಿಳೆಯರಿಗೆ ಸಮಾಜದಲ್ಲಿ ಪುರುಷ ಸಮಾನರಾಗಿ ಎಲ್ಲಾ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಪಂಚಾಯತ್ನಿಂದ ನೀರಿನ ಬಿಲ್ ಕಲೆಕ್ಷನ್ ಸ್ವಚ್ಛತಾ ಸಿಬ್ಬಂದಿಗಳು ಹೀಗೆ ಎಲ್ಲದಕ್ಕೂ ಮಹಿಳೆಯರಿಗೆ ಅವಕಾಶ ನೀಡಲಾಗುತ್ತದೆ. ಮಹಿಳೆಯರು ಬಡ್ಡಿ ಸಹಾಯಧನದ ಸಾಲ ಸೌಲಭ್ಯ ಪಡೆದುಕೊಂಡು ಉತ್ತಮ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಿ ಎಂದು ಶುಭಹಾರೈಸಿದರು.

ನಂತರ ವಾರ್ಷಿಕ ವರದಿ ಮತ್ತು ಸಿಎ ಆಡಿಟ್ ರಿಪೋರ್ಟ್ ನ್ನು ಲೋಕಮ್ಮ ಮಂಡಿಸಿ ಅನುಮೋದನೆ ಪಡೆದುಕೊಂಡರು ವಲಯ ಮೇಲ್ವಿಚಾರಕಿ ವೀಣಾಶ್ರೀ , ವಾರ್ಡ್ ಒಕ್ಕೂಟ ಮತ್ತು ಗ್ರಾಮ ಪಂಚಾಯತ್ ಒಕ್ಕೂಟದ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಿದರು. ಸಂಘಗಳು ದಶಸೂತ್ರ ಗಳನ್ನು ಅಳವಡಿಸಿಕೊಳ್ಳಬೇಕು ಮಹಿಳೆಯರು ಸ್ವಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿಸ್ತಾರವಾಗಿ ಮಾಹಿತಿ ನೀಡಿದರು.

ಸಂಜೀವಿನಿ ಸಂಘದ ಸದಸ್ಯೆ ಮನೆಯಲ್ಲಿ ತಯಾರಿಸಿದ ಮನೆಮದ್ದಿನ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಅಧ್ಯಕ್ಷರು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು. ಒಕ್ಕೂಟದಿಂದ ನಿರ್ಗಮಿತ ಸದಸ್ಯರಿಗೆ ಮತ್ತು ವೀಣಾಶ್ರೀ , ನಿತೇಶ್ ರವರಿಗೆ ಒಕ್ಕೂಟದ ಪರವಾಗಿ ಗೌರವ ಸ್ಮರಣಿಕೆ ನೀಡಲಾಯಿತು

Related posts

ಅರಸಿನಮಕ್ಕಿ: ಕೋಡಿಯಡ್ಕ ನಿವಾಸಿ ಲಕ್ಷ್ಮಿ ಅಮ್ಮ ನಿಧನ

Suddi Udaya

ಶಿಶಿಲ ಗ್ರಾ.ಪಂ. ನಲ್ಲಿ ವಿಪತ್ತು ನಿರ್ವಹಣಾ ಸಮಿತಿಯ ಸಭೆ

Suddi Udaya

ರಾಜ್ಯೋತ್ಸವ ಪ್ರಶಸ್ತಿಗೆ ಸಹಕರಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರಿಗೆ ದಯಾ ವಿಶೇಷ ಶಾಲೆಯ ವತಿಯಿಂದ ಗೌರವಾರ್ಪಣೆ

Suddi Udaya

ಗುರುವಾಯನಕೆರೆ: ಅಗಲಿದ ದಿ| ನಾರಾಯಣ ಆಚಾರ್ಯ ರವರ ಮನೆಗೆ ಶಾಸಕ ಹರೀಶ್ ಪೂಂಜ ಹಾಗೂ ಎಂಎಲ್ಸಿ ಅಭ್ಯರ್ಥಿ ಕಿಶೋರ್ ಕುಮಾರ್ ಭೇಟಿ, ಸಾಂತ್ವಾನ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿತುಳು ನಾಡು-ನುಡಿ-ಸಂಸ್ಕೃತಿ ಒರಿಪಾವುನ ಬುಳೆಪಾವುನ ಮಾರ್ಗೋಪಾಯೊಲು” ರಾಷ್ಟ್ರೀಯ ವಿಚಾರ ಸಂಕಿರಣ

Suddi Udaya

ಬೆಳ್ತಂಗಡಿ ಪವ‌ರ್ ಆನ್ ಸಂಸ್ಥೆಯಲ್ಲಿ ಲಕ್ಕಿ ಸ್ಟಾರ್‌ನ 3ನೇ ಹಂತದ ಡ್ರಾ ಅದೃಷ್ಟವಂತ ಯೋಜನೆಯಲ್ಲಿ ಗ್ರಾಹಕರು ಪಡೆದರು ದ್ವಿಚಕ್ರ ವಾಹನ ಡ್ಯಾನ್ಸ್ ಟು ಡ್ಯಾನ್ಸ್ ಆನ್ ಲೈನ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ

Suddi Udaya
error: Content is protected !!