25.4 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ನಿಡ್ಲೆ ಸರಕಾರಿ ಪ್ರೌಢ ಶಾಲೆಯ ನೂತನ ಶಾಲಾ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

ನಿಡ್ಲೆ: ಎಮ್.ಸಿ.ಎಫ್.ಎಲ್ ಮಂಗಳೂರು ವತಿಯಿಂದ ಒದಗಿಸುವ 2 ಕೊಠಡಿಗಳೂ ಸೇರಿದಂತೆ ನಿಡ್ಲೆ ಸರಕಾರಿ ಪ್ರೌಢಶಾಲೆ ಹಳೆ ವಿದ್ಯಾರ್ಥಿಗಳ ಸೇವಾ ಟ್ರಸ್ಟ್.ಮೂಲಕ ನಿರ್ಮಾಣವಾಗುವ ನೂತನ ಶಾಲಾ ಕಟ್ಟಡದ “ಶಿಲಾನ್ಯಾಸ”ವನ್ನು ಸೆ.26ರಂದು ನೆರವೇರಿಸಲಾಯಿತು.

ವಿ.ಪ. ಸದಸ್ಯ ಪ್ರತಾಪ್ ಸಿಂಹ ನಾಯಕ್ ಶಿಲಾನ್ಯಾಸ ನೆರವೇರಿಸಿ ಶುಭಹಾರೈಸಿದರು.


ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಡ್ಲೆ ಗ್ರಾಪಂ ಅಧ್ಯಕ್ಷೆ ಶ್ರೀಮತಿ ಶ್ಯಾಮಲಾ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯರಾದ ಸತ್ಯನಾರಾಯಣ ರಾವ್ ಪೈರೋಡಿ, ವೇಣೂರು ಕಾಲೇಜಿನ ಉಪ ಪ್ರಾಂಶುಪಾಲ ವೆಂಕಟೇಶ್ ತುಳುಪುಳೆ, ಎಂಸಿಎಫ್ಎಲ್ ನ ಅಸಿಸ್ಟೆಂಟ್ ಮ್ಯಾನೇಜರ್ ರಾಕೇಶ್, ಸೀನಿಯರ್ ಮ್ಯಾನೇಜರ್ ವಿವೇಕ್ ಕೋಟ್ಯಾನ್, ಕಂಟ್ರಾಕ್ಟರ್ ಸದಾಶಿವ ಸುವರ್ಣ, ಎಸ್ ಡಿ ಎಂ ಸಿ ಅಧ್ಯಕ್ಷ ಲಕ್ಷ್ಮಣ ಗೌಡ ನೂಜಿಲ ಉಪಸ್ಥಿತರಿದ್ದರು.


ಶಾಲಾ ಮಕ್ಕಳು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕಿ ಶಾಂತ ಸ್ವಾಗತಿಸಿದರು. ಹಳೆ ವಿದ್ಯಾರ್ಥಿಗಳ ಸೇವಾ ಟ್ರಸ್ಟ್ ನ ಅಧ್ಯಕ್ಷ ರಾಜಗುರು ಹೆಬ್ಬಾರ್ ಮಾಡಂಕಲ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಶರತ್ ರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಕಟ್ಟಡ ನಿರ್ಮಾಣಕ್ಕೆ ರೂ. 10,000 ದೇಣಿಗೆ ನೀಡಿದ ಯುವ ಸಮೂಹ ಬೂಡುಜಾಲು ಹಾಗೂ ರೂ. 25,000ನೀಡಿದ ಕಂಟ್ರಾಕ್ಟರ್ ಸದಾಶಿವ ಸುವರ್ಣ ರವರನ್ನು ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರು, ಹಳೆ ವಿದ್ಯಾರ್ಥಿಗಳ ಸೇವಾ ಸಂಘದ ಸದಸ್ಯರು, ಶಿಕ್ಷಕರು, ಹಳೆ ವಿದ್ಯಾರ್ಥಿಗಳು, ಶಾಲಾ ಮಕ್ಕಳು, ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.

Related posts

ಬಂದಾರು: ಬೈಪಾಡಿ ಭಗವಾನ್ ಶಾಂತಿನಾಥ ಸ್ವಾಮಿ ಬಸದಿಯಲ್ಲಿ ಶಾಂತಿಚಕ್ರ ಆರಾಧನೆ

Suddi Udaya

ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಬೆಳ್ತಂಗಡಿ ಘಟಕದ ಅಧ್ಯಕ್ಷರಾಗಿ ಅವಿನಾಶ್, ಕಾರ್ಯದರ್ಶಿ ತಿಲಕ್ ರಾಜ್

Suddi Udaya

ಕಾಪಿನಡ್ಕ ಶಾಲೆಯಲ್ಲಿ ಬುಲ್ ಬುಲ್ ದಳ ಉದ್ಘಾಟನೆ

Suddi Udaya

ಕುತ್ಲೂರು ಪ್ರಕರಣ ನಕ್ಸಲ್ ಮುಖಂಡ ಮಹೇಶ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು

Suddi Udaya

ಸೋಮಂತಡ್ಕ: ರಿಕ್ಷಾ ಹಾಗೂ ಜೀಪ್ ನಡುವೆ ಅಪಘಾತ

Suddi Udaya

ಅ.28-29 ರಂದು ನಡೆಯಲಿರುವ “ವಿಶ್ವ ಬಂಟರ ಸಮ್ಮೇಳನದ” ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!