
ಬೆಳ್ತಂಗಡಿ : ಮಂಗಳೂರು – ವಿಲ್ಲಪುರಂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು ಹಳೆ ಪೇಟೆ ವಾಣಿ ಕಾಲೇಜು ಬಳಿ ಎಪಿಎಂಸಿ ಹೋಗುವ ರಸ್ತೆ ತಿರುವಿನಲ್ಲಿ ಜೆಸಿಬಿ ಮೂಲಕ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸಂದರ್ಭದ ಮಣ್ಣು ಅಗೆದ ವೇಳೆ ನಾಲ್ಕು ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ಸೆ.26 ರಂದು ನಡೆದಿದೆ.

ಘಟನೆ ನಡೆದ ವೇಳೆ ಯಾವುದೇ ವಾಹನಗಳು ಹಾಗೂ ಜನರ ಓಡಾಟ ಇರದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. ಪಟ್ಟಣದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.











