September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸಂತ ತೆರೇಸಾ ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಿಎ ಫೌಂಡೇಶನ್ ಹಾಗೂ ಸಿಪಿಟಿ ವಿಷಯದ ಕುರಿತು ಪುನಶ್ಚೇತನ ಕಾರ್ಯಾಗಾರ

ಬೆಳ್ತಂಗಡಿ: ಸಂತ ತೆರೇಸಾ ಪ. ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಿಎ ಫೌಂಡೇಶನ್ ಹಾಗೂ ಸಿಪಿಟಿ ವಿಷಯದ ಕುರಿತು ಪುನಶ್ಚೇತನ ಕಾರ್ಯಾಗಾರವನ್ನು ಸೆ. 24ರಂದು ಹಮ್ಮಿಕೊಳ್ಳಲಾಯಿತು.

ಬೆಳ್ತಂಗಡಿ ಎಕ್ಸೆಲ್ ಪಿಯು ಕಾಲೇಜಿನ ಉಪನ್ಯಾಸಕ ಸಿಎ ಕೊರ್ಸಿನ ಸಂಯೋಜಕ ಅರುಣ್‌ ಕ್ಯಾಸ್ತೆಲಿನೊರವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಸಿಎ ಫೌಂಡೇಶನ್ ಕೋರ್ಸ್ ನ ಪಠ್ಯಕ್ರಮ, ಅರ್ಹತೆ,ಪರೀಕ್ಷೆಯ ರಚನೆ, ವಿಧಾನ ಅದರ ಪ್ರಾಮುಖ್ಯತೆ ಹಾಗೂ ಸಿಪಿಟಿ ಪರೀಕ್ಷೆಯ ಅರ್ಹತೆ ಪರೀಕ್ಷೆ, ವಿಧಾನ, ಅಂಕಗಳು ಪರೀಕ್ಷೆಯ ವಿಷಯಗಳ ಕುರಿತು ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ತೆರೇಸಾ ಪ. ಪೂರ್ವ ಕಾಲೇಜಿನ ಪ್ರಾಂಶುಪಾಲೆ ಭಗಿನಿ ಮೋಲಿ ಡಿಕುನ್ನ ರವರು ವಹಿಸಿದ್ದರು. ಉಪನ್ಯಾಸಕ ಲೋಕೇಶ್ ಕಾರ್ಯಕ್ರಮ ನಿರೂಪಿಸಿ, ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿ ಸ್ವಾಗತಿಸಿದರು. ಕಾಲೇಜು ವಿದ್ಯಾರ್ಥಿನಿ ರೀಶಲ್ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.

Related posts

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ತನುಶ್ರೀ ರವರಿಗೆ ಶಾಸಕ ಹರೀಶ್ ಪೂಂಜರಿಂದ ಸನ್ಮಾನ

Suddi Udaya

ಮಾಲಾಡಿ : ಸಂಪತ್ ರಾಜ್ ಭಟ್ ನಿಧನ

Suddi Udaya

ಪುಂಜಾಲಕಟ್ಟೆ: ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನೂತನ ಕಛೇರಿ ಉದ್ಘಾಟನೆ ಹಾಗೂ ರಕ್ತದಾನ ಶಿಬಿರ

Suddi Udaya

ಶಾಸಕ ಹರೀಶ್ ಪೂಂಜರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಮಟ್ಟದ ಜನಸ್ಪಂದನ ಸಭೆ

Suddi Udaya

ಮುಗೇರಡ್ಕ ಅಂಗನವಾಡಿಯಲ್ಲಿ ಎಲ್ ಕೆಜಿ , ಯುಕೆಜಿ ಪ್ರಾರಂಭ

Suddi Udaya

ಅ.22 ಬಳಂಜ ಶಾರದೋತ್ಸವ, ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭಹಾರೈಸಿದ ಸತೀಶ್ ರೈ ಬಾರ್ದಡ್ಕಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಹಾಗೂ ಊರ ಮಹನೀಯರ ಸಹಕಾರದೊಂದಿಗೆ ವಿಜೃಂಭಣೆಯ ಶಾರದೋತ್ಸವಕ್ಕೆ ತಯಾರಿವೈಭವದ ಮೆರವಣಿಗೆ, ಆಟೋಟ ಸ್ಪರ್ಧೆಗಳು,500 ಭಜಕರಿಂದ ಭಜನೆ,ಸಾಂಸ್ಕೃತಿಕ ವೈಭವ ಕಾರ್ಯಕ್ರಮ

Suddi Udaya
error: Content is protected !!