September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಎಸ್‌.ಡಿ.ಎಂ ಶಿಕ್ಷಣ ಸಂಸ್ಥೆಗಳ ಶಾಲಾ ಬಸ್ಸು ಚಾಲಕರಿಗೆ “ಸ್ಟೇರಿಂಗ್ ಟುವರ್ಡ್ಸ್ ಸೇಫ್ಟಿ” ಕಾರ್ಯಾಗಾರ

ಉಜಿರೆ : ಎಸ್‌.ಡಿ.ಎಂ ಶಿಕ್ಷಣ ಸಂಸ್ಥೆಗಳ ಶಾಲಾ ಬಸ್ಸು ಚಾಲಕರಿಗೆ ಎಸ್‌.ಡಿ.ಎಂ ಎಜುಕೇಷನಲ್ ಸೊಸೈಟಿಯಿಂದ “ಸ್ಟೇರಿಂಗ್ ಟುವರ್ಡ್ಸ್ ಸೇಫ್ಟಿ” ಕಾರ್ಯಾಗಾರ ಆಯೋಜಿಸಲಾಗಿತ್ತು.

ಬೆಳ್ತಂಗಡಿಯ ಸಂಚಾರ ಪೊಲೀಸ್ ಹಾಗೂ ಪಿ.ಎಸ್.ಐ ಅರ್ಜುನ್ ಹೆಚ್.ಕೆ ಕಾರ್ಯಕ್ರಮ ಉದ್ಘಾಟಿಸಿ ಚಾಲನೆಯಲ್ಲಿ ತಿಳಿದುಕೊಳ್ಳಬೇಕಾದ ನಿಯಮಗಳ ಕುರಿತು ಮಾಹಿತಿ ಹಂಚಿಕೊಂಡರು.

ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಸಾರಿಗೆ ಇಲಾಖೆ, ಘನ ವಾಹನ ಚಾಲಕರ ತರಬೇತಿ ಸಂಸ್ಥೆಯ ತರಬೇತುದಾರ ಭುಜಂಗ ಶೆಟ್ಟಿ ವಿಷಯದ ಕುರಿತಾಗಿ ದೃಶ್ಯ ಮಾಧ್ಯಮದ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ಹಂಚಿಕೊಂಡರು.

ಎಸ್‌.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಕಿ ಕಲ್ಯಾಣಿ ರಾವ್ ನಿರೂಪಿಸಿದ ಕಾರ್ಯಗಾರದಲ್ಲಿ ಎಸ್‌.ಡಿ.ಎಂ (ಸಿ.ಬಿ.ಎಸ್.ಇ) ಶಾಲೆಯ ಪ್ರಾಂಶುಪಾಲರಾದ ಮನ್ಮೋಹನ್ ನಾಯ್ಕ್ ಕೆ.ಜಿ ಸ್ವಾಗತಿಸಿದರು.

Related posts

ಲಾಯಿಲ: ಕುಂಟಿನಿ ಸ.ಕಿ.ಪ್ರಾ. ಶಾಲಾ ಮಂತ್ರಿಮಂಡಲ ರಚನೆ: ಶಾಲಾ ಮುಖ್ಯಮಂತ್ರಿಯಾಗಿ ಇಝಾ ಫಾತಿಮ, ಉಪಮುಖ್ಯಮಂತ್ರಿಯಾಗಿ ಮುಹಮ್ಮದ್ ರಿಶಾನ್ ಆಯ್ಕೆ

Suddi Udaya

ಫ್ರೀಡಂ ಹಬ್ಬದಲ್ಲಿ ಪಂಚಮಿ ಮಾರೂರು ನೇತೃತ್ವದಲ್ಲಿ ಯಕ್ಷಗಾನ ಮತ್ತು ಭರತನಾಟ್ಯ ಪ್ರದರ್ಶನ

Suddi Udaya

ಬೆಳ್ತಂಗಡಿ : ಹಾ.ಉ.ಸ. ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಉತ್ತಮ ಆಡಳಿತ ನಿರ್ವಹಣೆ ಬಗ್ಗೆ ವಿಶೇಷ ತರಬೇತಿ ಶಿಬಿರ

Suddi Udaya

ಬೆಳ್ತಂಗಡಿ ಶ್ರೀವಿಶ್ವಕರ್ಮಾಭ್ಯುದಯ ಸಭಾದಿಂದ ಶ್ರೀವಿಶ್ವಕರ್ಮಯಜ್ಞ ಮತ್ತು ಪೂಜೆ

Suddi Udaya

ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದರಿಗೆ ಮೊಹರೆ ಹನುಮಂತರಾಯ ಪ್ರಶಸ್ತಿ

Suddi Udaya

ಜು.14: ಅಳದಂಗಡಿಯಲ್ಲಿ ಪ್ರಾರಂಭಗೊಳ್ಳುತ್ತಿದೆ “ನೊಚ್ಚ ಸೆರಾಮಿಕ್ಸ್”

Suddi Udaya
error: Content is protected !!