37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ: ಸಂತ ತೆರೇಸಾ ಪ. ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಕೈಗಾರಿಕಾ ಘಟಕ ಭೇಟಿ

ಬೆಳ್ತಂಗಡಿ : ಸಂತ ತೆರೇಸಾ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಇಲ್ಲಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸೆ.25ರಂದು ಧರ್ಮಸ್ಥಳ ಗ್ರಾಮೀಣೋದ್ಯೋಗ ಸಂಸ್ಥೆ ಸಿರಿಯ ನೂತನ ಉದ್ಯಮ ಘಟಕವಾದ ಬೆಳ್ತಂಗಡಿ ಸಂಸ್ಥೆಗೆ ಭೇಟಿ ನೀಡಿ, ಅಲ್ಲಿನ ಉದ್ಯಮ ಕಾರ್ಯಾಚರಣೆಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಲಾಯಿತು.

ಸಿರಿ ಗ್ರಾಮೀಣೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ಜೀವನ್ ರವರು ಸಂಸ್ಥೆಯ ಕಾರ್ಯ ವೈಖರಿಯ ಕುರಿತು ಮಾಹಿತಿಯನ್ನು ನೀಡಿದರು. ಅಲ್ಲಿ ಕಾರ್ಯಾಚರಿಸುತ್ತಿರುವಂತಹ ಬಟ್ಟೆ ಉದ್ಯಮ, ಫಿನೈಲ್ ತಯಾರಿಕಾ ಘಟಕ, ಅಗರಬತ್ತಿ ತಯಾರಿಕಾ ಘಟಕ, ಎಂಬ್ರಾಯ್ಡರಿ ಮೊದಲಾದ ಘಟಕಗಳ ಕಾರ್ಯ ನಿರ್ವಹಣೆ, ಕಾರ್ಮಿಕರು ಕಾರ್ಮಿಕರಿಗೆ ನೀಡಲಾಗುತ್ತಿರುವ ಸೌಲಭ್ಯಗಳು ,ಉದ್ಯೋಗಾವಕಾಶಗಳು, ಲಾಭಾಂಶ ನಷ್ಟದ ಕುರಿತು ಪ್ರಾಯೋಗಿಕ ಪ್ರತ್ಯಕ್ಷಣೆಯ ಮೂಲಕ ಸವಿಸ್ತಾರವಾಗಿ ತಿಳಿಸಿದರು.

ವಿದ್ಯಾರ್ಥಿಗಳು ಪೂರ್ಣ ಪ್ರಯೋಜನವನ್ನು ಪಡೆದರು. ಕಾಲೇಜಿನ ಪ್ರಾಂಶುಪಾಲರಾದ ಭಗಿನಿ ಮೋಲಿ ಡಿಕುನ್ನ ಹಾಗೂ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Related posts

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ

Suddi Udaya

ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠೆ: ಗುರುವಾಯನಕೆರೆ ಎರ್ಡೂರು ಬಳಿ ‘ಶ್ರೀರಾಮನಗರ’ ನಾಮಫಲಕ ಅನಾವರಣ

Suddi Udaya

ಬೆಳ್ತಂಗಡಿ: ಬುರುಡೆ ಚಿನ್ನಯ್ಯನ ಜಾಮೀನು ಅರ್ಜಿ ವಿಚಾರಣೆ ಸೆ.16 ಕ್ಕೆ ಬೆಲ್ ಅದೇಶ ಕಾಯ್ದಿರಿಸಿದ ಬೆಳ್ತಂಗಡಿ ಕೋರ್ಟ್

Suddi Udaya

ಉಜಿರೆ : ಶ್ರೀ ಧ.ಮಂ. ಕಾಲೇಜಿನ ಸ್ವಚ್ಛತಾ ಸಿಬ್ಬಂದಿಗೆ ಬೀಳ್ಕೊಡುಗೆ

Suddi Udaya

ತೆಕ್ಕಾರು ಸರಳಿಕಟ್ಟೆ ಸ.ಉ.ಪ್ರಾ. ಶಾಲೆಯ ಪ್ರವೇಶ ದ್ವಾರದ ಉದ್ಘಾಟನೆ

Suddi Udaya

ಕಾಡಾನೆಗಳ ಓಡಾಟ: ಮಲವಂತಿಗೆ ಗ್ರಾಮ ಪಂಚಾಯತ್ ನಿಂದ ಎಚ್ಚರಿಕೆ

Suddi Udaya
error: Content is protected !!