37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದಿಂದ ಜಾಗತಿಕ ಔಷಧಿ ತಜ್ಞರ ಹಾಗೂ ವಾರ್ಷಿಕ ದಿನಾಚರಣೆ

ಉಜಿರೆ: ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದ ಆಶ್ರಯದಲ್ಲಿ ನಡೆದ ಜಾಗತಿಕ ಔಷಧಿ ತಜ್ಞರ ಹಾಗೂ ವಾರ್ಷಿಕ ದಿನಾಚರಣೆ ಕಾರ್ಯಕ್ರಮವು ಉಜಿರೆ ಕಾಶಿಬೆಟ್ಟುವಿನ ಅರಳಿ ರಸ್ತೆಯಲ್ಲಿರುವ ರೋಟರಿ ಸೇವಾ ಭವನದಲ್ಲಿ ನಡೆಯಿತು.

ಉಡುಪಿ ಜಿಲ್ಲಾ ಆಹಾರ ಸುರಕ್ಷತೆ ಹಾಗೂ ಔಷಧಿ ಆಡಳಿತ ಇಲಾಖೆಯ ಸಹಾಯಕ ಔಷಧಿ ನಿಯಂತ್ರಕ ಶಂಕರ ನಾಯಕ್ ಉದ್ಘಾಟಿಸಿದರು.

ದ.ಕ. ಜಿಲ್ಲಾ ಆಹಾರ ಸುರಕ್ಷತೆ ಹಾಗೂ ಔಷಧಿ ಆಡಳಿತ ಇಲಾಖೆಯ ಸಹಾಯಕ ಔಷಧಿ ನಿಯಂತ್ರಕ ಬಾಬು ಬಿ.ಎನ್., ಬೆಳ್ತಂಗಡಿ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಉದಯಕುಮಾರ್ ಜೈನ್, ಕಾರ್ಯದರ್ಶಿ ಪ್ರಕಾಶ್ ಫೆರ್ನಾಂಡೀಸ್‌, ಶಿರ್ವ ಸೈಂಟ್ ಮೆರಿಸ್ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ. ರಾಜನ್ ವಿ.ಎನ್., ಪುತ್ತೂರಿನ ಅಲೈಡ್ ಫಾರ್ಮಸಿಯ ಉಪನ್ಯಾಸಕ ರಾಮ ಭಟ್, ದಕ್ಷಿಣ ಕನ್ನಡ ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ, ಡಾ.ಎ.ಕೆ. ಜಮಾಲ್ ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದ ಕೋಶಾಧಿಕಾರಿ ಗಣಪತಿ ಭಟ್ ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಿರಿಯ ಫಾರ್ಮಸಿಸ್ಟ್ ಗಳಾದ ಗುರುವಾಯನಕೆರೆಯ ಚಂದ್ರಮೆಡಿಕಲ್ಸ್ ನ ವೆಂಕಟ್ರಮಣ ಭಟ್ ಹಾಗೂ ಉಜಿರೆಯ ಗುರುದೇವಿ ಮೆಡಿಕಲ್ಸ್ ನ ಗುರುರಾಜ ಪಡುವೆಟ್ನಾಯ, ಗುರುವಾಯನಕೆರೆಯ ಜನಪ್ರಿಯ ವೈದ್ಯ ವೇಣುಗೋಪಾಲ ಶರ್ಮ ಅವರನ್ನು ಗುರುತಿಸಿ ಗೌರವಿಸಲಾಯಿತು. ಕಳೆದ ಬಾರಿಯ ಅಧ್ಯಕ್ಷ ಶ್ರೀಧರ ಕೆ.ವಿ. ಹಾಗೂ ಕಾರ್ಯದರ್ಶಿ ಮಾಧವ ಗೌಡ ಅವರನ್ನು ಸನ್ಮಾನಿಸಲಾಯಿತು. ಮನೆ ಮನೆಗೆ ತೆರಳಿ ರೋಗಿಗಳಿಗೆ ಶುಶೂಷೆ ನೀಡುತ್ತಿರುವ ಸಮಾಜ ಸೇವಕ, ಕಾರ್ಯದರ್ಶಿ ಪ್ರಕಾಶ್ ಫೆರ್ನಾಂಡೀಸ್ ಅವರನ್ನು ಗುರುತಿಸಿ ಗೌರವಿಸಲಾಯಿತು.

ತಾಲೂಕಿನ 12 ಜನ ದೈಹಿಕ ಅಶಕ್ತರನ್ನು ಗುರುತಿಸಿ ಅವರಿಗೆ ಆರ್ಥಿಕ ನೆರವನ್ನು ನೀಡಲಾಯಿತು. ಅಶ್ವಿನಿ ಪ್ರಾರ್ಥಿಸಿ, ಶ್ರೀಧರ ಕೆ.ವಿ. ಸ್ವಾಗತಿಸಿದರು. ಡಾ. ಸೌಮ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಸುಜಿತ್ ಭಿಡೆ ವಂದಿಸಿದರು.

Related posts

ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ ನೋಂದಣಿ ಕಛೇರಿ ಉದ್ಘಾಟನೆ

Suddi Udaya

ನ.7: ಅಡಿಕೆ ಬೆಳೆ ಮತ್ತು ಕಾಳು ಮೆಣಸು ಬೆಳೆಗಳ ಆಧುನಿಕ ಬೇಸಾಯ ಕ್ರಮದ ಕುರಿತು ಕೃಷಿಕರಿಗೆ ತರಬೇತಿ ಕಾರ್ಯಕ್ರಮ

Suddi Udaya

ಪಿಲಾತಬೆಟ್ಟು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಗೃಹಲಕ್ಷ್ಮೀ ಯೋಜನೆ: ಬ್ಯಾಂಕ್‌ಖಾತೆಗೆ ಆಧಾರ್ ಜೋಡಣೆ ಪರಿಶೀಲನೆ ; ಕೊಕ್ಕಡ ಗ್ರಾ.ಪಂದಲ್ಲಿ ನಡೆದ ಕಾರ್ಯಕ್ರಮದ ಮಾಹಿತಿ ನೀಡದಿರುವುದನ್ನು ವಿರೋಧಿಸಿ, ಪಂಚಾಯತು ಎದುರು ಅಧ್ಯಕ್ಷ-ಉಪಾಧ್ಯಕ್ಷ ಸದಸ್ಯರ ಪ್ರತಿಭಟನೆ

Suddi Udaya

ಕೊಯ್ಯೂರು ಕ್ರಾಸ್ ನಿಂದ ಅರ್ಬಿ ಕಿರಿಯಾಡಿ, ಗಾಂಧಿನಗರ, ಕಾಶಿಬೆಟ್ಟು ಸಂಪರ್ಕಿಸುವ ಮಣ್ಣಿನ ರಸ್ತೆ ಸಂಪೂರ್ಣ ಕೆಸರುಮಯ: ಶೀಘ್ರವಾಗಿ ದುರಸ್ಥಿಗೊಳಿಸುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ಧರ್ಮಸ್ಥಳ ಲಕ್ಷದೀಪೋತ್ಸವ : ರಾಜ್ಯಮಟ್ಟದ 44ನೇ ವಷ೯ದ ವಸ್ತುಪ್ರದರ್ಶನ ಉದ್ಘಾಟನೆ

Suddi Udaya
error: Content is protected !!