38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಇಂದಬೆಟ್ಟು ಸಮೃದ್ಧಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ

ಇಂದಬೆಟ್ಟು : ಸಮೃದ್ಧಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ ಇದರ ವಾರ್ಷಿಕ ಮಹಾಸಭೆಯು ಸೆ.30 ರಂದು ಪಂಚಾಯತ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಚಂದ್ರಕಾಂತಿ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಒಕ್ಕೂಟದ ಅಧ್ಯಕ್ಷರು ಹಾಗೂ ವೇದಿಕೆಯಲ್ಲಿರುವ ಎಲ್ಲಾ ಗಣ್ಯರು ಸೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ತಾಲೂಕು ಬ್ಲಾಕ್ ಮ್ಯಾನೇಜರ್ ನಿತೀಶ್ ಮಾತನಾಡಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (NRLM) ಬಗ್ಗೆ, ಬ್ಯಾಂಕ್ ಸಾಲದ ಬಗ್ಗೆ, ವಿಮೆಯ ಬಗ್ಗೆ, ಸಂಜೀವಿನಿ ಯೋಜನೆಯ ಬಗ್ಗೆ ಸಮುದಾಯ ಬಂಡವಾಳ ನಿಧಿಯಿಂದ ಮಹಿಳೆಯರು ವಿವಿಧ ಆಹಾರೋತ್ಪನ್ನ ಚಟುವಟಿಕೆ ನಡೆಸಬೇಕು. ಆರ್ಥಿಕ ಮಟ್ಟ ಏರಿಕೆಯಾಗಬೇಕು. PMFME ಸಾಲ ಸೌಲಭ್ಯ ಮನೆಯಲ್ಲಿ ತಯಾರಿಸುವ ಉತ್ಪನ್ನಗಳಿಗೆ FSSAI ಸರ್ಟಿಫಿಕೇಟ್ ಮಾಡಿಕೊಡುವ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಕೊಟ್ಟರು.

ಶ್ರೀಮತಿ ಶ್ರುತಿಯವರು 2024-2ರ ಸಾಲಿನ ವಾರ್ಷಿಕ ವರದಿ ಮತ್ತು ಜಮಾ ಖರ್ಚು ಮಂಡಿಸಿದರು. BRPPRI ಯಾದ ಶ್ರೀಕಲಾ VPRPಯ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ಮಾದಕ ವ್ಯಸನ ಮುಕ್ತ ಪ್ರತಿಜ್ಞೆ ಮಾಡಲಾಯಿತು. ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಆಶಾಲತಾ ಮಾತನಾಡಿ ಒಕ್ಕೂಟವು ಇನ್ನಷ್ಟು ಲಾಭಯುತವಾಗಿ ಮುನ್ನಡೆಯಲೆಂದು ಶುಭ ಹಾರೈಸಿದರು. ಅದೃಷ್ಟ ಮಹಿಳೆಯರು ಗೇಮ್ ಆಯೋಜಿಸಿ ಅದೃಷ್ಟ ಮೂವರು ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ರಸಪ್ರಶ್ನೆ ಆಯೋಜಿಸಲಾಗಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಿರ್ಗಮಿತ ಪದಾಧಿಕಾರಿಗಳಿಗೆ ಗೌರವ ಸ್ಮರಣಿಕೆ ನೀಡಲಾಯಿತು. ಸಭಾಧ್ಯಕ್ಷತೆಯನ್ನು ವಹಿಸಿಕೊಂಡ ಒಕ್ಕೂಟದ ಅಧ್ಯಕ್ಷ ಮಾತನಾಡಿ ತನ್ನ ಅವಧಿಯಲ್ಲಿನ ಅನುಭವವನ್ನು ಹಂಚಿಕೊಂಡರು.

ಒಕ್ಕೂಟದ ಸದಸ್ಯರಾದ ವಾರಿಜ ಭಕ್ತಿಗೀತೆ ಹಾಡಿದರು. ರೋಹಿಣಿ ಸ್ವಾಗತಿಸಿದರು. ಸೌಮ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು. ಪಶು ಸಖಿ ರೇವತಿ ಧನ್ಯವಾದವಿತ್ತರು.

Related posts

ಪಡಂಗಡಿ ಹದಗೆಟ್ಟ ರಸ್ತೆ: ಕೂಡಲೇ ಸ್ಪಂದಿಸಿದ ಲೋಕೋಪಯೋಗಿ ಇಲಾಖೆ

Suddi Udaya

ಸಜ್ಜನಿಕ ನಡೆ, ಸಂಘರ್ಷದ ಹೋರಾಟ, ಸೌಜನ್ಯಯುತ ರಾಯಭಾರಿತ್ವ ಹೊಂದಿದ ಅಪರೂಪದ ರಾಜಕಾರಣಿ ವಸಂತ ಬಂಗೇರ – ಶಾಸಕ ಹರೀಶ್ ಪೂಂಜ

Suddi Udaya

ಗುರುವಾಯನಕೆರೆ: ಸುಧಾಕರ ನಾಯಕ್ ನಿಧನ

Suddi Udaya

ಇಂದಬೆಟ್ಟು: ಕೋಯ ನಗರದ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಕಳೆದರೂ ಹಲವಾರು ಕುಟುಂಬಗಳಿಗೆ ಇನ್ನೂ ವಿದ್ಯುತ್ ಭಾಗ್ಯವಿಲ್ಲ: ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಅಳದಂಗಡಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಒತ್ತಾಯ

Suddi Udaya

ಬೆಳ್ತಂಗಡಿ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘಕ್ಕೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೇದೆ ಸುಬ್ಬ ಪೂಜಾರಿ, ಮಿತ್ತಮಾರು ಬಿರ್ಮಣ್ಣ ಪೂಜಾರಿ, ಕುಂಜೀರ ಯಾನೆ ಸಿದ್ದಪ್ಪ ಪೂಜಾರಿ,ಸಮಾಜದ ಹಿರಿಯರು,ಮಾಜಿ ಶಾಸಕ ಕೆ.ವಸಂತ ಬಂಗೇರರವರು ಸೇರಿ ಸ್ಥಾಪಿಸಿದ ಸಂಘ ಬ್ರಹ್ಮಶ್ರೀ ನಾರಾಯಣ ಗುರುಗಳ ತಥವ ಸಿದ್ದಾಂತಕ್ಕೆ ಅನುಗುಣವಾಗಿ ಸಮಾಜಮುಖಿ ಸೇವಾ ಕಾರ್ಯ

Suddi Udaya
error: Content is protected !!