ಕಲ್ಮoಜ : ಇಲ್ಲಿಯ ಸಂಗಮ ಕ್ಷೇತ್ರ, ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಡಿ.05 ರಂದು ಧ್ವಜಸ್ತoಭ ಸ್ಥಾಪನೆಗೆ ಸಿದ್ದಗೊಳಿಸಿದ ಕಲ್ಲಿಗೆ ವಿಜಯ ದಶಮಿಯ ಪುಣ್ಯ ದಿನದಂದು ಕ್ಷೇತ್ರದ ವತಿಯಿಂದ ಅರ್ಚಕರಾದ ರಾಜೇಶ್ ಹೊಳ್ಳ ರವರು ಕ್ಷೇತ್ರದಿಂದ ತೀರ್ಥ ಪ್ರೋಕ್ಷಣೆ ಹಾಗೂ ಪೂಜೆ ಮಾಡಿ ಕೆತ್ತನೆ ಕಾರ್ಯಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀಮತಿ ಸುಕನ್ಯಾ ಮತ್ತು ಡಿ. ಜಯರಾಮ್ ರಾವ್ ಮತ್ತು ಮಕ್ಕಳು, ಹಾಗೂ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಶಿಲ್ಪಿಗಳಾದ ಸುಧಾಕರ್ ಡೋಂಗ್ರೆ ಮತ್ತು ಶಿಲ್ಪಿ ಬಳಗದವರು ಉಪಸ್ಥಿತರಿದ್ದರು.











