25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಹಾಗೂ ವಿಜಯ ದಶಮಿ ಉತ್ಸವ ಪ್ರಯುಕ್ತ ಸಭಾ ಕಾರ್ಯಕ್ರಮ

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಹಾಗೂ ವಿಜಯ ದಶಮಿ ಉತ್ಸವ ಪ್ರಯುಕ್ತ ಸಭಾ ಕಾರ್ಯಕ್ರಮವನ್ನು ನಡೆಸಲಾಯಿತು.

ಸಭಾಧ್ಯಕ್ಷತೆಯನ್ನು ದೇವಸ್ಥಾನ ದ ಆಡಳಿತ ಮೋಕ್ತೇಸರರಾದ ಯೋಗೀಶ್ ಪೂಜಾರಿ ಕಡ್ತಿಲ ವಹಿಸಿದ್ದರು. ಧಾರ್ಮಿಕ ಉಪನ್ಯಾಸ ಮಾಡಿದಂತಹ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರರಾದ ಡಾ| ರವೀಶ್ ಪಡುಮಲೆ ಇವರು ದೇವಸ್ಥಾನಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೌಲ್ಯಯುತ ಧಾರ್ಮಿಕ ಶಿಕ್ಷಣ, ಭಜನೆ, ಸಂಸ್ಕೃತಿ ಇವೆಲ್ಲವನ್ನೂ ಒಗ್ಗೂಡಿಸಿಕೊಂಡು ನಾವೆಲ್ಲಾ ನಡೆಯಬೇಕು. ಕೊರಿಂಜ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಡೆದು ಇದೀಗ ಪಂಚಲಿಂಗೇಶ್ವರನ ಸನ್ನಿಧಿಯಲ್ಲಿ ಮಕ್ಕಳ ಕುಣಿತ ಭಜನಾ ತಂಡವನ್ನು ದೀಪ ಪ್ರಜ್ವಲಿಸುವ ಮೂಲಕ ದೇವಸ್ಥಾನದ ಶಕ್ತಿ ಹಾಗೂ ಭಕ್ತಿ ಬಹಳ ಹೆಚ್ಚಾಗಿದೆ. ಪ್ರತಿ ಮನೆಯಲ್ಲೂ ಸಂಜೆಯ ಸಮಯದಲ್ಲಿ ರಾಮಾಯಣ ಮಹಾಭಾರತ ಕಥೆಯನ್ನು, ಭಜನೆಯನ್ನು, ಮಕ್ಕಳ ಪೋಷಕರು ಕಲಿಸಬೇಕು. ನಮ್ಮಲ್ಲಿ ಧಾರ್ಮಿಕತೆಯನ್ನು ಯಾವೊತ್ತು ಕೂಡ ಕಡಿಮೆ ಮಾಡಬಾರದು ಎಂದು ತಿಳಿಸಿದರು.

ಭಜನ ಗುರುಗಳಾದ ನಾಗೇಶ ನೆರಿಯ ಇವರಿಗೆ ಗುರುವಂದನಾ ಕಾರ್ಯಕ್ರಮವನ್ನು ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಮಹಾಭಾರತ ಪುಸ್ತಕವನ್ನುವಿತರಿಸಲಾಯಿತು. ವಾರಿಜ ವಿ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸೀತಾರಾಮ ಆಳ್ವ ಕೊರಿಂಜ ಕಾರ್ಯಕ್ರಮ ನಿರೂಪಿಸಿ, ರಂಜಿತ್ ಧರ್ಮಾಡಿ ಸ್ವಾಗತಿಸಿ, ವಿಜಯ ಕುಮಾರ್ ಕಲ್ಲಳಿ ಕೆ ಧನ್ಯವಾದವಿತ್ತರು.

Related posts

ರಾಜ್ಯಮಟ್ಟದ ಪುರುಷರ ಹ್ಯಾಂಡ್ ಬಾಲ್ ಚಾಂಪಿಯನ್ಶಿಪ್ – ಮಾದಪ್ಪ ಸ್ಮಾರಕ ಟ್ರೋಫಿ

Suddi Udaya

ಧರ್ಮಸ್ಥಳ-ನಾರಾವಿ ನಡುವಿನ ಸರಕಾರಿ ಬಸ್ ತಡೆ ಹಿಡಿದಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಇಂದು ಸಂಜೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ಬೃಹತ್ ಪ್ರತಿಭಟನೆ

Suddi Udaya

ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಯುವ ಸಾಧಕ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ “ಪ್ರತಿಷ್ಠಿತ ವಿಜಯರತ್ನ ಪ್ರಶಸ್ತಿ”ಪ್ರದಾನ

Suddi Udaya

ರಾಜ್ಯಮಟ್ಟದ ಹ್ಯಾಂಡ್‌ಬಾಲ್‌ ಪಂದ್ಯಾಟ : ಉಜಿರೆ ಶ್ರೀ ಧ.ಮಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನಗಳ ಮಹಾವಿದ್ಯಾಲಯ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ

Suddi Udaya

ಯುಗಾದಿ ನವ ಪಲ್ಲವಕೆ ನಾಂದಿ – ಸ್ನೇಹ ಕೂಟ ಕಾರ್ಯಕ್ರಮ

Suddi Udaya

ಕಾಂಗ್ರೆಸ್ ಸರ್ಕಾರದ “ಜನ ವಿರೋಧಿ ನೀತಿ”ಗಳನ್ನು ಖಂಡಿಸಿ ಕೊಕ್ಕಡ ಗ್ರಾ.ಪಂ. ಎದುರು ಬಿಜೆಪಿ ಪ್ರತಿಭಟನೆ

Suddi Udaya
error: Content is protected !!