September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಸರ್ಕಾರಿ ಇಲಾಖಾ ಸುದ್ದಿ

ಮಾರ್ಗ ಮಧ್ಯೆ ಕೈಕೊಡುವ ಕೆ.ಎಸ್.ಆರ್.ಟಿ.ಸಿ : ಒಂದೇ ದಿನದಲ್ಲಿ ಆರು ಕಡೆಗಳಲ್ಲಿ ಕೆಟ್ಟು ನಿಂತ ಸಾರಿಗೆ ಬಸ್

ಸುದ್ದಿ ಉದಯ ಡೆಸ್ಕ್ ರಿರ್ಪೋಟ್

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕೇಂದ್ರದಲ್ಲಿ ಆರು ಕೆಸ್‌ಆರ್‌ಟಿಸಿ ಬಸ್‌ಗಳು ಮಾರ್ಗಮಧ್ಯೆ ಕೈ ಕೊಟ್ಟ ಘಟನೆ ಅ.6ರಂದು ನಡೆದಿದೆ. ಸಂಚಾರಕ್ಕೆ ಯೋಗ್ಯವಿಲ್ಲ ಬಸ್‌ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.

ಸೋಮವಾರ ಬೆಳಗ್ಗೆ ಮಂಗಳೂರು-ವಿಲ್ಲಪುರಂ ರಾಷ್ಟ್ರೀಯ ಹೆದ್ದಾರಿಯ ಗುರುವಾಯನಕೆರೆ ಜಂಕ್ಷನ್ ಸಮೀಪ ಮಂಗಳೂರು ವಿಭಾಗಕ್ಕೆ ಸೇರಿದ ಸಾರಿಗೆ ಬಸ್ಸೊಂದು ಹಾಳಾಗಿ ನಿಂತಿದ್ದು, ಕಿಲೋಮೀಟರ್ ಉದ್ದ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಸಂಚಾರ ಅಡಚಣೆ ನಿವಾರಿಸಲು ಬಸ್ಸು, ಲಾರಿ ಸಹಿತ ವಾಹನಗಳು ಮೆಸ್ಕಾಂ ರಸ್ತೆಯಾಗಿ ಗೇರುಕಟ್ಟೆಯ ಮೂಲಕ ಪರ್ಯಾಯ ರಸ್ತೆಯಲ್ಲಿ ಸಾಗಿದವು.

ಒಳರಸ್ತೆಯಲ್ಲಿ ಕೈಕೊಟ್ಟ ಬಸ್:
ಗುರುವಾಯನಕೆರೆಯಲ್ಲಿ ಟ್ರಾಫಿಕ್ ಜಮ್ ಉಂಟಾದ ಹಿನ್ನಲೆ ವಾಹನಗಳು ಬೆಳ್ತಂಗಡಿ ಕೆ.ಬಿ.ರಸ್ತೆಯಾಗಿ ಹುಣ್ಸೆಕಟ್ಟೆ, ಮಲ್ಲೋಟ್ಟು, ಗೇರುಕಟ್ಟೆಯಾಗಿ ಒಳ ರಸ್ತೆಯಲ್ಲಿ ಸಂಚಾರಿಸಿದವು ಆದರೆ ಪುತ್ತೂರು ಗೆ ಸಂಚಾರಿಸುತ್ತಿದ್ದ ಸಾರಿಗೆ ಬಸ್ಸೊಂದು ಗೇರುಕಟ್ಟೆ-ಮಲ್ಲೋಟ್ಟು ಎಂಬಲ್ಲಿ ಕೆಟ್ಟು ನಿಂತು ಪ್ರಯಾಣಿಕರಿಗೆ ತೊಂದರೆಯಾಗಿದೆ.

ಟಯರ್ ಕಳಚಿಕೊಂಡ ಬಸ್:
ನೀರಚಿಲುಮೆ ಸಮೀಪ ಪಜಿರಡ್ಕ ಕ್ರಾಸ್ ಬಳಿ ಧರ್ಮಸ್ಥಳದಿಂದ ಚಿಕ್ಕಮಗಳೂರಿಗೆ ಸಂಚಾರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್‌ನ ಬ್ಲೇಡ್ ಕಟ್ ಆಗಿ, ಟಯರ್ ಕಳಚಿ ಮಾರ್ಗ ಮಧ್ಯೆ ನಿಂತು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸಂಜೆ ವೇಳೆಗೆ ಲಾಯಿಲ ಕಾಶಿಬೆಟ್ಟುವಿನಲ್ಲಿ ಧರ್ಮಸ್ಥಳದಿಂದ ಸ್ಟೇಟ್ ಬ್ಯಾಂಕ್‌ಗೆ ಸಂಚಾರಿಸುತ್ತಿದ್ದ ಮಂಗಳೂರು ವಿಭಾಗದ ಬಸ್‌ನ ಟಯರ್ ಹೊಡೆದು ದಾರಿ ಮಧ್ಯೆ ನಿಂತು ಪ್ರಯಾಣಿಕರ ಪರದಾಡಿದ ಘಟನೆ ನಡೆದಿದೆ.

ಮಂಗಳೂರುನಿಂದ ಚಿಕ್ಕಮಗಳೂರಿಗೆ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸು ಗುರುವಾಯನಕೆರೆ ಸಮೀಪದ ವರಕಬೆಯಲ್ಲಿ ಕೆಟ್ಟು ನಿಂತು ಪ್ರಯಾಣಿಕರು ಪರದಾಡಿದ ಬಗ್ಗೆ ವರದಿಯಾಗಿದೆ.

ಧರ್ಮಸ್ಥಳದಿಂದ ಮಂಗಳೂರಿಗೆ ಸಂಚಾರಿಸುತ್ತಿದ್ದ ಸಾರಿಗೆ ಬಸ್ ಕನ್ಯಾಡಿಯಲ್ಲಿ ಕೆಟ್ಟು ನಿಂತು ಪ್ರಯಾಣಿಕರು ತೊಂದರೆ ಅನುಭವಿಸಿದ ಬಗ್ಗೆ ಇಂದು ವರದಿಯಾಗಿದೆ.

ಪ್ರತಿನಿತ್ಯ ಜೀವ ಭಯದಿಂದ ಬಸ್‌ಗಳಲ್ಲಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ಎಲ್ಲಿ ಕೆಟ್ಟು ನಿಲ್ಲುವುದೋ, ಅನಾಹುತಗಳು ಸಂಭವಿಸುವುದೋ ಎಂಬ ಭೀತಿಯಲ್ಲಿ ಪ್ರಯಾಣಿಕರು ಪ್ರಯಾಣಿಸಬೇಕಿದೆ. ಇನ್ನೂ ಧರ್ಮಸ್ಥಳ-ಮಂಗಳೂರು ರಸ್ತೆಯಲ್ಲಿ ಸಂಚರಿಸುವ ಬಹುತೇಕ ಸರ್ಕಾರಿ ಬಸ್‌ಗಳು ಅಲ್ಲಲ್ಲಿ ಕೆಟ್ಟು ನಿಲ್ಲುವುದು ಸರ್ವೆ ಸಾಮಾನ್ಯವಾಗಿದೆ. ಬಸ್‌ಗಳಲ್ಲಿ ತೆರಳುವಾಗ ಟೈರ್‌ಗಳು ಸಿಡಿಯುವುದು, ರಸ್ತೆ ಬದಿಯ ಹಳ್ಳ ಕೊಳ್ಳಗಳಿಗೆ ಇಳಿಯುವುದು ಸಾಮಾನ್ಯ ಎನ್ನುವಂತಾಗಿದೆ.

ಶಕ್ತಿಯೋಜನೆ ಚಾಲ್ತಿಯಲ್ಲಿದ್ದ ಅನೇಕ ಪ್ರಯಾಣಿಕರು ಸದುಪಯೋಗ ಪಡೆದರು ಬಸ್‌ಗಳ ನಿರ್ವಹಣೆ ಮಾತ್ರ ಆಗುತ್ತಿಲ್ಲ ಸರಕಾರಕ್ಕೆ ನಮ್ಮ ಜೀವದ ಮೇಲೆ ಕಾಳಾಜಿ ಇಲ್ಲ ದಿನಲೂ ಭಯದ ಭೀತಿಯಲ್ಲಿ ಪ್ರಯಾಣಿಸಬೇಕು. ಒಮ್ಮೆ ಒಮ್ಮೆ ಬಸ್‌ಗಳಲ್ಲಿ ಅಧಿಕ ಜನ ಸಂಖ್ಯೆ ತುಂಬಿದರೆ ಮತ್ತೆ ಇನ್ನೊಂದು ಬಸ್‌ಗಾಗಿ ಕಾದು ಕೂರಬೇಕಾದ ಪರಿಸ್ಥಿತಿ ನಮ್ಮ ಪಾಡು ಭಗವಂತನಿಗೆ ಪ್ರೀತಿ ಎನ್ನುತ್ತಾರೆ ಸಾರ್ವಜನಿಕರು. ನಿರಂತರವಾಗಿ ಬಸ್‌ಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬಸ್‌ಗಳ ನಿರ್ವಹಣೆ ಅಥವಾ ಗುಣಮಟ್ಟದ ಹಾಗೂ ಸುಸ್ಥಿತಿಯಲ್ಲಿರುವ ಬಸ್‌ಗಳನ್ನು ಓಡಿಸಲು ಮನಸ್ಸು ಮಾಡುತ್ತಿಲ್ಲ ಎಂಬುದು ಈ ಭಾಗದ ಜನರ ಆರೋಪ.

Related posts

ಜೂ.27: ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದಿಂದ ಕೆಂಪೇಗೌಡ ಜಯಂತಿ ಆಚರಣೆ ಹಾಗೂ ಬೃಹತ್‌ ರಕ್ತದಾನ ಶಿಬಿರ

Suddi Udaya

ಮಡಂತ್ಯಾರು ರೋಟರಿ ಕ್ಲಬ್ ವತಿಯಿಂದ ವೈದ್ಯರ ಹಾಗೂ ಲೆಕ್ಕ ಪರಿಶೋಧಕರ ದಿನಾಚರಣೆ

Suddi Udaya

ಕುಕ್ಕೇಡಿ ಬುಲೆಕ್ಕಾರ ಶಾಲೆಯ ಮಕ್ಕಳಿಂದ ನೇಜಿ ನಾಟಿ

Suddi Udaya

ಉಜಿರೆ: ರುಡ್‌ಸೆಟ್ ಸಂಸ್ಥೆಯಲ್ಲಿ ಎಲೆಕ್ಟ್ರಿಕಲ್ ಮೊಟಾರ್ ರಿವೈಂಡಿಂಗ್ ಮತ್ತು ಮೆನ್ಸ್ ಪಾರ್ಲರ್ ಮೆನೇಜ್‌ಮೆಂಟ್ ತರಬೇತಿಗಳ ಸಮಾರೋಪ ಸಮಾರಂಭ

Suddi Udaya

ಕಳೆಂಜ ಗ್ರಾಮದ ಪುಜೇರಿಪಾಲ್ ಮೋನಪ್ಪ ಗೌಡರ ತೋಟಕ್ಕೆ ಕಾಡಾನೆ ದಾಳಿ

Suddi Udaya

ಮಣ್ಣಿನ ಸಂಸ್ಕೃತಿ, ತುಳು ಜನಪದ ಸೊಗಡಿನೊಂದಿಗೆ ಅಭ್ಯಾಸ್ ಕಾಲೇಜಿನಲ್ಲಿ ಕೆಸರ್ದಕಲ ಸಂಭ್ರಮ

Suddi Udaya
error: Content is protected !!