37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮುಂಡಾಜೆ: ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ

ಮುಂಡಾಜೆ: “ವಿದ್ಯಾರ್ಥಿಗಳು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಪರೋಪಕಾರ ಮನೋಭಾವವನ್ನು ಬೆಳೆಸಿಕೊಂಡು ಸತ್ಕಾರ್ಯವನ್ನು ಮಾಡಿದಾಗ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ. ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ಜೀವನ ಪಾಠವನ್ನು ತಿಳಿಸಿ ಕೊಡುತ್ತದೆ” ಎಂದು ಜೋಸ್ ಇ. ಎಂ. ಕಿಲ್ಲೂರು, ನಿವೃತ್ತ ಪ್ರಾಂಶುಪಾಲರು, ಸರಕಾರಿ ಪಾಲಿಟೆಕ್ನಿಕ್ ಕಾಲೇಜು, ಬಳ್ಳಾರಿ ಇವರು ಅಭಿಪ್ರಾಯ ಪಟ್ಟರು.

ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿತ್ತಬಾಗಿಲು ಇಲ್ಲಿ ನಡೆದ ಮುಂಡಾಜೆ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಭಾಷಣ ಮಾಡಿದರು.


ಶಿಬಿರಾಧಿಕಾರಿ ಶ್ರೀಮತಿ ನಮಿತಾ ಕೆ ಆರ್ ಶಿಬಿರದ ವರದಿಯನ್ನು ವಾಚಿಸಿದರು. ಊರವರ ಪರವಾಗಿ ಶಿಬಿರ ನಿರ್ವಹಣಾ ಸಮಿತಿಯ ಅಧ್ಯಕ್ಷ ಹೈದರಾಲಿ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಶಿಬಿರಾರ್ಥಿಗಳಾದ ಕುಶಾಲಪ್ಪ, ಜನಾರ್ಧನ ಮತ್ತು ಕುಮಾರಿ ಅಮೃತ ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿಶೇಷ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಮತ್ತು ಸ್ಮರಣಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಗೀತಾ, ಪ್ರಾಂಶುಪಾಲರು ಮುಂಡಾಜೆ ಪದವಿ ಪೂರ್ವ ಕಾಲೇಜು ಇವರು ವಹಿಸಿದ್ದರು. ಮಿತ್ತಬಾಗಿಲು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನಯಚಂದ್ರ ಸೇನರೆಬೆಟ್ಟು, ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಮೋಹನ್ ಬಂಗೇರ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಮಿತ್ತಬಾಗಿಲು, ಶ್ರೀಮತಿ ಇಂದಿರಾ ಕುಮಾರಿ, ಮುಖ್ಯ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿತ್ತಬಾಗಿಲು, ಕಬಿರ್, ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ, ಮಿತ್ತಬಾಗಿಲು, ಹೈದರಾಲಿ, ಅಧ್ಯಕ್ಷರು ಶಿಬಿರ ನಿರ್ವಹಣಾ ಸಮಿತಿ, ಅಬ್ದುಲ್ ಅಜೀಜ್, ಸಂಶುದ್ದೀನ್, ಶಿಬಿರಾಧಿಕಾರಿ ಶ್ರೀಮತಿ ನಮಿತಾ ಕೆ ಆರ್ ಉಪಸ್ಥಿತರಿದ್ದರು.

ಉಪನ್ಯಾಸಕಿ ಶ್ರೀಮತಿ ವಿದ್ಯಾ ರಾವ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಪುರುಷೋತ್ತಮ ಶೆಟ್ಟಿ ಸ್ವಾಗತಿಸಿ, ಪದ್ಮನಾಭ ಬಿ ಕೆ ವಂದಿಸಿದರು. ಏಳು ದಿನಗಳ ಕಾಲ ನಡೆದ ವಾರ್ಷಿಕ ವಿಶೇಷ ಶಿಬಿರದಲ್ಲಿ ಸ್ವಚ್ಛತಾ ಆಂದೋಲನ, ನಶಾ ಮುಕ್ತ ಅಭಿಯಾನ, ತೆಂಗಿನ ಗಿಡಗಳ ನಾಟಿ, ರಸ್ತೆ ರಿಪೇರಿ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

Related posts

2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಪೂರ್ವಾನ್ವಯಗೊಳಿಸಬಾರದು: ವಿ.ಪ. ಸದಸ್ಯ ಪ್ರತಾಪಸಿಂಹ ನಾಯಕ್ ರಿಂದ ಸಚಿವ ಮಧು ಬಂಗಾರಪ್ಪ ರವರಿಗೆ ಮನವಿ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅಬ್ದುಲ್ ರಝಾಕ್ ನೇಮಕ

Suddi Udaya

ಉಜಿರೆ ಎಸ್.ಡಿ.ಎಮ್ ಪ.ಪೂ. ಕಾಲೇಜಿನ ಸಂಸ್ಕೃತ ಸಂಘದ ಅಧ್ಯಕ್ಷನಾಗಿ ಗುರುದತ್ತ ಮರಾಠೆ ಆಯ್ಕೆ

Suddi Udaya

ಜಿಲ್ಲಾ ಉಸ್ತುವಾರಿ ಸಚಿವರಿಂದ138 ಫಲಾನುಭವಿಗಳಿಗೆ 94ಸಿ ಮತ್ತು ‌94 ಸಿಸಿ ಹಕ್ಕು ಪತ್ರ ವಿತರಣೆ

Suddi Udaya

ಕಳೆಂಜ: ಶಿಬರಾಜೆ ಪಾದೆ ಕೃಷ್ಣಪ್ಪ ಗೌಡರ ತೋಟಕ್ಕೆ ಮರ ಬಿದ್ದು ಹಾನಿ

Suddi Udaya

ಮಾ.10: ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವ: ಹುಣ್ಸೆಕಟ್ಟೆಯಲ್ಲಿ ಪೂರ್ವಭಾವಿ ಸಭೆ

Suddi Udaya
error: Content is protected !!