September 6, 2026
ಗ್ರಾಮಾಂತರ ಸುದ್ದಿವರದಿ

ಬೆಳ್ತಂಗಡಿ ಸಿವಿಎಲ್ ಇಂಜಿನಿಯರ್ಸ್ ಅಸೋಸಿಯೇಷನ್ 2025-27ನೇ ಸಾಲಿನ ಪದಪ್ರದಾನ ಸಮಾರಂಭ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಸಿವಿಎಲ್ ಇಂಜಿನಿಯರ್ಸ್ ಅಸೋಸಿಯೇಷನ್ ನ 2025-27 ನೇ ಸಾಲಿನ ಪದಪ್ರದಾನ ಸಮಾರಂಭವು ಉಜಿರೆ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಅ. 7 ರಂದು ನಡೆಯಿತು.

ವೇದಿಕೆಯಲ್ಲಿ ಸುರತ್ಕಲ್ ಎನ್.ಐ.ಟಿ.ಕೆ ಸಿವಿಲ್ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರೊಫೆಸರ್ ಕೆ.ಎಸ್ ಬಾಬು ನಾರಾಯಣ,ಬೆಳ್ತಂಗಡಿ ಬೆಳ್ತಂಗಡಿ ಸಿವಿಎಲ್ ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಜಗದೀಶ್ ಪ್ರಸಾದ್ ಎನ್,ಮೂಲ್ಕಿ ಸಿವಿಎಲ್ ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಜೀವನ್ ಕೆ ಶೆಟ್ಟಿ ಉಪಸ್ಥಿತರಿದ್ದರು.

2025-27 ನೇ ಸಾಲಿನ ನೂತನ ಅಧ್ಯಕ್ಷ ಸುರೇಶ್ ಬಂಗೇರ ಎಂ.ಡಿ,, ಕೋಶಾಧಿಕಾರಿ ನಾಗೇಶ್ ಎಂ ಮತ್ತು ಆಡಳಿತ ಮಂಡಳಿಗೆ ಹಿಂದಿನ ಸಾಲಿನ ಸಿವಿಲ್ ಇಂಜಿನಿಯರಿಂಗ್ ಅಸೋಸಿಯೇಷನ್ ಪದಾಧಿಕಾರಿಗಳು ಅಧಿಕಾರ ಹಸ್ತಾಂತರಿಸಿದರು.ಇಂಜಿನಿಯರ್ಸ್ ಚೇತನ್ ಎಸ್, ಕೇಶವ, ಪ್ರಮೋದ್,ನಿತಿನ್ ಬಿ, ಶ್ರವಣ್ ಕಾಂತಾಜೆ, ಹರ್ಷೇಂದ್ರ ಕುಮಾರ್, ಹಂಸರಾಜ್, ಯಶೋಧರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇಂಜಿಯರ್ ರವಿರಾಜ್ ಹಾಗೂ ಇಂಜಿನಿಯರ್, ಅಧ್ಯಕ್ಷ ಜಗದೀಶ್ ಪ್ರಸಾದ್ ದಂಪತಿಯನ್ನು ಬೆಳ್ತಂಗಡಿ ಸಿವಿಎಲ್ ಇಂಜಿನಿಯರ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು.ಇಂಜಿನಿಯರ್ ಯಶೋಧರ್ ಸ್ವಾಗತಿಸಿದರು. ಚೇತನ್ ವಾರ್ಷಿಕ ವರದಿ ಮಂಡಿಸಿದರು.ಕೋಶಾಧಿಕಾರಿ ನಾಗೇಶ್ ಎಂ ಮುಂದಿನ ಬಜೆಟ್ ಮಂಡಿಸಿದರು.ಡಾ‌.ರವೀಶ್ ಪಡುಮಲೆ ನಿರೂಪಿಸಿದರು.ವಿದ್ಯಾ ಕುಮಾರ್ ಕಾಂಚೋಡು ಸಹಕರಿಸಿದರು.ಕಾರ್ಯದರ್ಶಿ ಸಿಜೋ ಜೋಸೆಫ್ ವಂದಿಸಿದರು.

Related posts

ಧರ್ಮಸ್ಥಳ : ಶ್ರೀ ಧ.  ಮಂ.  ಆಂಗ್ಲ ಮಾಧ್ಯಮ ಶಾಲೆಯಲ್ಲಿ  ನಾಯಕತ್ವ ತರಬೇತಿ ಕಾರ್ಯಾಗಾರ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ನವಧ್ವನಿ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವೆಬ್ ಸೈಟ್ ಲೋಕಾರ್ಪಣೆ

Suddi Udaya

ಬರೆಂಗಾಯ: 29ನೇ ವರ್ಷದ ಮೊಸರು ಕುಡಿಕೆ ಉತ್ಸವ: ಶಾಸಕ ಹರೀಶ್ ಪೂಂಜರಿಗೆ ಸನ್ಮಾನ

Suddi Udaya

ಬೆಳ್ತಂಗಡಿ: ಡಿಕೆಡಿಆರ್‌ಎಸ್ ಸಂಸ್ಥೆಯಲ್ಲಿ ಕ್ಲಸ್ಟರ್ ಮಟ್ಟದ ಸಾಂವಿಧಾನಿಕ ಹಕ್ಕುಗಳ ಬಗ್ಗೆ ಮಾಹಿತಿ ಕಾರ್ಯಾಗಾರ

Suddi Udaya

ಪ್ರಧಾನಿಯಾಗಿ ನರೇಂದ್ರಮೋದಿಯವರ ಪ್ರಮಾಣ ವಚನ: ಇಂದಬೆಟ್ಟುವಿನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

Suddi Udaya

ಬಳಂಜ ಶಾಲೆಗೆ ಹಳೆ ವಿದ್ಯಾರ್ಥಿಗಳಿಂದ ಪ್ಲೇಟ್ ಇಡುವ ಸ್ಟ್ಯಾಂಡ್ ಕೊಡುಗೆ

Suddi Udaya
error: Content is protected !!