38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ: ಅಭ್ಯಾಸ್ ಪಿ .ಯು ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿಯ ಆಚರಣೆ

ಉಜಿರೆ: ಅಭ್ಯಾಸ್ ಪಿ .ಯು ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿಯ ಆಚರಣೆ ಅ.7 ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಭ್ಯಾಸ್ ಪಿ .ಯು ಕಾಲೇಜಿನ ಅಧ್ಯಕ್ಷ ಕಾರ್ತಿಕೇಯ ಎಂ. ಎಸ್ ರವರು ವಹಿಸಿಕೊಂಡು ದ್ವೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವೇದಿಕೆಯಲ್ಲಿ ಅಭ್ಯಾಸ್ ಪಿ .ಯು ಕಾಲೇಜಿನ ಆಡಳಿತ ಅಧಿಕಾರಿ ಪ್ರಮೋದ್ ಗೌಡ ಮತ್ತು ಕಾರ್ಯಕ್ರಮದ ಸಂಯೋಜಕರು , ಅಭ್ಯಾಸ್ ಪಿ .ಯು ಕಾಲೇಜಿನ ಉಪಪ್ರಾಂಶುಪಾಲರದ ಚಂದ್ರಶೇಖರ ಗೌಡ ಹಾಗೂ ಹಿಂದಿ ವಿಭಾಗದ ಮುಖ್ಯಸ್ಥೆ ರಾಜೇಶ್ವರಿ ಉಪ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರದ ಚಂದ್ರಶೇಖರ ಗೌಡ ಕಾರ್ಯಕ್ರಮದ ಕುರಿತು ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರಾಮಾಯಣದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.

ಅಧ್ಯಕ್ಷೀಯ ಮಾತುಗಳನ್ನಾಡಿದ ಕಾರ್ತಿಕೇಯ ಎಂ.ಎಸ್ ಅವರು ಇಂಥಹ ಮೌಲ್ಯದಾಯಕ ಕಾರ್ಯಕ್ರಮಗಳು ನಮ್ಮ ಕಾಲೇಜಿನಲ್ಲಿ ಅನಿವಾರ್ಯವಾಗಿದ್ದು ಮುಂದಿನ ದಿನಗಳಲ್ಲಿ ಕೂಡ ಇಂಥಹ ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮದಲ್ಲಿ ಪಿ.ಆರ್.ಓ ಧನಂಜಯ ಹಾಗೂ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು, ಹಾಗೂ ವಿಧ್ಯಾರ್ಥಿಗಳು ಭಾಗವಹಿಸಿದ್ದರು , ವಿಧ್ಯಾರ್ಥಿ ತನುಶ್ರೀ ಪ್ರಾರ್ಥನೆಗೈದರು, ಕನ್ನಡ ವಿಭಾಗದ ಉಪನ್ಯಾಸಕ ಸುಧೀರ್ ಸ್ವಾಗತಿಸಿ, ನಿರೂಪಿಸಿದರು. ನಿಲಯ ಪಾಲಕರಾದ ಜೀತೇಶ್ ವಂದಿಸಿದರು.

Related posts

ಡಿ.16: ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ‘ಕೋರಿ ಜಾತ್ರೆ’

Suddi Udaya

ಗೇರುಕಟ್ಟೆ ಸಮೀಪದ ಪರಪ್ಪು ವಲಿಯುಲ್ಲಾಹಿ ಫಕೀರ್ ಮುಹಿಯುದ್ದೀನ್ ದರ್ಗಾ ಶರೀಫ್ ನ ವರ್ಷಂಪ್ರತಿ ನಡೆಯುವ ಉರೂಸ್ ಸಮಾರಂಭದ ಪೋಸ್ಟರ್ ಬಿಡುಗಡೆ

Suddi Udaya

ದೀಪಕ್ ಜಿ ಯವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಮಡಂತ್ಯಾರು ವಲಯ ಭಜನಾ ಮಂಡಳಿಗಳ ಸಭೆ

Suddi Udaya

ಶಿಶಿಲ ಸ.ಉ.ಹಿ.ಪ್ರಾ. ಶಾಲೆಗೆ ಯೂತ್ ಫಾರ್ ಸೇವಾ ಎನ್.ಜಿ ಒ ಸಂಸ್ಥೆಯ ವತಿಯಿಂದ ಡಿಜಿಟಲ್ ಸ್ಮಾರ್ಟ್ ಕ್ಲಾಸ್ ಅಳವಡಿಕೆ

Suddi Udaya

ವಿಷವಿಕ್ಕಿದ ದುರುಳರು; 10ಕ್ಕಿಂತ ಅಧಿಕ ನಾಯಿಗಳ ಸಾವು

Suddi Udaya
error: Content is protected !!