September 6, 2026
ಸಾಧಕರು

ನಡ ನಿವಾಸಿ ಅರುಣ್ ಜಿ. ಡಿ.ಸೋಜ ಅವರಿಗೆ ಜೈಪುರ ಮಾಳವೀಯ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಿಂದ ಪಿಹೆಚ್ ಡಿ ಪದವಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ನಿವಾಸಿ ಅರುಣ್ ಜಿ. ಡಿ.ಸೋಜ ಅವರು ಮಂಡಿಸಿದ ” ಕಾರ್ಪೋರೇಟ್ ಆಡಳಿತ ಮತ್ತು ಮಾಹಿತಿ ಅಸಮಾನತೆ, ಭಾರತೀಯ ಕಂಪನಿಗಳ ಅಧ್ಯಯನ” ಎಂಬ ಪ್ರಬಂಧಕ್ಕೆ ರಾಜಸ್ತಾನ ಜೈಪುರ ಮಾಳವೀಯ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಪಿಹೆಚ್ ಡಿ ಪದವಿ ನೀಡಿ ಗೌರವಿಸಿದೆ.
ಅರುಣ್ ಜಿ. ಡಿ.ಸೋಜ ಅವರು ಡಾ. ಶ್ರೀ ದೇವ್ ದೇವ್ ಜಿ., ಎಂ.ಎನ್. ಐ.ಟಿ ಜೈಪುರ್ ಇವರ ಮಾರ್ಗದರ್ಶನದಲ್ಲಿ ಡಾ. ಕೃಷ್ಣ ಪ್ರಸಾದ್ ಟಿ.ಎ.ಪಿ.ಎಂ.ಐ ಮಣಿಪಾಲ್ ಇವರ ಸಹ ಮಾಗ೯ದಶ೯ನದಲ್ಲಿ ಈ ಪ್ರಬಂಧವನ್ನು ಮಂಡಿಸಿದ್ದರು.
ಅರುಣ್ ಜಿ. ಡಿ.ಸೋಜ ಅವರು ಜಸ್ಟೀಸ್ ಕೆ.ಎಸ್.ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಿಟ್ಟೆಯಲ್ಲಿ ಉದ್ಯೋಗದಲ್ಲಿದ್ದು, ನಡ ಗ್ರಾಮದ ಗ್ರೆಗೋರಿ ಡಿ.ಸೋಜ ಮತ್ತು ದಿ. ಎಮಿಲ್ಡ ಡಿ.ಸೋಜ ಅವರ ಪುತ್ರ.

Related posts

ನಿವೃತ್ತ ಯೋಧ ಡಾ.ಕೆ.ಎಸ್ ಗೋಪಾಲಕೃಷ್ಣ ಕಾಂಚೋಡು ಅವರಿಗೆ ‘ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ

Suddi Udaya

ಉದ್ಯೋಗ ಖಾತರಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದ ಬಂದಾರು ಗ್ರಾ.ಪಂ.ಕ್ಕೆ ಗೌರವ

Suddi Udaya

ವಿಶ್ವ ಛಾಯಾಗ್ರಾಹಣ ದಿನಾಚರಣೆ ಪ್ರಯುಕ್ತ ಬೆಳ್ತಂಗಡಿಯ ಸಿಲ್ವಿಯಾ ಅವರಿಗೆ ಸನ್ಮಾನ

Suddi Udaya

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ವ್ಯವಹಾರದಲ್ಲಿ ಸಾಧಿಸಿದ ಸರ್ವತೋಮುಖ ಪ್ರಗತಿಯನ್ನು ಗುರುತಿಸಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಾಧನಾ ಪ್ರಶಸ್ತಿ

Suddi Udaya

ಬಾಯ೯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ 10ನೇ ಬಾರಿಗೆ’ ಸಾಧನ ಶ್ರೀ ಪ್ರಶಸ್ತಿ ‘

Suddi Udaya

ಪ್ರೊ. ಮಧೂರು ಮೋಹನ ಕಲ್ಲೂರಾಯರಿಗೆ ‘ಕರ್ನಾಟಕ ಕಲಾ ಶ್ರೀ’ ಪ್ರಶಸ್ತಿ

Suddi Udaya
error: Content is protected !!