37.9 C
ಪುತ್ತೂರು, ಬೆಳ್ತಂಗಡಿ
March 6, 2026
ಅಭಿನಂದನೆಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿಶುಭಾರಂಭ

ಸುದ್ದಿ ಉದಯ ದೀಪಾವಳಿ ವಿಶೇಷ ಸಂಚಿಕೆ ಬಿಡುಗಡೆ

ಬೆಳ್ತಂಗಡಿ: ಬೆಳಕಿನ ಹಬ್ಬ ದೀಪಾವಳಿ ಶುಭ ಸಂದರ್ಭದಲ್ಲಿ ಸುದ್ದಿ ಉದಯ ವಾರ ಪತ್ರಿಕೆ ಪ್ರತಿ ವರ್ಷದಂತೆ ಈ ವರ್ಷವೂ ಹೊರ ತಂದ ‘ಬೆಳಕಿನ ಉದಯ’ ವಿಶೇಷ ಸಾಹಿತ್ಯ ಪುಟಗಳನ್ನು ಒಳಗೊಂಡ ವರ್ಣರಂಜಿತ ವಿಶೇಷ ಸಂಚಿಕೆ-೨೦೨೫ನ್ನು ಅ.೧೫ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಯು. ಶರತ್‌ಕೃಷ್ಣ ಪಡ್ವೆಟ್ನಾಯ ಅವರು ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಪ್ರಾರಂಭಗೊಂಡ ಸುದ್ದಿಉದಯ ವಾರಪತ್ರಿಕೆ ಅಲ್ಪಕಾಲದಲ್ಲಿ ಜನಮನಗಳಿಸಿ ತಾಲೂಕಿನ ಹೆಮ್ಮೆಯ ಪತ್ರಿಕೆಯಾಗಿ ಮೂಡಿ ಬರುತ್ತಿದೆ. ಪತ್ರಿಕೆ ಉತ್ತಮವಾಗಿ ವಿಶಿಷ್ಟ ಗುಣಮಟ್ಟದ ಪ್ರಕಟಗೊಳ್ಳುತ್ತಿದ್ದು, ತಾಲೂಕಿನ ಮೂಲೆ, ಮೂಲೆಗೂ, ತಲುಪಿ ಮನೆ ಮಾತಾಗಿರುವುದು ಅಭಿನಂದನೀಯ ಪ್ರತೀ ವರ್ಷವೂ ದೀಪಾವಳಿ ಪ್ರಯುಕ್ತ ವಿಶೇಷ ಸಂಚಿಕೆಯನ್ನು ಹೊರ ತಂದಿರುವುದು ಸಂತೋಷವಾಗಿದೆ. ಸಂಚಿಕೆಯಲ್ಲಿ ಉತ್ತಮ ವಿಚಾರಗಳಿದ್ದು, ತಾಲೂಕಿನ ಓದುಗರಿಗೆ , ಬರಹ ಗಾರರಿಗೆಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸಿರುವುದು ಒಳ್ಳೆಯ ವಿಚಾರ ಎಂದು ಹೇಳಿ, ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಪತ್ರಿಕೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ತುಕಾರಾಮ್ ಬಿ., ಸಂಪಾದಕರಾದ ಬಿ.ಎಸ್.ಕುಲಾಲ್, ಉಪಸಂಪಾದಕ ಸಂತೋಷ್ ಪಿ.ಕೋಟ್ಯಾನ್, ವ್ಯವಸ್ಥಾಪಕ ತಿಮ್ಮಪ್ಪ ಗೌಡ ನಿಡ್ಲೆ , ವರದಿಗಾರ ಮನೀಶ್ ವಿ.ಅಂಚನ್, ರವೀಂದ್ರ ಶೆಟ್ಟಿ ಬಳಂಜಉಪಸ್ಥಿತರಿದ್ದರು.

Related posts

ಕುವೆಟ್ಟು: ಜಲಾಯನ ವ್ಯಾಪ್ತಿಯ ಸ್ವ ಸಹಾಯ ಸಂಘದ ಮಹಿಳೆಯರಿಗೆ ಆಹಾರ ಉತ್ಪನ್ನ ತಯಾರಿಕೆ ಮತ್ತು ಸಿಹಿ ತಿಂಡಿ ತಯಾರಿ ಬಗ್ಗೆ ತರಬೇತಿ

Suddi Udaya

ಬಳ್ಳಮಂಜ – ಮಾಯಿಲೋಡಿ ಸಂಪರ್ಕಿಸುವ ರಸ್ತೆಯಲ್ಲಿ ಗುಡ್ಡ ಕುಸಿತ: ರಸ್ತೆಗೆ ಬೀಳುವ ಸ್ಥಿತಿಯಲ್ಲಿದೆ ಮರ

Suddi Udaya

ಶಿಶಿಲ ಗ್ರಾ.ಪಂ. ನಲ್ಲಿ ನೋಂದಾಯಿತ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವಲಂಬಿತರಿಗೆ ಆರೋಗ್ಯ ತಪಾಸಣಾ ಶಿಬಿರ

Suddi Udaya

ಪುಂಜಾಲಕಟ್ಟೆ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ: ಅಧ್ಯಕ್ಷರಾಗಿ ಚಿದಾನಂದ ಮಾಣಿಂಜ ಆಯ್ಕೆ

Suddi Udaya

ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ನದಿಗೆ ಬಿದ್ದು ಸಾವು

Suddi Udaya

ಗುರುವಾಯನಕೆರೆ ಶ್ರೀ ಕ್ಷೇತ್ರ ಮಂಚಕಲ್ ದೈವ ಸನ್ನಿಧಿಯ 3ನೇ ವರುಷದ ಪ್ರತಿಷ್ಠಾ ವರ್ಧಂತಿಯ ಪ್ರಯುಕ್ತ ಪರ್ವ ಸೇವೆ

Suddi Udaya
error: Content is protected !!