37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿವರದಿ

ಅಳದಂಗಡಿ: ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಬಡಗಕಾರಂದೂರು ಕಾರ್ಯಕ್ಷೇತ್ರದ ಸಿ.ಎಸ್.ಸಿ. ಕೇಂದ್ರ ಸ್ಥಳಾಂತರ

ಅಳದಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಳದಂಗಡಿ ವಲಯದ, ವಲಯ ಕಛೇರಿ ಬಡಗಕಾರಂದೂರು ಎ ಮತ್ತು ಬಿ ಕಾರ್ಯಕ್ಷೇತ್ರದ ಸಿ.ಎಸ್.ಸಿ. ಕೇಂದ್ರವನ್ನು ಅಳದಂಗಡಿ ಮೌಂಟ್ ಕಾರ್ಮೆಲ್ ಕಾಂಪ್ಲೆಕ್ಸ್ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.

ಧಾರ್ಮಿಕ ಪೂಜಾ ಪ್ರಾರ್ಥನೆಯನ್ನು ನೆರವೇರಿಸಿ ಎ.ಬಿ. ಒಕ್ಕೂಟದ ಅಧ್ಯಕ್ಷರುಗಳಾದ ಹರೀಶ್ ಸಾಲ್ಯಾನ್, ಕೃಷ್ಣಪ್ಪ ಪೂಜಾರಿ, ಮೇಲ್ವಿಚಾರಕಿ ಯಶೋಧ ಎಂ. ದೀಪ ಪ್ರಜ್ವಲನೆಗೊಳಿಸಿದರು.

ಜನಜಾಗೃತಿ ತಾಲೂಕು ಸದಸ್ಯರಾದ ಸದಾನಂದ ಪೂಜಾರಿ ಮಾತನಾಡಿ, ಯೋಜನೆಗೆ ಸಂಬಂಧಪಟ್ಟ ಎಲ್ಲಾ ಕಾರ್ಯಕ್ರಮಗಳಲ್ಲಿ ಜೊತೆಯಾಗಿದ್ದು ಕಾರ್ಯಕ್ರಮಗಳ ಬಗ್ಗೆ ಹಾಗೂ ಕರ್ತವ್ಯಗಳನ್ನು ನಿಭಾಯಿಸುವುದರ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಶಾಂತರಾಜ್ ಗುಡಿಗಾರ್, ಬಡಗಕಾರಂದೂರು ಗ್ರಾಮದ ನಿಕಟಪೂರ್ವ ಅಧ್ಯಕ್ಷರಾದ ಮಂಜುನಾಥ ಆಚಾರ್ಯ, ಹರೀಶ್ ಆಚಾರ್ಯ, ಪದಾಧಿಕಾರಿಗಳಾದ ಸದಾನಂದ ಪೂಜಾರಿ, ಧರ್ಣಪ್ಪ ಪೂಜಾರಿ, ಪದಾಧಿಕಾರಿಗಳು, ವಲಯದ ಅಧ್ಯಕ್ಷರು ಚಂದಪ್ಪ ಪೂಜಾರಿ, ವಲಯ ಜನಜಾಗೃತಿ ಅಧ್ಯಕ್ಷ ನಾರಾಯಣ ಸಾಲ್ಯಾನ್, ನಾರಾವಿ ಜನಜಾಗೃತಿ ವಲಯ ಅಧ್ಯಕ್ಷ ನಿತ್ಯಾನಂದ ನಾವರ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ, ಆಮಂತ್ರಣ ವೇದಿಕೆಯ ವಿಜಯ್ ಕುಮಾರ್ ಜೈನ್, ಮೇಲ್ವಿಚಾರಕಿ ಯಶೋಧ ಎಂ., ಸೇವಾ ಪ್ರತಿನಿಧಿಯವರಾದ ಶುಭ, ಪೂರ್ಣಿಮಾ ಬಡಗಕಾರಂದೂರು, ಹರಿಣಾಕ್ಷಿ ಪಿಲ್ಯ, ಪುಷ್ಪ ನಾವರ, ಮಮತಾ ಪಿಲ್ಯ ಕುದ್ಯಾಡಿ, ಚಂದ್ರಾವತಿ, ಹರಿಣಾಕ್ಷಿ ಶಿರ್ಲಾಲು, ಸುಲೋಚನ ಸುಲ್ಕೇರಿಮೊಗ್ರು, ಕಟ್ಟಡದ ಮಾಲೀಕರು ಮತ್ತು ಸಿ.ಎಸ್.ಸಿ.ಯವರು ಅಳದಂಗಡಿ ವಲಯಕ್ಕೆ ಸಂಬಂಧಪಟ್ಟ ಎಲ್ಲಾ ಒಕ್ಕೂಟದ ಅಧ್ಯಕ್ಷರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಕಾಡಾನೆ ನಿರಂತರ

Suddi Udaya

ಏಪ್ರಿಲ್ 29: ಧರ್ಮಸ್ಥಳದಲ್ಲಿ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ: ಅರ್ಜಿ ಆಹ್ವಾನ

Suddi Udaya

ಕೊಕ್ಕಡ: ಹೊನ್ನಮ್ಮ ಮನೆ ನಿರ್ಮಾಣಕ್ಕೆ ನೆರವು

Suddi Udaya

ಮದ್ದಡ್ಕ ಎಸ್ ಡಿ ಪಿ ಐ ಸಂಸ್ಥಾಪನ ದಿನಾಚರಣೆ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತರಾದ ಪಿ ಜಿ ಆರ್ ಸಿಂಧ್ಯಾ ಭೇಟಿ

Suddi Udaya

ಪಿಲಿಪಂಜರ ಕ್ಷೇತ್ರ ಪ್ರತಿಷ್ಟಾ ಬ್ರಹ್ಮ ಕಲಶೋತ್ಸವ ಹಾಗೂ ದೈವಗಳ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!