ಬಂದಾರು: ಬಂದಾರು ಗ್ರಾಮದ ಪೆರ್ಲ ಬೈಪಾಡಿ ಕೋಡಿಮಜಲು ನಿವಾಸಿ ಪೆರ್ಲ- ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಮೊಕ್ತೇಸರರಾದ ಕುಕ್ಕಪ್ಪ ಗೌಡ (65ವ) ಅ.26ರಂದು ಹೃದಯಘಾತದಿಂದ ನಿಧನರಾದರು.
ಮೃತರು ಪತ್ನಿ ಚಂದ್ರಾವತಿ, ಗಂಡು ಮಕ್ಕಳಾದ ಜಯಂತ ಮತ್ತು ಪೆರ್ಲ ಬೈಪಾಡಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಹರೀಶ್ ಗೌಡ, ಈರ್ವರು ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಬಂಧುಮಿತ್ರರು, ಕುಟುಂಬಸ್ಥರನ್ನು ಅಗಲಿದ್ದಾರೆ.











