September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿವರದಿ

ಧರ್ಮಸ್ಥಳ ಪ್ರಕರಣ: ಮಹೇಶ್ ಶೆಟ್ಟಿ ತಿಮರೋಡಿ ಸೇರಿ ನಾಲ್ವರ ವಿರುದ್ದ ಎಫ್.ಐ.ಆರ್ ಗೆ ಹೈಕೋರ್ಟ್ ಮಧ್ಯಂತರ ತಡೆ

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ, ವಿಠಲ ಗೌಡ ಅವರ ವಿರುದ್ದ ಬಲವಂತದ ಕ್ರಮ ಬೇಡ ಎಂದು ರಾಜ್ಯ ಉಚ್ಚ ನ್ಯಾಯಾಲಯ ಆದೇಶ ನೀಡಿದ್ದು ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೂ ಮುಂದಿನ ವಿಚಾರಣೆಯ ವರೆಗೆ ತಾತ್ಕಲಿಕ ತಡೆಯಾಜ್ಞೆ ನೀಡಿದೆ.

ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇತರರು ತಮಗೆ ಎಸ್.ಐ.ಟಿ ನೀಡಿರುವ ನೋಟೀಸ್ ಅನ್ನು ರದ್ದು ಪಡಿಸಬೇಕು, ಪ್ರಕರಣ ರದ್ದು ಪಡಿಸಬೇಕು ಎಂದು ಸಲ್ಲಿಸಿದ್ದ ಮನವಿಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಗುರುವಾರ ವಿಚಾರಣೆ ನಡೆದು ಎರಡೂ ಕಡೆಯವರ ವಾದ ವಿವಾದ ಆಲಿಸಿದ ನ್ಯಾಯಾಧೀಶರು ಈ ನಾಲ್ವರು ಹೋರಾಟಗಾರರ ವಿರುದ್ದ ಬಲವಂತದ ಕ್ರಮ ಬೇಡ ಎಂದು ಆದೇಶ ನೀಡಿದ್ದಾರೆ.

ಅದೇ ರೀತಿ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೂ ತಡೆಯಾಜ್ಞೆ ನೀಡಿದ್ದಾರೆ. ನ್ಯಾಯಾಲಯದಲ್ಲಿ ಎಸ್.ಐ.ಟಿ ಪರ ವಕೀಲರು ಮಹೇಶ್ ಶೆಟ್ಟಿ ಹಾಗೂ ಇತರರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ ಎಂಬ ವಿಚಾರವನ್ನು ನ್ಯಾಯಾಲಯದ ಮುಂದೆ ಇಟ್ಟಿದ್ದು ಆರೋಪಿಗಳಾಗಿ ನೋಟೀಸ್ ನೀಡಲಾಗಿದೆ ಎಂದು ವಾದಿಸಿದ್ದಾರೆ. ಈಗಾಗಲೇ ಇವರು ಸಾಕಷ್ಟು ವಿಚಾರಣೆ ಎದುರಿಸಿದ್ದಾರೆ ಎಫ್.ಐ.ಆರ್ ದಾಖಲಿಸಿರುವುದು ಸರಿಯಾಗಿಲ್ಲ ಎಂಬ ವಾದವನ್ನು ಮಂಡಿಸಿದರು. ವಿಚಾರಣೆ ಆಲಿಸಿದ ನ್ಯಾಯಾಲಯ ಅರ್ಜಿದಾರರ ವಿರುದ್ದದ ಎಫ್.ಐ.ಆರ್ ಗೆ ಮುಂದಿನ ವಿಚಾರಣೆಯ ವರೆಗೆ ತಡೆ ನೀಡಿ ವಿಚಾರಣೆಯನ್ನು ನ12 ಕ್ಕೆ ಮುಂದೂಡಿದ್ದಾರೆ.

Related posts

ಡೀಸೆಲ್, ಪೆಟ್ರೋಲ್ ದರ ಮೂರನೇ ಬಾರಿ ಹೆಚ್ಚಳ

Suddi Udaya

ಕಿಲ್ಲೂರು : ಹರ್ಷ ಮಟನ್, ಚಿಕನ್, ಹಾಗೂ ಫಿಶ್ ಸೆಂಟರ್ ಶುಭಾರಂಭ

Suddi Udaya

ಸುಲ್ಕೇರಿ: ಪಿ‌ಎಂ ಜನ್ ಮನ್ ಯೋಜನೆಯಡಿ ರೂ. 6.8 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಟ್ರಿಂಜೆ- ಸುಲ್ಕೇರಿ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ ದ.ಕ ಜಿಲ್ಲಾ ಸಂಸದ ಕ್ಯಾ‌.ಬ್ರಿಜೇಶ್ ಚೌಟರವರಿಂದ ಶಿಲಾನ್ಯಾಸ

Suddi Udaya

ಮೆದುಳು ಜ್ವರದಿಂದ ಕಿಲ್ಲೂರಿನ ಯುವಕ ಶಶಿರಾಜ್ ಪೂಜಾರಿ ನಿಧನ

Suddi Udaya

ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಪಾರ ಮೇಳ

Suddi Udaya

ಎಸ್ ಡಿ ಎಮ್ ‌ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿಷೇಕ ವರ್ಧಂತ್ಯುತ್ಸವದ ಪ್ರಯುಕ್ತ ‘ಪೂಜ್ಯ ಪಥ’ ಪೂಜ್ಯರು ‌ನಡೆದು ಬಂದ ಹಾದಿಯ ಕುರಿತಾದ ವಿಶೇಷ ಪುಸ್ತಕ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನ

Suddi Udaya
error: Content is protected !!