37.9 C
ಪುತ್ತೂರು, ಬೆಳ್ತಂಗಡಿ
March 6, 2026
ಸಾಧಕರು

ಹೆಮ್ಮೆಯ ಕನ್ನಡಿಗ ‘ರಾಷ್ಟ್ರಪ್ರಶಸ್ತಿ’ಗೆ ಲ| ಡಾ.ಗೋಪಾಲಕೃಷ್ಣ ಕಾಂಚೋಡು ಆಯ್ಕೆ

ಬೆಳ್ತಂಗಡಿ: ಪ್ರಗತಿಪರ ಕೃಷಿಕ ಹಾಗೂ ಭಾರತೀಯ ಭೂ ಸೇನೆಯ ನಿವೃತ್ತ ಯೋಧ ಲ| ಡಾ.ಗೋಪಾಲಕೃಷ್ಣ ಕಾಂಚೋಡು ಅವರು ಬೆಂಗಳೂರಿನ ಪ್ರಿಯದರ್ಶಿನಿ ಗ್ರಾಮೀಣ ಅಭಿವೃದ್ಧಿ ಫೌಂಡೇಶನ್ ಕರ್ನಾಟಕ ರಾಜ್ಯ ನಾಮಕರಣ 52ನೇ ವರ್ಷದ ಸುವರ್ಣ ವರ್ಷಾಚರಣೆ ಅಂಗವಾಗಿ, 71ನೇ ಕರ್ನಾಟಕ ರಾಜ್ಯೋತ್ಸವದ ಶುಭಸಂದರ್ಭದಲ್ಲಿ ನೀಡುವ ‘ಹೆಮ್ಮೆಯ ಕನ್ನಡಿಗ’ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ನ.24ರಂದು ಬೆಂಗಳೂರಿನ ರಂಗಮಂದಿರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕನ್ನಡ ರಾಜೋತ್ಸವ ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ಕಾಂಚೋಡು ಅವರಿಗೆ ಈ ಪ್ರಶಸ್ತಿಯನ್ನು ಗಣ್ಯರ ಉಪಸ್ಥಿತಿಯಲ್ಲಿ ಪ್ರದಾನ ಮಾಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಡಾ. ಗೋಪಾಲಕೃಷ್ಣ ಕಾಂಚೋಡು ಅವರು ಪ್ರಗತಿಪರ ಸಾವಯವ ಕೃಷಿಕರಾಗಿದ್ದು, ಎ.ಕೆ.ಎಂ.ಎಸ್.ಎಸ್‌ನ ಜಿಲ್ಲಾ ಗೌರವಾಧ್ಯಕ್ಷರಾಗಿ, ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ಸದಸ್ಯರಾಗಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಇವರು ‘ಜೈಜವಾನ್ ಜೈ ಕಿಸಾನ್’ ರಾಷ್ಟ್ರಮಟ್ಟದ ಪ್ರಶಸ್ತಿ ಹಾಗೂ ‘ಕರಾವಳಿ ರತ್ನ’ ಪ್ರಶಸ್ತಿಯಿಂದ ಪುರಸ್ಕೃತಗೊಂಡಿದ್ದಾರೆ.

Related posts

ರಕ್ರೇಶ್ವರಿ ಪದವು ಅಂಗನವಾಡಿ
ಕಾರ್ಯಕರ್ತೆ ನಾಗವೇಣಿ ಅವರಿಗೆ
ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ ಜಿಲ್ಲಾ ಪ್ರಶಸ್ತಿಗೆ ಆಯ್ಕೆ

Suddi Udaya

ಶ್ರೀ ಧಮ೯ಸ್ಥಳ ಭಜನಾ ಪರಿಷತ್ ಕಾಯ೯ದಶಿ೯ಯಾಗಿ ಸೇವೆ ಸಲ್ಲಿಸಿದ್ದ, ಜಯರಾಮ ನೆಲ್ಲಿತ್ತಾಯರಿಗೆ “ಸಮಾಜ ಭೂಷಣ”ಪ್ರಶಸ್ತಿ

Suddi Udaya

ಬೆಳ್ತಂಗಡಿ ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ನಿವೃತ್ತ ಶಿಕ್ಷಕರಿಗೆ-ಶಾಖ ಸಿಬ್ಬಂದಿಗಳಿಗೆ ಗೌರವ ಪುರಸ್ಕಾರ ಸಮಾರಂಭ

Suddi Udaya

ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಬರೋಡಾರವರಿಗೆ “ಬಂಟೆರ್ನ ರತ್ನ ಪ್ರಶಸ್ತಿ

Suddi Udaya

ಗುರುವಾಯನಕೆರೆ ದೊಂಪದಬಲಿ ಉತ್ಸವ ಸಮಿತಿ ನೇತೃತ್ವದಲ್ಲಿ :ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕಮಾಧವ ಸಿದ್ದಕಟ್ಟೆಯವರಿಗೆ ಗೌರವಾರ್ಪಣೆ

Suddi Udaya

ಅತ್ಯುನ್ನತ ಸೇವೆಗಾಗಿ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಪಡೆದ ವಿಜಯ ಕುಮಾರ್ ಕೆಲ್ಲಗುತ್ತು ರವರಿಗೆ ಪೊಲೀಸ್ ಮಹಾ ನಿರ್ದೇಶಕರಾದ ಡಾ. ಅಲೋಕ್ ಮೋಹನ್ ರಿಂದ ಸ್ಮರಣಿಕೆ ನೀಡಿ ಗೌರವ

Suddi Udaya
error: Content is protected !!