September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕನ್ನಡ ರಾಜ್ಯೋತ್ಸವದ ಅಂಗವಾಗಿ ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ ಡಿಪ್ಪೊದಲ್ಲಿ ಉಚಿತ ರಕ್ತದೊತ್ತಡ , ಮಧುಮೇಹ ಪರೀಕ್ಷೆ

ಬೆಳ್ತಂಗಡಿ : ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಘಟಕ , ಜ್ಯೂನಿಯರ್ ರೆಡ್ ಕ್ರಾಸ್ ಧರ್ಮಸ್ಥಳ ಆಂಗ್ಲ ಮಾದ್ಯಮ ಶಾಲೆ ಇವುಗಳ ಜಂಟಿ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ ಡಿಪ್ಪೊ ದಲ್ಲಿ ಉಚಿತ ರಕ್ತದೊತ್ತಡ , ಮಧುಮೇಹ ಪರೀಕ್ಷೆ ನಡೆಸಲಾಯಿತು.

ಕಾರ್ಯಕ್ರಮವನ್ನು ಕೆ.ಎಸ್.ಆರ್.ಟಿ.ಸಿ ಧರ್ಮಸ್ಥಳ ಡಿಪ್ಪೊ ಮ್ಯಾನೇಜರ್ ರಮ್ಯ ಕೆ.ಎಮ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಹರಿದಾಸ್ ಎಸ್ .ಎಂ , ಕಾರ್ಯದರ್ಶಿ ಯಶವಂತ್ ಪಟವರ್ಧನ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಘಟಕದ ಸದಸ್ಯರು , ಧರ್ಮಸ್ಥಳ ಆಂಗ್ಲ ಮಾದ್ಯಮ ಶಾಲೆಯ ಮುಖ್ಯಶಿಕ್ಷಕಿ ಪರಿಮಳ ಎಂ.ವಿ , ಸಹ ಶಿಕ್ಷಕರಾದ ಜ್ಯೋತಿ ಲಕ್ಷ್ಮಿ , ಸನ್ಮತಿ , ಜ್ಯೂನಿಯರ್ ರೆಡ್ ಕ್ರಾಸ್ ಧರ್ಮಸ್ಥಳ ಘಟಕದ ವಿದ್ಯಾರ್ಥಿಗಳು ಭಾಗವಹಿಸಿದ್ದರು . ಈ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ ಧರ್ಮಸ್ಥಳ ಡಿಪ್ಪೊದಲ್ಲಿರುವ ಸಿಬ್ಬಂದಿಗಳಿಗೆ , ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ , ನಿರ್ವಾಹಕರಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಉಚಿತವಾಗಿ ರಕ್ತದೊತ್ತಡ , ಮಧುಮೇಹ ಪರೀಕ್ಷೆ ನಡೆಸಲಾಯಿತು.

Related posts

ಕಣಿಯೂರು ವಲಯದ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ

Suddi Udaya

ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದಬೆಟ್ಟು ನವೀಕೃತ ಕೊಠಡಿಯ ಉದ್ಘಾಟನಾ ಸಮಾರಂಭವು

Suddi Udaya

ಉಜಿರೆಯ ಎಸ್‌ಡಿಎಂ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವತಿಯಿಂದ “ಸಿನರ್ಜಿ” ವಿಭಾಗ ವಿದ್ಯಾರ್ಥಿ ವೇದಿಕೆಯ ಉದ್ಘಾಟನಾ ಕಾರ್ಯಕ್ರಮ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಧತ್ತಿನಿಧಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ,ಪ್ರತಿಭಾ ಪುರಸ್ಕಾರ,ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

Suddi Udaya

ಬಂದಾರು: ಬೈಹುಲ್ಲು ಸಾಗಾಟದ ಲಾರಿಗೆ ಬೆಂಕಿ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಮಕ್ಕಳ ದಿನಾಚರಣೆ

Suddi Udaya
error: Content is protected !!