
ಬಳಂಜ: ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಬಳಂಜ ಶಾಲೆಯ ಅಮೃತ ಸಂಭ್ರಮ ಕಾರ್ಯಕ್ರಮವು ಡಿ 13 ಮತ್ತು 14 ರಂದು ನಡೆಯಲಿದ್ದು ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಮಾಜಿ ಶಾಸಕ,ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಕಾರ್ಯಚಟುವಟಿಗಳ ಬಗ್ಗೆ ಹಾಗೂ ಶಾಲೆಗೆ ಕಂಪ್ಯೂಟರ್ ಕೊಠಡಿ ಅವಶ್ಯಕತೆಯಿದೆಯೆಂದು ಅಮೃತ ಮಹೋತ್ಸವದ ಸಮಿತಿಯು ಕೆ.ಹರೀಶ್ ಕುಮಾರ್ ಅವರಿಗೆ ಪ್ರಸ್ತಾಪಿಸಿದಾಗ ಶಾಲೆಯ ಪ್ರಗತಿಯ ಕೆಲಸಕ್ಕೆ ಸಹಕಾರ ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಿಕೆ,ಗೌರವಾಧ್ಯಕ್ಷ ಸುರೇಶ್ ಶೆಟ್ಟಿ ಕುರೆಲ್ಯ, ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ,ಸಮಿತಿ ಪ್ರಮುಖರಾದ ದೀಪಕ್ ಹೆಚ್.ಡಿ,ಸೂರಾಜ್ ಹಾನಿಂಜ,ರಮಾನಾಥ ಶೆಟ್ಟಿ ಪಂಬಾಜೆ,ಅಶ್ವಿನ್ ಕುಮಾರ್ ಬೊಂಟ್ರೋಟ್ಟು,ಸುರೇಶ್ ಪೂಜಾರಿ ಹೇವ,ಜಗದೀಶ್ ಪೂಜಾರಿ ಪೆರಾಜೆ ಉಪಸ್ಥಿತರಿದ್ದರು.











