September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ : ಎಸ್. ಡಿ. ಎಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಡಿಜಿಟಲ್ ಗ್ರಂಥಾಲಯಕ್ಕೆ ಚಾಲನೆ

ಉಜಿರೆ: ಮಾನವನ ಸೃಷ್ಟಿ ಅದ್ಭುತ, ಆತನ ಬುದ್ಧಿ ಮಹತ್ವವಾದದ್ದು, ಯಂತ್ರದ ಬಳಕೆ ಮೂಲಕ ಜಗತ್ತಿಗೆ ಎದುರಾಗುವ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಆವನಲ್ಲಿದೆ, ಜೊತೆಗೆ ಹೊಸ ಹೊಸ ತಂತ್ರಜ್ಞಾನಗಳ ಅಳವಡಿಕೆ ಮೂಲಕ ಶೈಕ್ಷಣಿಕ ಕ್ಷೇತ್ರವಲ್ಲದೇ ಎಲ್ಲಾ ಕ್ಷೇತ್ರಗಳಲ್ಲಿ ಅಭೂತಪೂರ್ಣ ಸಾಧನೆ ಸಾಧ್ಯವಾಗಿಸಿದ್ದಾನೆ. ಕಾಲೇಜಲ್ಲಿ ಚಾಲನೆಗೊಂಡ ಡಿಜಿಟಲ್ ಗ್ರಂಥಾಲಯದ ಸರಿಯಾದ ಬಳಕೆ ನಿಮ್ಮಿಂದಾಗಲಿಯೆಂದು, ಅತಿಥಿಯಾಗಿ ಆಗಮಿಸಿ ಡಿಜಿಟಲ್ ಗ್ರಂಥಾಲಯಕ್ಕೆ ಚಾಲನೆ ನೀಡಿದ ಎಸ್. ಡಿ. ಎಂ. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಪ್ರಮೋದ್ ಕುಮಾರ್ ಹೇಳಿದರು.

ಎಸ್. ಡಿ. ಎಂ. ಪದವಿ ಕಾಲೇಜಿನ ಗಣಕಶಾಸ್ತ್ರ ಮುಖ್ಯಸ್ಥ ಶೈಲೇಶ್ ಕುಮಾರ್ ಜೊತೆಗಿದ್ದು ಸಹಕರಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಅಧ್ಯಕ್ಷತೆ ವಹಿಸಿ ಸಂಸ್ಥೆ ವಿದ್ಯಾರ್ಥಿಗಳಿಗಾಗಿ ಎಲ್ಲಾ ರೀತಿಯಲ್ಲೂ ಶ್ರಮಿಸುತ್ತಿದ್ದು, ವಿದ್ಯಾರ್ಥಿಗಳು ಅದರ ಪೂರ್ಣ ಪ್ರಯೋಜನ ಪಡೆದುಕೊಳ್ಳುವುದು ಬಹಳ ಮುಖ್ಯ ಎಂದರು.
ಅತಿಥಿಗಳ ಸಾಧನೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ ಪಡೆದ ಪ್ರಮೋದ್ ಕುಮಾರ್ ಹಾಗೂ ರಾಷ್ಟ್ರೀಯ ಮಟ್ಟದ ವ್ಯಂಗ್ಯಚಿತ್ರಕಾರ ಪ್ರಶಸ್ತಿ ಪಡೆದ ಶೈಲೇಶ್ ಕುಮಾರ್ ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಗ್ರಂಥಪಾಲಕರಾದ ಗಿರಿಧರ್ ಸಹಕರಿಸಿದರು.

ಗಣಕ ಶಾಸ್ತ್ರದ ಉಪನ್ಯಾಸಕ ಪವಿತ್ರ ಕುಮಾರ್ ವಂದಿಸಿದರು. ಕಾಲೇಜಿನ ವಿದ್ಯಾರ್ಥಿ ನಿಖಿಲ್ ನಿರೂಪಿಸಿದರು.

Related posts

ಉಜಿರೆ ಬೃಹತ್ ಹಿಂದೂ ಸಂಗಮ ಆಯೋಜನಾ ಸಮಿತಿ ರಚನೆ

Suddi Udaya

ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದ್ದೇ ರಸ್ತೆಯಲ್ಲೇ ಹರಿದ ನೀರು: ಬಂಗಾಡಿ ಸಿಎ ಬ್ಯಾಂಕ್ ಹಾಗೂ ಜೈನ ಬಸದಿ ವತಿಯಿಂದ ಪೈಪ್ ಅಳವಡಿಕೆ: “ಸುದ್ದಿ ಉದಯ ಜನಧ್ವನಿ Effect”

Suddi Udaya

ಪ್ರಕೃತಿ ವಿಸ್ಮಯ: ಒಂದೇ ಗೊನೆಯಲ್ಲಿ ಎರಡು ಬಾಳೆ ಹೂ(ಪೂಂಬೆ)

Suddi Udaya

ಆಟೋ ಚಾಲಕ- ಮಾಲಕ ಸಂಘದ ಮಾಜಿ ಅಧ್ಯಕ್ಷ ಶಿವಯ್ಯ ಪೂಜಾರಿ ನಿಧನ

Suddi Udaya

ಯಕ್ಷಭಾರತಿ ಸಂಸ್ಥೆಯ ವತಿಯಿಂದ ಕೋಳ್ಯೂರು ರಾಮಚಂದ್ರ ರಾವ್ ರವರಿಗೆ ಸನ್ಮಾನ

Suddi Udaya

ಬೆಳ್ತಂಗಡಿ: ಡಾ. ಯೂಸುಫ್ ಕುಂಬ್ಲೆ ಅವರ ಫಾತಿಮಾ ಹೆಲ್ತ್ ಫೌಂಡೇಶನ್ ವತಿಯಿಂದ 35 ಕುಟುಂಬಕ್ಕೆ ಆಹಾರದ ಕಿಟ್ ವಿತರಣೆ

Suddi Udaya
error: Content is protected !!