September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಬಳಂಜ ಸುವರ್ಣ ನಿಲಯದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

ಬೆಳ್ತಂಗಡಿ; ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀಮತಿ ಮಿನಾಕ್ಷಿ ಮತ್ತು ಸಾಂತಪ್ಪ ಸುವರ್ಣ ಕುಟುಂಬಸ್ಥರ ಹರಕೆಯ ಸೇವಾರ್ಥವಾಗಿ ‘ಶ್ರೀ ದೇವಿ ಮಹಾತ್ಮೆ’ ಎಂಬ ಪೌರಾಣಿಕ ಕಥಾ ಭಾಗವು ಏ.13ರಂದು ಬಳಂಜದ ಸುವರ್ಣ ನಿಲಯದಲ್ಲಿ ಜರುಗಿತು.

ಸಂಜೆ ಚೌಕಿಯಲ್ಲಿ ಶ್ರೀ ದೇವಿಯ ಮಹಾಪೂಜೆ ನೆರವೇರಿದ ಬಳಿಕ ವಿದ್ಯುತ್ ದೀಪಾಂಕೃತ ರಂಗಸ್ಥಳದಲ್ಲಿ ಶ್ರೀ ದೇವಿ ಮಹಾತ್ಮೆ ಕಥಾಭಾಗವು ಪ್ರದರ್ಶನಗೊಳ್ಳವುದರ ಮೂಲಕ ಯಕ್ಷಗಾನ ಕಲಾಪ್ರೇಮಿಗಳಿಗೆ ರಸದೌತಣ ನೀಡಿತು. ರಾತ್ರಿ ಯಕ್ಷಗಾನವನ್ನು ವೀಕ್ಷಿಸುವುದಕ್ಕೆ ಬಂದಂತಹ ಸರ್ವರಿಗೂ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಶಾಸಕ ಹರೀಶ್ ಪೂಂಜ, ಅಳದಂಗಡಿ ಶ್ರೀ ಸತ್ಯದೇವತಾ ದೇವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ, ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ, ಮೇಲಂತಬೆಟ್ಟು ಭಗವತಿ ದೇವಸ್ಥಾನದ ಆಡಳಿತ ಮೊಕ್ತೇಸರ ಯೋಗೀಶ್ ಹಾಗೂ ವಿವಿಧ ಕ್ಷೇತ್ರದ ಗಣ್ಯರು, ಬಂಧು, ಬಳಗದವರು, ಊರವರು, ಇತರರು ಉಪಸ್ಥಿತರಿದ್ದು ದೇವರ ಪ್ರಸಾದ ಸ್ವೀಕರಿಸಿದರು.

ಯಕ್ಷಗಾನ ಮೊದಲು ಬಳಂಜ ಸುವರ್ಣ ನಿಲಯದಲ್ಲಿ ದೇವರಿಗೆ ಪೂಜೆ ಸಲ್ಲಿಸಿ,ಮೆರವಣಿಗೆ ಮೂಲಕ ರಂಗಸ್ಥಳಕ್ಕೆ ಆಗಮಿಸಲಾಯಿತು. ನಾಲ್ಕು ಭಜನಾ ತಂಡಗಳನ್ನು ಗೌರವಿಸಲಾಯಿತು.ಸಾವಿರಕ್ಕೂ ಅಧಿಕ ಕಲಾಭಿಮಾನಿಗಳು ಭಾಗವಹಿಸಿದರು.

ಶ್ರೀಮತಿ ಮೀನಾಕ್ಷಿ-ಸಾಂತಪ್ಪ ಸುವರ್ಣ, ಮಧುಕರ್, ಮನೋಹರ್ ಬಳಂಜ,ಮಹೇಂದ್ರ ಹಾಗೂ ಮನೆಯವರು ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿದರು.

Related posts

ಕಡಿರುದ್ಯಾವರ: ಕೆ. ಎನ್. ಭಟ್ ಶಿರಾಡಿಪಾಲ್ ಜನ್ಮ ಶತಮಾನೋತ್ಸವ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಖ್ಯಾತ ಕಾದಂಬರಿಕಾರ ಮತ್ತು ಲೇಖಕ ಎಸ್.ಎಲ್. ಭೈರಪ್ಪ ನಿಧನ: ಡಾ. ಹೆಗ್ಗಡೆಯವರಿಂದ ಸಂತಾಪ

Suddi Udaya

ಅಳದಂಗಡಿ: ಕೆದ್ದುವಿನಲ್ಲಿ ಪೆಟ್ರೋಲ್ ಪಂಪ್ ಶುಭಾರಂಭ, ಶಾಸಕ ಹರೀಶ್ ಪೂಂಜರಿಂದ ಉದ್ಘಾಟನೆ

Suddi Udaya

ಬಳಂಜ: ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಒಕ್ಕೂಟದಿಂದ ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯ

Suddi Udaya

ಶಾಲೆತ್ತಡ್ಕ ಸರಕಾರಿ ಪ್ರೌಢಶಾಲೆಗೆ ಸತತ 6ನೇ ಬಾರಿ ಶೇ.100 ಫಲಿತಾಂಶ

Suddi Udaya

ಉಜಿರೆಯಲ್ಲಿ ರಾಷ್ಟ್ರಪತಿಗಳ ಹೆಸರಿನಲ್ಲಿ 6.20 ಎಕ್ರೆ ಜಮೀನು: ಸರ್ಕಲ್‌ನಿಂದ ಬೆಳಾಲು ಕ್ರಾಸ್ ತನಕ ವಿಸ್ತಾರ-ದಿಶಾಂಕ್ ಆ್ಯಪ್‌ನಲ್ಲಿ ಪತ್ತೆ

Suddi Udaya
error: Content is protected !!