September 6, 2026
ತಾಲೂಕು ಸುದ್ದಿಬೆಳ್ತಂಗಡಿ

ನ.11-13: ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಕೌಶಲ್ಯ ಜ್ಞಾನದ ಉಚಿತ ತರಬೇತಿ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣ ಹಾಗೂ ರಫ್ತು ನಿಗಮ (state Agriculture Produce Processing and Export Corporation Limited ) ಕೇಂದ್ರ ಸರ್ಕಾರದ ಆಹಾರ ಸಂಸ್ಕರಣ ಮಂತ್ರಾಲಯ ಹಾಗೂ KAPPEC ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ಸೂಚನೆಯಂತೆ PMFME ಯೋಜನೆ ಅಡಿ ಸಾಲ ಮಂಜೂರಾತಿ ಆಗಿರುವವರು, ಅರ್ಜಿ ಸಲ್ಲಿಕೆಯಾಗಿ ಬ್ಯಾಂಕಿನಲ್ಲಿ ಪರಿಶೀಲನೆಯಲ್ಲಿರುವವರು ಮತ್ತು ಅರ್ಜಿ ತಿರಸ್ಕೃತವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ಅಗತ್ಯವಾದ ಕೌಶಲ್ಯ ಮತ್ತು ಜ್ಞಾನವನ್ನು ನೀಡುವ ಮೂರು ದಿನಗಳ ಉಚಿತ ತರಬೇತಿಯನ್ನು ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿ ಇಲ್ಲಿ ನ.11 ರಿಂದ 13 ರವರೆಗೆ ಆಯೋಜಿಸಲಾಗಿದೆ.

ತರಬೇತಿಯಲ್ಲಿ ಪಿಎಂಎಫ್ ಎಂಇ ಯೋಜನೆಯ ಫಲಾನುಭವಿಗಳು ಭಾಗವಹಿಸಲು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರ ದೂರವಾಣಿ ಸಂಖ್ಯೆ 8277931067 ಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದಾಗಿದೆ. ಮೊದಲು ನೋಂದಣಿ ಮಾಡಿಕೊಂಡ 30 ಜನರಿಗೆ ಮೊದಲನೇ ಬ್ಯಾಚ್ ನಲ್ಲಿ ತರಬೇತಿ ಪ್ರಾರಂಭಿಸಿ, ನಂತರ ನೋಂದಣಿ ಮಾಡಿಕೊಂಡವರಿಗೆ ಮುಂದಿನ ಬ್ಯಾಚ್ ನಲ್ಲಿ ತರಬೇತಿಯನ್ನು ನೀಡಲಾಗುವುದು. ನೋಂದಣಿ ಮಾಡಿಸಿಕೊಂಡ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯೊಂದಿಗೆ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿ ಇಲ್ಲಿ ತರಬೇತಿಗಾಗಿ ಪೂರ್ವಾಹ್ನ 10.30ಕ್ಕೆ ಭಾಗವಹಿಸಲು ತಿಳಿಸಲಾಗಿದೆ.

Related posts

ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ವೇಣೂರು ಪ್ರಖಂಡ, ಹಿಂದೂ ಹೃದಯ ಸಂಗಮ ಸಮಿತಿ ಆಶ್ರಯದಲ್ಲಿ ಅಳದಂಗಡಿಯಲ್ಲಿ ಬೃಹತ್ ಹಿಂದೂ ಹೃದಯ ಸಂಗಮ ಕಾರ್ಯಕ್ರಮ, ವೈಭವದ ಶೋಭಾಯಾತ್ರೆ, ಕುಣಿತಾ ಭಜನೆ

Suddi Udaya

ನಾವೂರು ಬಡೆಕ್ಕಾವು ಗುತ್ತುವಿನಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ವೇತನ ಮತ್ತು ಪುಸ್ತಕ ವಿತರಣೆ

Suddi Udaya

ಪ್ರಸಿದ್ಧ ಗುಜರಾತ್ ಉದ್ಯಮಿ ಶಶಿಧ‌ರ್ ಶೆಟ್ಟಿ ನವಶಕ್ತಿ ಯವರಿಗೆ ಮಾತೃ ವಿಯೋಗ

Suddi Udaya

ಶ್ರೀ ಕೊಡಮಣಿತ್ತಾಯ ದೈವಸ್ಥಾನ ಅರಮಲೆಬೆಟ್ಟ ಕ್ಷೇತ್ರದಲ್ಲಿ ಮಕರ ಸಂಕ್ರಮಣ ಪೂಜೆ: ಫೆ.9 ರಿಂದ 12 ರವರೆಗೆ ನಡೆಯುವ ಬ್ರಹ್ಮಕುಂಭಾಭಿಷೇಕದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ತಣ್ಣೀರುಪಂತ ಸುಗಮ ಸಂಜೀವಿನಿ ಹಾಗೂ ಬಾರ್ಯ ಕನಸು ಸಂಜೀವಿನಿ ಮಹಿಳಾ ಒಕ್ಕೂಟದಿಂದ ಸಮಗ್ರ ಕೃಷಿ ಚಟುವಟಿಕೆಯ ಮಾಹಿತಿ ಕಾರ್ಯಾಗಾರ

Suddi Udaya

ಜಾಗತಿಕ ಸೀರೋ ಮಲಬಾರ್ ಧರ್ಮ ಸಂಸದ್ ಗೆ ಪಾಲಾದಲ್ಲಿ ಸಮಾಪ್ತಿ: ಬೆಳ್ತಂಗಡಿ ಧರ್ಮ ಪ್ರಾಂತ್ಯ ಭಾಗಿ

Suddi Udaya
error: Content is protected !!