September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಹೊಸಂಗಡಿ: ಮೀಟರ್ ಅಲಸಂದೆ ಅರ್ಕ ಮಂಗಳ ತಳಿಯ ಬಗ್ಗೆ ತರಬೇತಿ ಕಾರ್ಯಕ್ರಮ

ಹೊಸಂಗಡಿ: ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು ಇವರ ಆಶ್ರಯದಲ್ಲಿ, ಮುಂಚೂಣಿ ಪ್ರಾತ್ಯಕ್ಷಿಕೆ 2023-24 ಕಾರ್ಯಕ್ರಮದಡಿಯಲ್ಲಿ ವಿಜಯ ಗ್ರಾಮ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಗ್ರಾಮ ಸಮಿತಿ, ಹೊಸಂಗಡಿ ಮತ್ತು ಫ್ರೆಂಡ್ಸ್ ಕ್ಲಬ್ ಹೊಸಂಗಡಿ ಇವರ ಸಹಭಾಗಿತ್ವದೊಂದಿಗೆ, ಬಡಕೋಡಿ ಗ್ರಾಮ ಕಾಜೊಟ್ಟು ಶುಭಾನಂದ ಇವರ ಮನೆ ವಠಾರದಲ್ಲಿ ಅಧಿಕ ಇಳುವರಿ ಕೊಡುವ ಮೀಟರ್ ಅಲಸಂದೆ ಅರ್ಕ ಮಂಗಳ ತಳಿಯ ಪರಿಚಯ ಕಾರ್ಯಕ್ರಮ ಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿಗಳಾದ ಡಾ. ರಶ್ಮಿ. ಆರ್.ರವರು ಭಾಗವಹಿಸಿ, ಅಧಿಕ ಇಳುವರಿ ಕೊಡುವ ಮೀಟರ್ ಅಲಸಂದೆ ಅರ್ಕ ಮಂಗಲ ತಳಿಯ ಪರಿಚಯ ಹಾಗೂ ಅದರ ಇಳುವರಿ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.


ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿಗಳಾದ ಡಾ.ಕೇದಾರನಾಥ ಇವರು ಅಲಸಂಡೆ ಗಿಡಗಳಿಗೆ ರೋಗ ಹರಡುವಿಕೆ, ಕೀಟನಾಶಕಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಕ್ಲಬ್ ಹೊಸಂಗಡಿ ಇದರ ಅಧ್ಯಕ್ಷರಾದ ಶ್ರೀಪತಿ ಉಪಧ್ಯಾಯ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕರಾದ ವಿಜಯ ಗ್ರಾಮ ಅಭಿವೃದ್ಧಿ ಪ್ರತಿಷ್ಠಾನ ( ರಿ) ಮಂಗಳೂರು, ಗ್ರಾಮ ಸಮಿತಿ ಹೊಸಂಗಡಿ ಇದರ ಅಧ್ಯಕ್ಷರಾದ ಹರಿಪ್ರಸಾದ್. ಪಿ. ಇವರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಒಟ್ಟು 25 ರೈತರು ಭಾಗವಹಿಸಿದ್ದರು ಹಾಗೂ ಆಯ್ದ 10 ರೈತರಿಗೆ ಅಲಸಂಡೆ ಬೀಜ ಮತ್ತು ಕೃಷಿ ಪರಿಕರಗಳನ್ನು ವಿತರಿಸಲಾಯಿತು.

Related posts

ಡಾ. ಕುಮಾರ ಹೆಗ್ಡೆ ರವರಿಗೆ ಪ್ರತಿಷ್ಠಿತ ಜೇಸಿಯ ಉದ್ಯೋಗ ರತ್ನ ಪ್ರಶಸ್ತಿ

Suddi Udaya

ಬೆಳಾಲಿನಲ್ಲಿ ಯಾಂತ್ರಿಕೃತವಾಗಿ ಭತ್ತದ ಬೇಸಾಯ “ಯಂತ್ರಶ್ರೀ” ತರಬೇತಿ

Suddi Udaya

ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ್‍ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

Suddi Udaya

ಸೌತಡ್ಕ ಸಂರಕ್ಷಣಾ ಸಮಿತಿ ನೂತನ ಅಧ್ಯಕ್ಷರಾಗಿ ಪ್ರಶಾಂತ ರೈ ಅರಂತಬೈಲು ಗೋಳಿತೊಟ್ಟು ಆಯ್ಕೆ

Suddi Udaya

ಬೆಳ್ತಂಗಡಿ ಸಂಜೀವಿನಿ ಸಂಸ್ಥೆಯಿಂದ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

Suddi Udaya

ಬೆಳ್ತಂಗಡಿ ಶ್ರೀ ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದ ಜಾತ್ರೋತ್ಸವ

Suddi Udaya
error: Content is protected !!