September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ-ಪೆರಿಯಶಾಂತಿ ಸ್ಪರ್ ರಸ್ತೆಗೆ ಶೀಘ್ರವೇ ಶಿಲಾನ್ಯಾಸ: ಕುಪ್ಪೆಟ್ಟಿ-ಉಪ್ಪಿನಂಗಡಿ ರಸ್ತೆ ದುರಸ್ತಿಗೆ 7 ಬಾರಿ ಸರಕಾರಕ್ಕೆ ಮನವಿ: ಶಾಸಕ ಹರೀಶ್ ಪೂಂಜ ಪತ್ರಿಕಾಗೋಷ್ಠಿ

ಬೆಳ್ತಂಗಡಿ: ಉಜಿರೆ-ಪೆರಿಯಶಾಂತಿ ಸ್ಪರ್ ರಸ್ತೆಗೆ 616 ಕೋ.ರೂ. ಅನುದಾನ ಬಂದಿದೆ. ಸಂಸದರ ನೇತೃತ್ವದಲ್ಲಿ ಹತ್ತು ದಿನಗಳಲ್ಲಿ ಶಿಲಾನ್ಯಾಸ ನೆರವೇರಲಿದೆ. ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ ವೇಗವಾಗಿ ನೆರವೇರುತ್ತಿದೆ ಎಂದರು. ಕಳೆಂಜದಲ್ಲಿ ಈ ಹಿಂದೆ 309 ಸರ್ವೇ ಸಂಖ್ಯೆಯನ್ನು ಕಂದಾಯ ಅರಣ್ಯ ಇಲಾಖೆ, ಗ್ರಾಮಸ್ಥರು ಹಾಗೂ ಖಾಸಗಿ ಸರ್ವೇದಾರರ ಮೂಲಕ ಶೀಘ್ರವೇ ಸರ್ವೇ ಕಾರ್ಯ ನಡೆಯಲಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ನ.12 ರಂದು ಉಜಿರೆ ಓಷಿಯನ್ ಪರ್ಲ್ ಹೋಟೆಲ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಉಪ್ಪಿನಂಗಡಿ ರಸ್ತೆ ದುರಸ್ತಿಗೆ ಸುಮಾರು 7 ಬಾರಿ ಸರಕಾರಕ್ಕೆ ಮನವಿ ಮಾಡಿದ್ದೇನೆ. ಆದರೆ ಅನುದಾನ ಒದಗಿಸಿಲ್ಲ. ಸರಕಾರ ನನಗೆ ನೀಡಿರುವ 12 ಕೋ.ರೂ. ಎಸ್.ಎಚ್.ಡಿ.ಪಿ. ಅನುದಾನವನ್ನು ಉಪ್ಪಿನಂಗಡಿ ರಸ್ತೆಗೆ ಮೀಸಲಿರಿಸಿದ್ದೇನೆ. ಸರಕಾರ ಟೆಂಡರ್ ಕರೆದಾಗ ರಸ್ತೆ ಸರಿಪಡಿಸುವ ಭರವಸೆ ನೀಡುತ್ತೇನೆ. ಬೆಳ್ತಂಗಡಿ ಪ.ಪಂ. ಸಂಬಂಧಿಸಿದಂತೆ ಡಾ.ವೀರೇಂದ್ರ ಹೆಗ್ಗಡೆಯವರು ರಾಜ್ಯಸಭಾ ನಿಧಿಯಿಂದ 2 ಕೋ.ರೂ. ಅನುದಾನವನ್ನು ಹುಣ್ಸೆಕಟ್ಟೆ ಮಲ್ಲೊಟ್ಟು ರಸ್ತೆಗೆ ನೀಡಿದ್ದಾರೆ. ಈ ಮೂಲಕ ಅಭಿವೃದ್ಧಿ ನಡೆಸಲಾಗುವುದು ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ ಹಾಗೂ ಪ.ಪಂ. ಅಧ್ಯಕ್ಷ ಜಯಾನಂದ ಗೌಡ ಉಜಿರೆ ಗ್ರಾ.ಪಂ. ಅಧ್ಯಕ್ಷೆ ಉಷಾ ಕಾರಂತ್ ಉಪಾಧ್ಯಕ್ಷ ರವಿ ಬರಮೇಲು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನಲ್ಲಿ 79 ನೇ ಸ್ವಾತಂತ್ರೋತ್ಸವ ಆಚರಣೆ

Suddi Udaya

ಪುಂಜಾಲಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್, ಮಂಗಳೂರು, ಇದರ ನಡುವೆ ಒಡಂಬಡಿಕೆ ಒಪ್ಪಂದ

Suddi Udaya

ಭಾರಿ ಗಾಳಿ ಮಳೆ: ಪಿಲ್ಯ ಗೋಳಿಕಟ್ಟೆ ಬಳಿ ರಸ್ತೆಗೆ ಬಿದ್ದ ಮರ: ವಿದ್ಯುತ್ ಕಂಬಕ್ಕೆ ಹಾನಿ

Suddi Udaya

ಹೊಸ್ತೋಟ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

Suddi Udaya

ತಾಲೂಕು ಮಟ್ಟದ ಕಂಠಪಾಠ ಸ್ಪರ್ಧೆ: ಕುಕ್ಕೇಡಿ ಬುಳೆಕ್ಕರ ಶಾಲೆಯ ವಿದ್ಯಾರ್ಥಿ ಪ್ರಥ್ವಿ ವಿ ಎಸ್ ಪ್ರಥಮ ಸ್ಥಾನ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಯಲ್ಲಿ ವರ್ಷ ಕಾಮತ್ ರಿಂದ ಟೆಮ್ ದಿ ಟೈಮ್ ತರಬೇತಿ ಕಾರ್ಯಾಗಾರ

Suddi Udaya
error: Content is protected !!