38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಾರ್ಯ ಪ್ಯಾಕ್ಸ್ ಅಧ್ಯಕ್ಷರಾಗಿ ಸೇಸಪ್ಪ ಸಾಲಿಯಾನ್, ಉಪಾಧ್ಯಕ್ಷರಾಗಿ ಮೋಹನ್ ಗೌಡ ಅಜಿರ ಆಯ್ಕೆ

ಬಾರ್ಯ: ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು. ಇದೀಗ ಮುಂದಿನ ಎರಡುವರೆ ವರ್ಷಗಳ ಕಾಲ ಆಡಳಿತ ಮಂಡಳಿ ಅಧ್ಯಕ್ಷರಾಗಿ ಸೇಸಪ್ಪ ಸಾಲಿಯಾನ್, ಉಪಾಧ್ಯಕ್ಷರಾಗಿ ಮೋಹನ್ ಗೌಡ ಅಜಿರ ಅವಿರೋಧವಾಗಿ ನ.14 ರಂದು ಆಯ್ಕೆಯಾದರು.

ನಿರ್ದೇಶಕರಾಗಿ ಪ್ರಸನ್ನ ಗೌಡ ಎನ್, ಪ್ರವೀಣ ರೈ ಪಿ., ಪ್ರಶಾಂತ್ ಪೈ, ಚಂದ್ರಶೇಖರ್ ಕುಂಡಡ್ಕ, ಹರ್ಷಿತ್ ಪೂಜಾರಿ ಕಲಾಯ, ರಾಜೇಶ್ ರೈ ಹೆನ್ನಡ್ಕ, ಸವಿತಾ ವೆಂಕಟೇಶ್, ಹೇಮಾವತಿ ಸುರೇಶ್ ಹೇರಾಜೆ, ಶಿವಾರಮ್ ಕೆಳಗಿನಂಗಡಿ ಹಾಗೂ ಸುರೇಶ್ ಸುಣ್ಣಾಜೆ ಆಯ್ಕೆಯಾಗಿದ್ದಾರೆ.

ಸಿಡಿಒ ಪ್ರತಿಮಾ ಹಾಗೂ ಸಹಾಯಕ ಚುನಾವಣಾಧಿಕಾರಿ ಸತೀಶ್ ಟಿ.ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿದರು. ಬ್ಯಾಂಕಿನ ಸಿಬ್ಬಂದಿಗಳು ಸಹಕರಿಸಿದರು. ಚುನಾವಣಾ ಉಸ್ತುವಾರಿ ವೇಣೂರು ಪ್ಯಾಕ್ಸ್ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ., ಕಣಿಯೂರು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಮಹೇಶ್ ಕೋಟ್ಯಾನ್ ಜೆಂಕ್ಯಾರ್ ಸಹಿತ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

Related posts

ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಉಜಿರೆಯ ಸುಶ್ಮಿತಾ ರಾವ್ ಉನ್ನತ ಶ್ರೇಣಿ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ-200 ರಲ್ಲಿ ಸ್ವೀಪ್ ಸಮಿತಿಯಿಂದ ತಾಲೂಕಿನ 241 ಬಿಎಲ್ ಒ ಗಳಿಗೆ ತರಬೇತಿ

Suddi Udaya

ಸೆ.6: ಕೊಕ್ಕಡದಲ್ಲಿ “ಸ್ವಾಮಿ ಪ್ರಸಾದ್ ಪ್ಯಾರಡೈಸ್” ವಸತಿ ಗೃಹ ಶುಭಾರಂಭ

Suddi Udaya

ವಲಯ ಮಟ್ಟದ ಖೋ ಖೋ ಪಂದ್ಯಾಟ: ಕರಂಬಾರು ಶಾಲೆ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಕಣಿಯೂರು, ಪದ್ಮುಂಜ ಪರಿಸರದಲ್ಲಿ ಆನೆ ದಾಳಿ : ತೋಟಕ್ಕೆ ನುಗ್ಗಿ ಬಾಳೆ ಕೃಷಿಗೆ ಹಾನಿ

Suddi Udaya

ಮಚ್ಚಿನ : ಕಲಾಯಿ ರಸ್ತೆ ಪುಂಚಪಾದೆಯಲ್ಲಿ ವಾರಿಸುದಾರರಿಲ್ಲದೆ ಪತ್ತೆಯಾದ ಎರಡು ಬೈಕ್ ಗಳು

Suddi Udaya
error: Content is protected !!