26.5 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ, ಉಜಿರೆ ಸಾನಿದ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

ಬೆಳ್ತಂಗಡಿ : ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ವತಿಯಿಂದ, ಉಜಿರೆಯ ಸಾನಿದ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.

ಲಯನ್ಸ್ ಕ್ಲಬ್ ಅಧ್ಯಕ್ಷ ಮುರಳಿ ಬಲಿಪ ದೀಪ ಬೆಳಗಿಸಿ ಮಾತನಾಡಿ ನೀತಿ ಕಥೆ ಹೇಳಿ ಮಕ್ಕಳನ್ನು ಸಂತೋಷ ಪಡಿಸಿದರು. ವೇದಿಕೆಯ ಮೇಲೆ ಲಯನ್ ಜಯಂತ ಶೆಟ್ಟಿ, ಲಯನ್ ರವೀಂದ್ರ ಶೆಟ್ಟಿ, ಲಯನ್ ರಾಜು ಶೆಟ್ಟಿ, ಲೆಯೋ ಅಧ್ಯಕ್ಷೆ ಲಿಯೋ ಭಾಷಿಣಿ, ಸಾನಿಧ್ಯ ತರಬೇತಿ ಕೇಂದ್ರದ ಮೇಲ್ವಿಚಾರಿಣಿ ಮಿಸ್ ಮಲ್ಲಿಕಾ ಮೇಡಂ ಹಾಗೂ ಪ್ರೇಮರಾಜ್ ರೋಷನ್ ಸಿಕ್ವೆರ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಅಭಿಲಾಶ್ ಮತ್ತು ಪ್ರೇಮರಾಜ ರೋಷನ್ ನಿರೂಪಿಸಿದರು. ಸಭೆಯಲ್ಲಿ ಲಯನ್ಸ್ ಸದಸ್ಯರಾದ ಲಯನ್ ಗೋಪಾಲಕೃಷ್ಣ ಕಾಂಚೋಡು, ಲಯನ್ ನಾಣ್ಯಪ್ಪ ನಾಯ್ಕ್, ಮತ್ತು ಲಯನ್ ಸುಂದರಿ ನಾಣ್ಯಪ್ಪ ಭಾಗವಹಿಸಿದ್ದರು. ವಂದನಾರ್ಪಣೆಯನ್ನು ಶಾಲೆಯ ವಿಶೇಷ ಅಧ್ಯಾಪಕಿಯಾದ ಮಿಸ್ ಅಕ್ಷತಾ ಕೆ ನಿರ್ವಹಿಸಿದರು.

Related posts

ಪುಂಜಾಲಕಟ್ಟೆ ಸ.ಪ್ರ.ದ. ಕಾಲೇಜಿನಲ್ಲಿ ಬೆಂಕಿ ರಹಿತ ಅಡುಗೆ ಸ್ಪರ್ಧೆ

Suddi Udaya

ಲಾಯಿಲ: ಸರ್ಕಾರಿ ಜಾಗದಲ್ಲಿ ಅನಧಿಕೃತ ಕಟ್ಟಡ ತೆರವಿಗೆ ತಹಶೀಲ್ದಾರ್ ಆದೇಶ; ಕಟ್ಟಡಕ್ಕೆ ನೋಟೀಸ್ ಅಂಟಿಸಿದ ಅಧಿಕಾರಿಗಳು

Suddi Udaya

ಪೆರಿಂಜೆ: ಪರಾರಿ ಮನೆ ಮುತ್ತು ನಿಧನ

Suddi Udaya

ಮಹೇಶ್‌ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Suddi Udaya

ಪುಂಜಾಲಕಟ್ಟೆ- ಪುರಿಯ ಹದಗೆಟ್ಟ ರಸ್ತೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಭೇಟಿ

Suddi Udaya

ಅನನ್ಯ ಭಟ್ ನಾಪತ್ತೆ ಪ್ರಕರಣ; ಸುಜಾತ ಭಟ್ ಗೆ ಬಿಗ್ ರಿಲೀಫ್

Suddi Udaya
error: Content is protected !!