ಉರುವಾಲು: ಕಾರಿಂಜ ಸ. ಕಿ. ಪ್ರಾ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ಪೋಷಕ-ಶಿಕ್ಷಕರ ಸಭೆಯನ್ನು ಶಾಲಾ ಅಧ್ಯಕ್ಷ ಜಗನ್ನಾಥ ರೈ ಇವರ ಉಪಸ್ಥಿತಿಯಲ್ಲಿ ನಡೆಸಲಾಯಿತು.

ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಆಟೋಟ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಾಡಲಾಯಿತು. ಶಾಲೆಯ ದಾನಿಯಾದ ವಿನಯಕುಮಾರ್ ಇವರನ್ನು ಶಾಲೆಯ ವತಿಯಿಂದ ಗೌರವಿಸಲಾಯಿತು. ಮಕ್ಕಳ ಹಕ್ಕುಗಳು, ಅದರ ರಕ್ಷಣೆ ಬಗ್ಗೆ ಮಾಹಿತಿ ನೀಡಲಾಯಿತು.
ನಿವೃತ್ತ ಯೋಧರಾದ ಜೆ.ಕೆ ಪೂಜಾರಿ ಇಳಂತಿಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶಾಲಾ ಉಪಾಧ್ಯಕ್ಷ ನುಸೈಬ, ಮಾಜಿ ಅಧ್ಯಕ್ಷ ಓಬಯ್ಯ ಪೂಜಾರಿ ಕಾರಿಂಜ , ಅಂಗನವಾಡಿ ಕಾರ್ಯಕರ್ತೆ ಶಶಿಪ್ರಭಾ, ಮಕ್ಕಳ ಪೋಷಕರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.
ಮುಖ್ಯಗುರುಗಳಾದ ಗಿರಿಜಾ ಎನ್ ಸ್ವಾಗತಿಸಿ, ಸಹಶಿಕ್ಷಕರಾದ ಪರಮೇಶ್ವರ ಎಸ್ ನಿರೂಪಿಸಿದರು.











